ಈ ನಾಲ್ವರಿಗೆ ತಲಾ 10 ವರ್ಷ ಶಿಕ್ಷೆಯಾಗಿದ್ದೇಕೆ ಗೊತ್ತಾ? ಇನ್ನೋವಾ ಕಾರು & ಕ್ರೈಂ ನ ಕಥೆ

news article reports a drug bust that took place on December 11, 2021

ಈ ನಾಲ್ವರಿಗೆ ತಲಾ 10 ವರ್ಷ ಶಿಕ್ಷೆಯಾಗಿದ್ದೇಕೆ ಗೊತ್ತಾ? ಇನ್ನೋವಾ ಕಾರು & ಕ್ರೈಂ ನ ಕಥೆ
news article reports

SHIVAMOGGA | MALENADUTODAY NEWS | Jun 17, 2024  ಮಲೆನಾಡು ಟುಡೆ 

ದಿನಾಂಕ: 11-12-2021 ರಂದು ನಡೆದ ಘಟನೆ ಅದು. ಆ ಸಂದರ್ಭದಲ್ಲಿಯೇ ಮಲೆನಾಡು ಟುಡೆ ಮಲೆನಾಡಿಗೆ ಗಾಂಜಾ ಹೇಗೆಲ್ಲಾ ಬರುತ್ತೆ ಎನ್ನುವ ಸುದ್ದಿಯೊಂದನ್ನ ಮಾಡಿತ್ತು. ಅಷ್ಟೊತ್ತಿಗೆ ಶಿವಮೊಗ್ಗ ಪೊಲೀಸ್‌ ಇಲಾಖೆ ಕೂಡ ರಿವರ್ಸ್‌ ಇನ್ಫಾರ್ಮೆಶನ್‌ ಮೂಲಕ ಗಾಂಜಾ ಮಾಫಿಯಾದ ಬುಡಕ್ಕೆ ಕೈ ಹಾಕಿ ಬೇರು ಕಿಳುತ್ತಿತ್ತು. ಆ ಹೊತ್ತಿಗೆ ಬಯಲಾಗಿದ್ದ ದೊಡ್ಡ ಕೇಸ್‌ ಲಕ್ಕಿನಕೊಪ್ಪ ಇನ್ನೋವಾ ರೇಡ್‌. 

ಆಂದ್ರಪ್ರದೇಶದಿಂದ ಶಿವಮೊಗ್ಗ ನಗರದ ಕಡೆಗೆ ಒಂದು ಇನ್ನೋವಾ ಕಾರು ಬರುತ್ತಿತ್ತು. ಅದರ ಬಗ್ಗೆ ಯಾರಿಗೂ ಅನುಮಾನ ಇರಲಿಲ್ಲ. ಕಾರಿನಲ್ಲಿದ್ದವರು ಸಹ ಬಿಂದಾಸ್‌ ಆಗಿ ಬರುತ್ತಿದ್ದರು. ಆದರೆ ಅಂದಿನ ಎಸ್‌ಪಿ ಲಕ್ಷ್ಮೀಪ್ರಸಾದ್‌ ಮಾತ್ರ ಶಿವಮೊಗ್ಗಕ್ಕೆ ಬರುತ್ತಿದ್ದ ಕಾರಿನ ಬೆನ್ನುಬಿದ್ದಿದ್ದರು. ಅಲ್ಲದೆ ಅವರದ್ದೆ ಆದ ಟೀಂ ಅಲರ್ಟ್‌ ಆಗಿ ಇನ್ನೋವಾ ಕಾರು ಶಿವಮೊಗ್ಗ ಜಿಲ್ಲಾ ಗಡಿಯೊಳಗೆ ಬರುವುದನ್ನ ಕಾಯುತ್ತಿತ್ತು. 

ಅಂದು ಎಸ್‌ಪಿ ಟೀಂನಲ್ಲಿದ್ದ  ದೀಪಕ್ ಎಂ ಎಸ್, ಪಿಐ ತುಂಗಾನಗರ ಪೊಲೀಸ್ ಠಾಣೆ ನೇತೃತ್ವದ ಕ್ರೈಂ ಟೀಂ ಲಕ್ಕಿನಕೊಪ್ಪ ಕ್ರಾಸ್ ನ ಹತ್ತಿರ ಬರುತ್ತಿದ್ದ ಇನ್ನೋವಾ ಕಾರನ್ನ ತಡೆದಾಗಲೂ ಆ ಕಾರಿನಲ್ಲಿದ್ದ ಆರೋಪಿಗಳಿಗೆ ಹೆಚ್ಚು ಭಯವಾಗಿರಲಿಲ್ಲ. ಡಾಕ್ಯಮೆಂಟ್‌ ಚೆಕ್‌ ಇರಬೇಕು ಎಂದುಕೊಂಡಿದ್ದರು. ಆದರೆ ಕ್ರೈಂ ಟೀಂ ಕಾರಿನ ಡೋರ್ ಗಳನ್ನ ಪರಿಶೀಲನೆ ಮಾಡಲು ಆರಂಭಿಸಿದಾಗ ಆರೋಪಿಗಳಿಗೆ ಅರಿವಾಗಿತ್ತು ಟ್ರ್ಯಾಪ್‌ ಆಗಿದ್ದೀವಿ ಮುಗಿತು ಕಥೆ ಎನ್ನುವುದು ಅರಿವಿಗೆ ಬಂದಿತ್ತು. 

ಅಂದು ದೀಪಕ್‌ & ಟೀಂ  6,50,000/- ರೂಗಳ 21 ಕೆ.ಜಿ. 315 ಗ್ರಾಂ ತೂಕ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಕಾರ್ ಅನ್ನು ವಶಪಡಿಸಿಕೊಂಡು, : 403/2021 558(c), 20(b), 20(ii) (C)) NDPS ದಾಖಲಿಸಿತ್ತು. ಆ ಬಳಿಕ ಭಾರತಿ, ಬಿ ಹೆಚ್, ಪಿಎಸ್‌ಐ ತುಂಗಾನಗರ ಈ ಸಂಬಂಧ ಕೋರ್ಟ್‌ಗೆ ಚಾರ್ಜ್‌ ಶೀಟ್‌ ಸಲ್ಲಿಸಿದ್ರು. ಅಲ್ಲಿ ಸುರೇಶ್ ಕುಮಾರ್ ಎ, ಎಂ. ಸರ್ಕಾರಿ ಅಭಿಯೋಜಕರು ಪ್ರಕರಣ ಸಂಬಂಧ ವಾದ ಮಂಡಿಸಿದ್ದರು. ಅವರ ವಾದ ಆಲಿಸಿದ  ಪ್ರಧಾನ ಜಿಲಾ, ಮತ್ತು ಸತ್ರ ನ್ಯಾಯಾಲಯದ  ನ್ಯಾಯಾಧಿಶರಾದ  ಮಂಜುನಾಥ್ ನಾಯಕ್ ವಿಚಾರಣೆ ಮುಗಿಸಿ ತೀರ್ಪು ನೀಡಿದ್ದಾರೆ. 

ಆರೋಪಿತರಾದ 1) ದೌಲತ್ @ ಗುಂಡು, 27 ವರ್ಷ, ಇಂದಿರಾನಗರ್, ಶಿವಮೊಗ್ಗ, ಟೌನ್, 2) ಮುಜೀಬ್ @ ಬಸ್ಟ್, 27 ವರ್ಷ, ಇಂದಿರಾನಗರ, ಶಿವಮೊಗ್ಗ ಟೌನ್, 3) ಶೋಹೇಬ್ @ ಚೂಡಿ, 24 ವರ್ಷ, ಕಡೇಕಲ್, ಶಿವಮೊಗ್ಗ ಟೌನ್ ಮತ್ತು 4) ಮಹಮ್ಮದ್ ಜಪುಲಾ, 24 ವರ್ಷ, ಕಡೇಕಲ್ ಶಿವಮೊಗ್ಗ ಟೌನ್, ಇವರುಗಳಿಗೆ 10 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ತಲಾ ರೂ. 1,05,000/- ದಂಡ, ದಂಡ ಕಟ್ಟಲು ವಿಫಲರಾದಲಿ ಹೆಚ್ಚುವರಿ 01 ವರ್ಷ ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. 

news article reports a drug bust that took place on December 11, 2021. Police intercepted a car transporting marijuana from Andhra Pradesh to Shivamogga. The operation, led by SP Lakshmiprasad and a crime team, resulted in the seizure of 21.315 kg of marijuana worth Rs 6,50,000. Four individuals were arrested and charged under the NDPS Act. The case was prosecuted by Suresh Kumar, and the accused were sentenced to 10 years of rigorous imprisonment, a fine of Rs 1,05,000 each, and an additional year of imprisonment if they fail to pay the fine.