ಶಿವಮೊಗ್ಗ ಕೋರ್ಟ್​ನಲ್ಲಿ ಇವತ್ತು ಬೆಳಗ್ಗೆಯಿಂದ ಏನೆಲ್ಲಾ ನಡೆಯಿತು! ಬಿ.ಜಿ.ಕೃಷ್ಣಮೂರ್ತಿ ಕೇಸ್​ಗಳ ಬಗ್ಗೆ ಕುತೂಹಲಕರ ಸಂಗತಿ

What happened in Shivamogga court since this morning? Interesting facts about B.G. Krishnamurthy cases

Shivamogga | Jan 31, 2024 |   22 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ತೊಡಗಿಸಿಕೊಂಡು ಕೇರಳ ಪೊಲೀಸರಿಂದ ಬಂಧಿತನಾಗಿ ಜೈಲುವಾಸ ಅನುಭವಿಸುತ್ತಿರುವ ನಕ್ಸಲ್ ನಾಯಕ ಬಿ.ಜಿ ಕೃಷ್ಣಮೂರ್ತಿಯನ್ನು ಇಂದು ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

What happened in Shivamogga court since this morning? Interesting facts about B.G. Krishnamurthy cases

ಭಾರಿ ಬಿಗಿ ಭದ್ರತೆಯೊಂದಿಗೆ  ತೀರ್ಥಹಳ್ಳಿ ಪೊಲೀಸರು ಕೇರಳದಿಂದ ಬಿಜಿಕೆಯನ್ನು ಕರೆತಂದಿದ್ದರು. ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಆಗುಂಬೆ  ಪೊಲೀಸ್ ಠಾಣೆಯಲ್ಲಿ ಬಿಜಿಕೆ ವಿರುದ್ದ ಪ್ರಕರಣ ದಾಖಲಾಗಿತ್ತು.

What happened in Shivamogga court since this morning? Interesting facts about B.G. Krishnamurthy cases

ಮಲೆನಾಡಿನಲ್ಲಿ ನಕ್ಸಲ್ ಸಂಘಟನೆಯನ್ನು ಮಂಚೂಣಿಗೆ ಕೊಂಡೊಯ್ಯುವಲ್ಲಿ ಪ್ರಮುಖಪಾತ್ರ ವಹಿಸಿದ್ದ ನಕ್ಸಲ್ ನಾಯಕ ಬಿ.ಜಿ ಕೃಷ್ಣಮೂರ್ತಿ 2021 ರ ಡಿಸೆಂಬರ್ ತಿಂಗಳು ಕೇರಳ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ.

What happened in Shivamogga court since this morning? Interesting facts about B.G. Krishnamurthy cases

ಕೇರಳ ತ್ರಿಶೂರ್ ಜಿಲ್ಲೆಯ ವಿಯೂರ್ ಜೈಲಿನಿಂದ ನೆನ್ನೆ ಬಿಜೆಕೆಯನ್ನು ಬಾಡಿ ವಾರೆಂಟ್ ಮೂಲಕ ತೀರ್ಥಹಳ್ಲಿ ಪೊಲೀಸರು ಭಾರಿ ಭದ್ರತೆಯೊಂದಿಗೆ ಕರೆತಂದಿದ್ದರು. ಶಿವಮೊಗ್ಗದ ಸೆಷನ್ ನ್ಯಾಯಾಲಯಕ್ಕೆ ಬಿಜೆಕೆಯನ್ನು ಇಂದು ಹಾಜರು ಪಡಿಸಲಾಯಿತು. ಬಿಜಿಕೆ ವಿರುದ್ಧ ಆಗಂಬೆಯ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದವು. 

What happened in Shivamogga court since this morning? Interesting facts about B.G. Krishnamurthy cases

  • 174/2007 ತಲ್ಲೂರು ಅಂಗಡಿ ಬಳಿ ಬಸ್ ಸುಟ್ಟ ಪ್ರಕರಣ

  • 51/2009 ಆಗುಂಬೆ ಬಳಿ ಫಾರೆಸ್ಚ್ ಚೆಕ್ ಪೋಸ್ಟ್ ದಾಳಿ ಪ್ರಕರಣ

  • 12/2009 ಆಗುಂಬೆ ಬಳಿ ಅರುಣ್ ಕುಮಾರ್ ಮತ್ತು ಕಿರಣ್ ಕುಮಾರ್ ಎಂಬುವರ ಮನೆಗೆ ಬೆಂಕಿ ಹಚ್ಚಿ ಬೈಕ್ ಸುಟ್ಟ ಘಟನೆ. 

  • ಮನೆಯಲ್ಲಿದ್ದ ಸಿಂಗಲ್ ಬ್ಯಾರಲ್ ಮತ್ತು ಡಬಲ್ ಬ್ಯಾರಲ್ ಗನ್ ದೋಚಿದ ಪ್ರಕರಣದಲ್ಲಿ ಬಿಜಿಕೆ ಪ್ರಮುಖ ಆರೋಪಿಯಾಗಿದ್ದಾನೆ.

  • ನಕ್ಸಲ್ ಬಿಜಿ ಕೃಷ್ಣಮೂರ್ತಿ ವಿರುದ್ಧ ಚಿಕ್ಕಮಗಳೂರು , ಉಡುಪಿ ಹಾಗೂ ಶಿವಮೊಗ್ಗದಲ್ಲಿ ಕೇಸ್ಗಳು ದಾಖಲಾಗಿವೆ.  

What happened in Shivamogga court since this morning? Interesting facts about B.G. Krishnamurthy cases

ಈ ಪ್ರಕರಣಗಳ ಸಂಬಂಧ ಈಗಾಗಲೇ ಉಡುಪಿ ಹಾಗೂ ಚಿಕ್ಕಮಗಳೂರು ಪೊಲೀಸರು ಬಿಜಿಕೆಯನ್ನು ಕೋರ್ಟ್ಗೆ ಹಾಜರುಪಡಿಸಿವೆ. ಇದೀಗ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪೊಲೀಸರು ಹಾಜರುಪಡಿಸಿದ್ದಾರೆ.  

What happened in Shivamogga court since this morning? Interesting facts about B.G. Krishnamurthy cases

ದಶಕದ ಹಿಂದೆ ಶಿವಮೊಗ್ಗ ನ್ಯಾಷನಲ್ ಕಾಲೇಜಿನಲ್ಲಿ  ಎಲ್.ಎಲ್.ಬಿ ಓದುತ್ತಲೇ ಹೋರಾಟಗಳಲ್ಲಿ ಪಾಲ್ಗೊಂಡಿದ್ದ ಬಿಜಿಕೆ ಸಮಾಜದ ಮುಖ್ಯವಾಹಿನಿಯಲ್ಲಿ ಒಬ್ಬ ಹೋರಾಟಗಾರನಾಗಿ ರೂಪಿತವಾಗುತ್ತಾನೆ ಎಂದು ಸ್ನೇಹಿತರು ಭಾವಿಸಿದ್ದರು. ಆದರೆ ಪರಿಸರ ಸಂರಕ್ಷಣೆ ನೆಪದಲ್ಲಿ ಶಿವಮೊಗ್ಗದಲ್ಲಿ ಕಣ್ಮರೆಯಾದ ಯುವಕ ಯುವತಿಯರ ಗುಂಪು ಮುಂದೆ ನಕ್ಸಲ್ ಸಂಘಟನೆ ಸೇರುತ್ತಾರೆ ಎಂದು ಊಹಿಸಿರಲಿಲ್ಲ. 

What happened in Shivamogga court since this morning? Interesting facts about B.G. Krishnamurthy cases

ನಕ್ಸಲ್ ನಾಯಕಿ ಹೊಸಗದ್ದೆ ಪ್ರಭಾಳನ್ನೇ ಮದುವೆಯಾಗಿದ್ದ ಬಿಜಿಕೆ ಎರಡು ದಶಕಕ್ಕೂ ಹೆಚ್ಚು ಕಾಲ ಭೂಗತರಾಗಿದ್ದರು. ಮಲೆನಾಡಿನಲ್ಲಿ ಸಂಘಟನೆ ನಿಷ್ಕ್ರೀಯವಾಗುತ್ತಿದ್ದಂತೆ ಕೇರಳದತ್ತ ಮುಖ ಮಾಡಿದ್ದ ಬಿಜಿಕೆ ಗ್ರೂಪ್ ಗೆ ಒಂದು ಹಂತದಲ್ಲಿ ನೆಲೆಯೂರಲು ಅವಕಾಶ ಸಿಕ್ಕಿತು. ಆದರೆ ಕೇರಳ ಪೊಲೀಸರು ಹೊಸಗದ್ದೆ ಪ್ರಭಾ ಮತ್ತು ಬಿಜಿ ಕೃಷ್ಣಮೂರ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

