ಬಿಜೆಪಿ ಮುಖಂಡ ಸಿ.ಟಿ. ರವಿ ವಿರುದ್ಧ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ದೂರು

Shivamogga | Jan 31, 2024 |   ಬಿಜೆಪಿ ಮುಖಂಡ ಸಿ.ಟಿ.ರವಿ ವಿರುದ್ಧ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ದೂರು ದಾಖಲಾಗಿದೆ. ರಾಷ್ಟ್ರಧ್ವಜಕ್ಕೆ ಸಿ.ಟಿ.ರವಿ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ನಗರದ ದೊಡ್ಡಪೇಟೆ ಪೊಲೀಸ್ ಠಾಣೆಗೆ ಶಿವಮೊಗ್ಗ ಯುವ ಕಾಂಗ್ರೆಸ್​ ವತಿಯಿಂದ ದೂರು ನೀಡಲಾಗಿದೆ. 

ನಮ್ಮ ಹೆಮ್ಮೆಯ ಭಾರತದ ತ್ರಿವರ್ಣಧ್ವಜವನ್ನು ಭಯೋತ್ಪಾದಕ ತಾಲಿಬಾನ್ ಉಗ್ರ ಸಂಘಟನೆಯ ಧ್ವಜಕ್ಕೆ ಹೋಲಿಸಿರುವ ಮಾಜಿ ಶಾಸಕ ಸಿ.ಟಿ.ರವಿ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ಆಗ್ರಹಿಸಲಾಗಿದೆ. 

ಮಂಡ್ಯ ಜಿಲ್ಲಾಧಿಕಾರಿಯವರ ಕಛೇರಿ ಹತ್ತಿರ, ಚಿಕ್ಕಮಗಳೂರು ನಗರ ವಾಸಿ ಮಾಜಿ ಶಾಸಕ ಸಿ.ಟಿ.ರವಿ  ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಹೇಳಿಕೆ ನೀಡುವಾಗ, ತ್ರಿವರ್ಣ ಧ್ವಜವನ್ನು ಭಯೋತ್ಪಾದಕ ತಾಲಿಬಾನ್ ಉಗ್ರ ಸಂಘಟನೆಯ ಧ್ವಜಕ್ಕೆ ಹೋಲಿಸಿ ಹೇಳಿಕೆ ನೀಡಿರುವುದು ರಾಷ್ಟ್ರೀಯ ಧ್ವಜ ಸಂಹಿತೆ ಕಾಯ್ದೆ ಅಡಿಯಲ್ಲಿ ಅಪರಾಧ ಮತ್ತು ಶಿಕ್ಷಾರ್ಹವಾಗಿರುತ್ತದೆ.  ಕೂಡಲೇ ಈ ಮಾಜಿ ಶಾಸಕ ಸಿ.ಟಿ.ರವಿ ಎಂಬ ಆಸಾಮಿಯ ವಿರುದ್ಧ  ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಯುವ ಕಾಂಗ್ರೆಸ್ ಆರೋಪಿಸಿದೆ. 

ಈ ವೇಳೇ  ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಪ್ರವೀಣ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ . ಗಿರೀಶ್  ರಾಜ್ಯ ಕಾರ್ಯದರ್ಶಿ ಆರ್ ಕಿರಣ್, ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ಲೋಕೇಶ್, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ನ ಎಸ್ .ಕುಮರೇಶ್, ಪ್ರಧಾನ ಕಾರ್ಯದರ್ಶಿಗಳಾದ ಪುಷ್ಪಕ್ ಕುಮಾರ, ಸಂದೀಪ್ ಸುಂದರ್ ರಾಜ್, ಎಂ ರಾಕೇಶ್, ಇರ್ಫಾನ್, ಕೆ ಎಲ್ ಪವನ್, ರಾಜೀವ್ ರಾಯ್ಕರ್,  ಏನೋಶ್, ಸುಹಾಸ್ ಗೌಡ, ರಾಹುಲ್, ಅಕ್ಷಯ್ , ಫಾಝಿಲ್, ಇತರರು ಇದ್ದರು


Leave a Comment