Shivamogga | Feb 1, 2024 | Naxal BG Krishnamurthy returned to Kerala’s Thrissur jail ಶಿವಮೊಗ್ಗ ಕೋರ್ಟ್ಗೆ ಇವತ್ತು ಮತ್ತೆ ಪುನಃ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ ಯವರನ್ನ ಹಾಜರುಪಡಿಸಲಾಯ್ತು.
ನಿನ್ನೆ ಸಹ ಶಿವಮೊಗ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದ ಪೊಲೀಸರು ಇವತ್ತು ಆಗುಂಬೆ ಸಮೀಪ ಬಸ್ ಸುಟ್ಟ ಪ್ರಕರಣ ಸಂಬಂಧ ಕೋರ್ಟ್ಗೆ ಬಿ.ಜಿ.ಕೃಷ್ಣಮೂರ್ತಿಯವರನ್ನ ಹಾಜರು ಪಡಿಸಿದರು. ಮೂರನೇ ಕೇಸ್ನಲ್ಲಿ ಕೋರ್ಟ್ನಲ್ಲಿ ಅವರ ಮೇಲೆ ದೋಷಾರೋಪಣೆಯನ್ನ ಮಾಡಲಾಯ್ತು.
ತಮ್ಮ ವಿರುದ್ದದ ಚಾರ್ಜ್ನ್ನ ಬಿ.ಜಿ.ಕೃಷ್ಣಮೂರ್ತಿ ಅಲ್ಲಗಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದುವರಿದ ವಿಚಾರಣೆಯ ಭಾಗವಾಗಿ ಫೆಬ್ರವರಿ 29 ಕ್ಕೆ ವಿಚಾರಣೆ ಮುಂದೂಡಲಾಗಿದೆ. ಸದ್ಯ ಅವರನ್ನ ಕೇರಳದ ತ್ರಿಶೂರ್ ಜೈಲಿಗೆ ನಾಳೆ ಬೆಳಗ್ಗೆ ರವಾನೆ ಮಾಡಲು ಕೋರ್ಟ್ ತಿಳಿಸಿದೆ. ಮುಂದಿನ ವಿಚಾರಣೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ಸಾಧ್ಯತೆ ಇದೆ.
ಇನ್ನೂ ಕೋರ್ಟ್ ವಿಚಾರಣೆ ಬಗ್ಗೆ ಮಾತನಾಡಿದ ಬಿ.ಜಿ.ಕೃಷ್ಣಮೂರ್ತಿ ಪರ ವಕೀಲ ಕೆ.ಪಿ.ಶ್ರೀಪಾಲ್ ನ್ಯಾಯಾಲಯ ಮುಂದಿನ ದಿನಾಂಕ ನೀಡಿದೆ. ಸದ್ಯ ಬಿ.ಜಿ.ಕೃಷ್ಣಮೂರ್ತಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಅವರನ್ನ ನಾಳೆ ಕೇರಳದ ತ್ರಿಶೂರ್ ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.