ನ್ಯೂಟ್ರಲ್ ಆದ ಗೇರ್ , ಸೀದಾ ಹೊಂಡಕ್ಕೆ ಇಳಿದ ಟೆಂಪೋ! ಮುಳ್ಳಯ್ಯನಗಿರಿಯಲ್ಲಿ ಜಸ್ಟ್​ ಮಿಸ್

ಹಂಚಿಕೊಳ್ಳಿ
WhatsApp Facebook X Telegram
Tempo Traveller end up in a gorge

ಮಲೆನಾಡು ಟುಡೆ ಸುದ್ದಿ / ಚಿಕ್ಕಮಗಳೂರು / ಪ್ರಸಿದ್ಧ ಪ್ರವಾಸಿ ತಾಣ ಮುಳ್ಳಯ್ಯನಗಿರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಟ್ರಾವೆಲರ್ ವಾಹನವೊಂದು ಕಂದಕಕ್ಕೆ ಇಳಿದ ಘಟನೆ ವರದಿಯಾಗಿದೆ.

ವಾಹನದ ಹಿಂದಿನ ಸೀಟಿನಲ್ಲಿದ್ದ ಪ್ರಯಾಣಿಕರೊಬ್ಬರ ಚಪ್ಪಲಿಯೊಂದು ಜಾರಿ ಚಾಲಕನ ಕಾಲಿನ ಬಳಿ ಬಂದಿದ್ದು, ಅದನ್ನು ತೆಗೆಯಲು ಹೋದಾಗ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ವಾಹನದಲ್ಲಿದ್ದ ಎಲ್ಲ 13 ಮಂದಿ ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

ಮುಳ್ಳಯ್ಯನಗಿರಿಯಲ್ಲಿ ಜಸ್ಟ್​ ಮಿಸ್

ಬೆಂಗಳೂರಿನಿಂದ ಪ್ರವಾಸಕ್ಕಾಗಿ ಆಗಮಿಸಿದ್ದ ತಂಡ ಮುಳ್ಳಯ್ಯನಗಿರಿ ವೀಕ್ಷಣೆ ಮುಗಿಸಿ ಹಿಂದಿರುಗುತ್ತಿತ್ತು. ಸೀತಾಳಯ್ಯನಗಿರಿ ಹಾಗೂ ಮಾಣಿಕ್ಯಾಧಾರ ನಡುವಿನ ಕಡಿದಾದ ಇಳಿಜಾರು ರಸ್ತೆಯಲ್ಲಿ ವಾಹನ ಸಾಗುತ್ತಿದ್ದಾಗ, ಹಿಂಭಾಗದಲ್ಲಿ ಕುಳಿತಿದ್ದ ಪ್ರಯಾಣಿಕರ ಚಪ್ಪಲಿಯು ಮುಂದಿನ ಸೀಟಿನತ್ತ ಜಾರಿಬಂದಿದೆ. ಚಲಿಸುತ್ತಿದ್ದ ವಾಹನದಲ್ಲಿ ಈ ಚಪ್ಪಲಿಯು ಬ್ರೇಕ್ ಅಥವಾ ಎಕ್ಸಲೇಟರ್ ಪೆಡಲ್‌ಗಳ ನಡುವೆ ಸಿಲುಕಿಕೊಳ್ಳಬಹುದು ಎಂಬ ಆತಂಕದಿಂದ ಚಾಲಕ ಅದನ್ನು ಕೈಯಿಂದ ತೆಗೆಯಲು ಮುಂದಾಗಿದ್ದಾನೆ.

ಚಾಲಕ ಬಾಗಿ ಚಪ್ಪಲಿ ತೆಗೆಯುವ ಭರದಲ್ಲಿ ವಾಹನದ ಗೇರ್ ಲಿವರ್ ಆಕಸ್ಮಿಕವಾಗಿ ನ್ಯೂಟ್ರಲ್ ಸ್ಥಿತಿಗೆ ಬದಲಾಗಿದೆ. ರಸ್ತೆಯು ತೀವ್ರ ಇಳಿಜಾರಿನಿಂದ ಕೂಡಿದ್ದ ಕಾರಣ ವಾಹನವು ದಿಢೀರನೆ ವೇಗ ಪಡೆದುಕೊಂಡು ಮುಂದಕ್ಕೆ ನುಗ್ಗಿದೆ. ಪರಿಸ್ಥಿತಿಯ ಅರಿವಾಗಿ ಬ್ರೇಕ್ ಹಾಕುವಷ್ಟರಲ್ಲಿ ವಾಹನವು ರಸ್ತೆ ಬದಿಯ ಕಂದಕದತ್ತ ವಾಲಿತ್ತು. ವಾಹನ ಕಂದಕಕ್ಕೆ ಇಳಿಯುತ್ತಿದ್ದಂತೆ ಆತಂಕಗೊಂಡ ಪ್ರಯಾಣಿಕರು ಜೋರಾಗಿ ಕೂಗಿಕೊಂಡಿದ್ದಾರೆ. ಆದರೆ, ಆರಂಭದಲ್ಲಿಯೇ ಟೆಂಪೋ ಟ್ರಾವೆಲರ್ ಮಣ್ಣಿನಲ್ಲಿ ಸಿಲುಕಿ ನಿಂತುಕೊಂಡಿದ್ದರಿಂದ ಸಂಭವಿಸಬಹುದಾಗಿದ್ದ ಭೀಕರ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದಂತಾಗಿದ್ದು, ಎಲ್ಲ 13 ಮಂದಿ ಸುರಕ್ಷಿತವಾಗಿ ಉಳಿದಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor