MALENADUTODAY.COM| DAVANAGERE NEWS
ನೆರೆಯ ದಾವಣಗೆರೆಯಲ್ಲಿ ನಡೆದ ಕ್ರೈಂಕಥೆಯೊಂದು ತೀವ್ರ ಕುತೂಹಲ ಹಾಗೂ ಗಂಭೀರವಾಗಿ ಗಮನಸೆಳೆಯುತ್ತಿದೆ. ಈ ನಿಟ್ಟಿನಲ್ಲಿ ಅಲ್ಲಿ ನಡೆದಿದ್ದನ್ನ ಮಲೆನಾಡು ಟುಡೆ ವರದಿ ಪ್ರಕಟಿಸ್ತಿದೆ. ಅಂದಹಾಗೆ ದಾವಣಗೆರೆಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ನಡೆದಿದ್ದ ಆಕ್ಸಿಡೆಂಟ್ ಪ್ರಕರಣವೊಂದು, ಉದ್ದೇಶಪೂರ್ವಕ ಕೃತ್ಯ ಎಂದು ಪೊಲೀಸರು ಬಯಲು ಮಾಡಿದ್ದಾರೆ. ಅಷ್ಟೆಅಲ್ಲದೆ, ಆ ಘಟನೆಗೂ ಮೊದಲು ನಡೆದ ಕುಕೃತ್ಯವೊಂದು ಸಹ ಬಯಲಾಗಿದೆ. ಇಷ್ಟಕ್ಕೂ ನಡೆದಿದ್ದು ಏನು ಎಂಬುದರ ವಿವರ ನೀವೆ ಓದಿ.
ನಡೆದಿದ್ದೇನು?
ರಾಷ್ಟ್ರೀಯ ಹೆದ್ದಾರಿ 48ರ ರಸ್ತೆಯಲ್ಲಿ ಅಪಘಾತವೊಂದು ಸಂಭವಿಸಿತ್ತು. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಆನಗೋಡು ಗ್ರಾಮ ಸಮೀಪದ ಎನ್. ಹೆಚ್ 48ರಲ್ಲಿ ಕಳೆದ ಫೆಬ್ರವರಿ 11ರಂದು ಈ ಘಟನೆ ಸಂಭವಿಸಿತ್ತು. ಬೆಳಗ್ಗಿನ ಜಾವ ಜಾತ್ರೆ ಮುಗಿಸಿ ರಾಮನಗರದ ಆರು ಯುವಕರು ದಾವಣಗೆರೆಗೆ ವಾಪಸ್ ಆಗುತ್ತಿದ್ದ ವೇಳೆ ಅವರ ಬೈಕ್ಗೆ ಲಾರಿ ಡಿಕ್ಕಿ ಹೊಡೆದಿತ್ತು. ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದರು. ಪರಶುರಾಮ, ಶಿವುಕುಮಾರ ಮತ್ತು ಸಂದೇಶ ಸ್ಥಳದಲ್ಲಿ ಸಾವನ್ನಪ್ಪಿದ್ದರು. ಈ ಮಧ್ಯೆ ಗಾಯಾಳುಗಳನ್ನು ವಿಚಾರಿಸಿದ ಪೊಲೀಸರಿಗೆ ಬೇರೆಯದ್ದೆ ಸತ್ಯ ಗೊತ್ತಾಗಿತ್ತು. ಅದು ಆಕ್ಸಿಡೆಂಟ್ ಅಲ್ಲ ಉದ್ದೇಶಪೂರ್ವಕ ಕೃತ್ಯ ಎಂಬುದು ಬೆಳಕಿಗೆ ಬಂದಿತ್ತು.
