ಬಿ.ಜಿ.ಕೃಷ್ಣಮೂರ್ತಿ ಒಬ್ಬನ ಮೇಲೆ ಎಷ್ಟು ಕೇಸ್ಗಳಿವೆ ಗೊತ್ತಾ? ವಕೀಲ ಕೆ.ಪಿ. ಶ್ರೀಪಾಲ್ ಹೇಳೋದೇನು?
Do you know how many cases are there against B.G. Krishnamurthy? What does Advocate K.P. Shripal have to say?
Shivamogga | Feb 1, 2024 | ಬಿ.ಜಿ.ಕೃಷ್ಣಮೂರ್ತಿ ನಕ್ಸಲ್ ಮುಖಂಡನಾಗಿ ಭೂಗತವಾಗದೇ ಹೋಗದಿದ್ದರೇ ಆತನ ಕಾರ್ಯಕ್ಷೇತ್ರ ಶಿವಮೊಗ್ಗವೇ ಆಗಿರುತ್ತಿತ್ತು. ಒಳ್ಳೆಯ ಲಾಯರ್ ಆಗಿರುವ ಅವಕಾಶವೂ ಇತ್ತು ಸಾಧ್ಯತೆ ಇತ್ತು. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ನೆಮ್ಮಾರು ಸಮೀಪದ ಬುಕ್ಕಡಿಬೈಲ್ ನಿವಾಸಿ ಬಿ.ಜಿ. ಕೃಷ್ಣ ಮೂರ್ತಿಗೆ ಆರು ಮಂದಿ ಸೋದರಿಯರಿದ್ದಾರೆ. ಶೃಂಗೇರಿ ಕಾಲೇಜಿ ನಲ್ಲಿ ಪದವಿ ಶಿಕ್ಷಣ ಪೂರೈಸಿದ ಬಳಿಕ ಶಿವಮೊಗ್ಗದ ನ್ಯಾಷನಲ್ ಲಾ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಎರಡರಲ್ಲೂ ರ್ಯಾಂಕ್ ಗಳಿಸಿದ್ದ ಬಿಜಿಕೆ ಕೆಲ ಸಮಯ ಪತ್ರಕರ್ತನಾಗಿ ಕೆಲಸ ನಿರ್ವ ಹಿಸಿದ್ದರು.
ಸಾಕೇತ್ ರಾಜನ್
ತುಂಗಾಮೂಲ ಉಳಿಸಿ ಸೇರಿದಂತೆ ಅನೇಕ ಪ್ರಗತಿಪರ ಹೋರಾಟಗಳಲ್ಲಿ ತೊಡಗಿಸಿ ಕೊಂಡಿದ್ದ ಬಿಜಿಕೆ ಬಳಿಕ ಭೂಗತನಾಗಿ ಮಾವೋ ವಾದಿ ನಕ್ಸಲ್ ಸಂಘಟನೆ ಸೇರಿದ್ದರು. ಸಾಕೇತ್ ರಾಜನ್ ಹತ್ಯೆ ಬಳಿಕ ಕರ್ನಾಟಕದಲ್ಲಿ ನಕ್ಸಲ್ ಸಂಘಟನೆಯನ್ನು ಬಿಜಿಕೆ ಮುನಡೆಸಿದ್ದರೆನ್ನಲಾಗಿದೆ.
ಬಿ.ಜಿ.ಕೃಷ್ಣಮೂರ್ತಿ
ವಕೀಲ ಕೆ.ಪಿ.ಶ್ರೀಪಾಲ್ ಹೇಳುವ ಪ್ರಕಾರ, ಬಿ.ಜಿ.ಕೃಷ್ಣಮೂರ್ತಿ ವಿರುದ್ಧ ಸುಮಾರು 62 ಪ್ರಕರಣಗಳಿವೆ. ಕೇರಳದಲ್ಲಿ 4, ಬೆಂಗಳೂರಿನಲ್ಲಿ 18, ಉಡುಪಿ, ಕಾರ್ಕಳ, ಶೃಂಗೇರಿ, ತೀರ್ಥಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರನ್ನು ಶಿವಮೊಗ್ಗದ ನ್ಯಾಯಾಲಯಕ್ಕೆ ಹಾಜರಪಡಿಸಲಾಗಿದೆ. ಶಿವಮೊಗ್ಗ ಕಾರಾ ಗೃಹಕ್ಕೆ ಅವರನ್ನು ಕರೆದೊಯ್ದಿದ್ದು, ನಾಳೆ ಮತ್ತೆ ವಿಚಾರಣೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ತೀರ್ಥಹಳ್ಳಿ ಪೊಲೀಸ್ ಠಾಣೆಯ ಕೇಸ್ ನಂ 174/07
ತೀರ್ಥಹಳ್ಳಿಯ ತಲ್ಲೂರಂಗಡಿ ಬಳಿ ಕೆಎಸ್ಆರ್ಟಿಸಿ ಬಸ್ ಗೆ ಬೆಂಕಿ ಹಚ್ಚಿದ್ದ ಪ್ರಕರಣ ಇದಾಗಿದೆ. 2007ರ ಜುಲೈ 1ರಂದು ಬೆಂಗಳೂರಿಗೆ ಹೋಗುತ್ತಿದ್ದ ಬಸ್ ಗೆ ಡಿಸೇಲ್ ಸುರಿದು ಬೆಂಕಿ ಹಚ್ಚಲಾಗಿತ್ತು. ಪೊಲೀಸರು-ಪತ್ರಿಕೆಯವರಿಗೆ ಕೊಡುವಂತೆ ಬಸ್ ನಲ್ಲಿ ಕರಪತ್ರ ಕೊಟ್ಟಿದ್ದರು. ಈ ಪ್ರಕರಣದಲ್ಲಿ ಎ-3 ಆರೋಪಿ ಬಿ.ಜಿ.ಕೃಷ್ಣಮೂರ್ತಿ.