What happened in Shivamogga court since this morning? Interesting facts about B.G. Krishnamurthy cases

ಇಂದು ವಿಚಾರಣೆ ನಡೆಸಿದ ನ್ಯಾಯಾಧೀಶರು ಎರಡು ಪ್ರಕರಣದಲ್ಲಿ ನ್ಯಾಯಾಧೀಶರು ದೋಷಾರೋಪಣೆಯನ್ನ ಹೇಳಿದ್ದು ಸದರಿ ದೋಷಾರೋಪಣೆ ಯನ್ನ ಆರೋಪಿ ಕೃಷ್ಣಮೂರ್ತಿ ಅಲ್ಲಗಳೆದಿದ್ದಾನೆ. ಮತ್ತೊಂದು ಕೇಸ್ ನಲ್ಲಿ ನಾಳೆಗೆ ಕೋರ್ಟ್ ಗೆ ಹಾಜರಾಗುವಂತೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶರು ಮಂಜುನಾಥ್ ಸೂಚಿಸಿದ್ದಾರೆ. 

ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರೀಯಿಸಿದ ವಕೀಲ ಶ್ರೀಪಾಲ್ ಕೃಷ್ಣಮೂರ್ತಿ ಅವರನ್ನು ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವು. 2006 ರ ಒಂದು ಪ್ರಕರಣ, 2007 ರ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಜರುಪಡಿಸಿಲಾಗಿತ್ತು. 2021 ರಲ್ಲಿ ಕೇರಳದಲ್ಲಿ ಅರೆಸ್ಟ್ ಆಗಿ ಕೇರಳ ಜೈಲಿನಲ್ಲಿದ್ದರು. ಎರಡು ಪ್ರಕರಣದಲ್ಲಿ ಚಾರ್ಜ್ ಆಗಿದೆ. ಇನ್ನೊಂದು ಪ್ರಕರಣ ನಾಳೆಗೆ ಮುಂದೂಡಿದೆ. 

What happened in Shivamogga court since this morning? Interesting facts about B.G. Krishnamurthy cases

ಬಿದರಗೋಡು ದರೋಡೆ. ಹೊಸಗದ್ದೆ ಬಳಿ ಕೆಎಸ್ ಆರ್ ಟಿಸಿ‌ ಬಸ್ ಸುಟ್ಟ ಪ್ರಕರಣ ಆಗುಂಬೆಯಲ್ಲಿ ಫಾರೆಸ್ಟ್ ಗೇಟ್ ಸುಟ್ಟ ಪ್ರಕರಣ. ಸರಕಾರಿ ಬಸ್ ಸುಟ್ಟಿದ್ದ ಪ್ರಕರಣ ನಾಳೆಗೆ ಹೋಗಿದೆ. ಎರಡು ಪ್ರಕರಣದಲ್ಲಿ ಒಂದನೇ ಆರೋಪಿಯಾಗಿದ್ದ. ಇನ್ನೊಂದು ‌ಪ್ರಕರಣದಲ್ಲಿ‌ ಮೂರನೇ ಆರೋಪಿ  ಕೇರಳ ಕರ್ನಾಟಕ ಸೇರಿದಂತೆ ಇವರ ಮೇಲೆ ಒಟ್ಟು 62 ಪ್ರಕರಣ ಇದೆ ಎಂದು ಶ್ರೀಪಾಲ್ ಹೇಳಿದ್ದಾರೆ.

What happened in Shivamogga court since this morning? Interesting facts about B.G. Krishnamurthy cases

ಇಂದು ಶಿವಮೊಗ್ಗದ ಸೆಂಟ್ರಲ್ ಜೈಲಿಗೆ ಬಿಜಿಕೆ ಶಿಫ್ಟ್ ಆಗಿದ್ದು. ಅನಾರೋಗ್ಯದ ಹಿನ್ನೆಲೆಯಲ್ಲಿ ಜೈಲಿನಲ್ಲಿ ಚಿಕಿತ್ಸೆಗೆ ಕೋರ್ಟ್ ಅವಕಾಶ ನೀಡಿದೆ ಒಟ್ಟು ಮೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷ್ಣಮೂರ್ತಿ ಯನ್ನು ಕೋರ್ಟ್ ಗೆ ಕರೆತರಲಾಗಿತ್ತು.  

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