ಗಾಯಾಳುಗಳು ನೀಡಿದ ಮಾಹಿತಿಯಂತೆ, ಪೊಲೀಸರು ಉತ್ತರಪ್ರದೇಶ ಮೂಲಕ ಚಾಲಕ ಬೋಲೆ ಯಾದವ್ನನ್ನ ಅರೆಸ್ಟ್ ಮಾಡಿ ತಮಿಳುನಾಡಿನಲ್ಲಿ ಲಾರಿಯನ್ನು ಸಹ ವಶಕ್ಕೆ ಪಡೆದಿದ್ದಾರೆ. ಆತನನ್ನು ಬಾಯ್ಬಿಡಿಸಿದ ಪೊಲೀಸರಿಗೆ ಆಕ್ಸಿಡೆಂಟ್ಗೂ ಮೊದಲು ನಡೆದ ಘಟನೆಯು ಸ್ಪಷ್ಟವಾಗಿದೆ. ಇಷ್ಟಕ್ಕೂ ಅದೊಂದು ದರೋಡೆ ಕೇಸ್ ಆಗಿತ್ತು. ಹೌದು, ಮೃತ ಯುವಕರು ಹಾಗೂ ಇತರೇ ಮೂವರು ದರೋಡೆಗೆ ಯತ್ನಿಸಿದ್ದರು, ಜಾತ್ರೆಗೆ ಹೋದವರು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಲಾರಿಯೊಂದನ್ನ ಗಮನಿಸಿ ಅಲ್ಲಿಗೆ ನುಗ್ಗಿದ್ದಾರೆ. ಅಲ್ಲದೆ ಚಾಲಕನಿಗೆ ಹಲ್ಲೆ ಮಾಡಿ ಆತನ ಬಳಿಯಿದ್ದ ಮೊಬೈಲ್ ಹಾಗೂ 8 ಸಾವಿರ ರೂಪಾಯಿಯನ್ನು ಕಿತ್ತುಕೊಂಡು ಮನಸ್ಸೋ ಇಚ್ಚೆ ಹಲ್ಲೆ ಮಾಡಿ ಅಲ್ಲಿಂದ ತೆರಳಿದ್ದಾರೆ. ಇದರಿಂದ ಇನ್ನಷ್ಟು ಸಿಟ್ಟಿಗೆದ್ದ ಚಾಲಕ, ತನ್ನ ಲಾರಿ ಏರಿ ಆರೋಪಿಗಳು ಸಾಗುತ್ತಿದ್ದ ಬೈಕ್ಗಳನ್ನು ಹಿಂಬಾಲಿಸಿದ್ದಾನೆ. ಅಷ್ಟೆಅಲ್ಲದೆ ಎರಡು ಬೈಕ್ಗಳಿಗೆ ಹಿಂದಿನ ಸ್ಪೀಡಾಗಿ ಬಂದು ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಒಂದು ಬೈಕ್ ರಸ್ತೆ ಬದಿಗೆ ಬಿದ್ದರೆ, ಇನ್ನೊಂದು ಬೈಕ್ ರಸ್ತೆ ಮಧ್ಯೆ ಬಿದ್ದಿದೆ. ಇಷ್ಟಕ್ಕೆ ಸುಮ್ಮನಾಗರ ಲಾರಿ ಚಾಲಕ, ಲಾರಿಯನ್ನು ರಿವರ್ಸ್ ತೆಗೆದುಕೊಂಡು ರಸ್ತೆ ಮೇಲೆ ಬಿದ್ದವರ ಮೇಲೆ ಹತ್ತಿಸಿದ್ದಾನೆ. ಸದ್ಯ ಈ ಪ್ರಕರಣವನ್ನು ಭೇದಿಸಿದ ಪೊಲೀಸರು ಗಾಯಾಳುಗಳ ವಿರುದ್ಧ ದರೋಡೆ ಕೇಸ್ ಹಾಕಿದ್ದಾರೆ. ಲಾರಿ ಚಾಲಕನ ವಿರುದ್ಧ ಕೊಲೆ ಕೇಸ್ ದರ್ಜ್ ಮಾಡಿದ್ದಾರೆ.
#ದಾವಣಗೆರೆ ಗ್ರಾಮಾಂತರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ, ಇತ್ತೀಚಿಗೆ ದಾವಣಗೆರೆ ಗ್ರಾಮಾಂತರ ಠಾಣೆ ವ್ಯಾಪ್ತಿಯ ರಾಷ್ಟೀಯ ಹೆದ್ದಾರಿಯಲ್ಲಿ ನಡೆದ #ದರೋಡೆ ಹಾಗೂ #ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 04ಜನರನ್ನು ಬಂಧಿಸಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ@RyshyanthIPS @112davanagere pic.twitter.com/wProybsoQA
— Davanagere District Police (@SpDavanagere) February 16, 2023
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com