ಆಗುಂಬೆ ಠಾಣೆಯ ಕೇಸ್ ನಂ. 12/09
ತೀರ್ಥಹಳ್ಳಿಯ ಬಿದರಗೋಡು ಗ್ರಾಮದ ಬಿ.ಕೆ.ಅರುಣ್ ಕುಮಾರ್ ಮನೆ ಮೇಲೆ ದಾಳಿ ನಡೆದಿತ್ತು. 2009 ರ ಫೆಬ್ರವರಿ 1 ರಾತ್ರಿ 10 ಗಂಟೆಗೆ ದಾಳಿ ಮಾಡಿದ್ದ 8 ಜನರ ತಂಡ ಅರುಣ್ ಅವರ ಪತ್ನಿಯನ್ನು ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಅಲ್ಲದೆ ಅಡಿಕೆ ಚೀಲ, ಸೋಫಾ ಹಾಗೂ ಬಜಾಜ್ ಬೈಕ್ ನ್ನು ಡಿಸೇಲ್ ಹಾಕಿ ಸುಟ್ಟಿದ್ದ ಆರೋಪವಿತ್ತು. ಈ ಪ್ರಕರಣದಲ್ಲಿ ಬಿ.ಜಿ.ಕೃಷ್ಣಮೂರ್ತಿ ಎ-1 ಆರೋಪಿ
ಆಗುಂಬೆ ಠಾಣೆಯ ಕೇಸ್ ನಂ. 51/09
ನಕ್ಸಲ್ ವಿಚಾರದಲ್ಲಿ ಬಂಧಿತರಾಗಿದ್ದ ಆರೋಪಿ ನೀಡಿದ್ದರ ಪರಿಣಾಮವಾಗಿ ಪೊಲೀಸರು ಕಾಡಿನಲ್ಲಿ ಕೂಂಬಿಂಗ್ ನಡೆಸಿ ನಕ್ಸಲ್ ನೆಲೆಗಳನ್ನು ಹುಡುಕಿದ್ದರು. ಈ ವೇಳೆ ಸಮೀಪದ ನೆಕರ್ಕೆ ಗುಡ್ಡ ಹಾಗೂ ಮಾಕೋಡು ದಟ್ಟಾರಣ್ಯದಲ್ಲಿ ನಕ್ಸಲ್ರ ಶಸ್ತ್ರಾಸ್ತ್ರ ಸಂಗ್ರಹಗಾರ ಪತ್ತೆಯಾಗಿತ್ತು.
ಆ ವೇಳೆ ಮಾವೋವಾದಿ ಸಂಘಟನೆಯ ಪುಸ್ತಕಗಳು, 9ಎಂಎಂ ಬಂದೂಕು, ಡಿಟೋನೇಟರ್, ಮೂರು 303 ರೈಫಲ್ ನ 40 ಜೀವಂತ ಗುಂಡು, 7.62 ಎಂ.ಎಂ ನ 70 ಜೀವಂತ ಗುಂಡು, 9 ಎಂ.ಎಂ ನ 20 ಜೀವಂತ ಗುಂಡು ವಶಕ್ಕೆ ಪಡೆಯಲಾಗಿತ್ತು. 2009ರ ಮೇ 30 ರಂದು ಎ-3 ಸುರೇಶ್ ನಾಯ್ಕ್, ಎ-4 ಸರೋಜಾ ರ ಮಾಹಿತಿ ಅಡಿಯಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಈ ಪ್ರಕರಣದಲ್ಲಿ ಎ-1 ಆರೋಪಿ ಬಿ.ಜಿ.ಕೃಷ್ಣಮೂರ್ತಿ.