SHIVAMOGGA NEWS / Malenadu today/ Dec 1, 2023 | MALENADU TODAY | MALNAD NEWS
CHIKKAMAGALURU | ಚಿಕ್ಕಮಗಳೂರು ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದಿದೆ. ಘಟನೆಯಲ್ಲಿ ಹಲ್ಲೆಗೊಳಗಾದ ವ್ಯಕ್ತಿಯನ್ನು ಬಿಜೆಪಿ ಮುಖಂಡ ಸಿ .ಟಿ ರವಿಯವರ ಆಪ್ತ ಎಂದು ಗುರುತಿಸಲಾಗಿದೆ
ಸಿ. ಟಿ. ರವಿ ಆಪ್ತನ ಮೇಲೆ ಹಲ್ಲೆ
ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಾರ್ಯದರ್ಶಿ ದುರ್ಗೇಶ್ ಮೇಲೆ ಹಲ್ಲೆಯಾಗಿದ್ದು, ನಿನ್ನೆ ಮಧ್ಯರಾತ್ರಿ ಈ ಘಟನೆ ನಡೆದಿದೆ. ಚಿಕ್ಕಮಗಳೂರು ತಾಲ್ಲೂಕು ನಾಗರಹಳ್ಳಿ ಗ್ರಾಮದಲ್ಲಿರುವ ದುರ್ಗೇಶ್ರವರ ಮನೆಗೆ ನುಗ್ಗಿ ಅವರ ಮೇಲೆ ಹಲ್ಲೆ ಮಾಡಲಾಗಿದೆ.
ಘಟನೆಯಲ್ಲಿ ದುರ್ಗೇಶ್ರವರಿಗೆ ಗಾಯಗಳಾಗಿದ್ದು, ಅವರನ್ನ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಇನ್ನೂ ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
READ : ಸಿಡಿಲು ಬಡಿದು ಇಬ್ಬರು ಸಹೋದರರ ಸಾವು!
ವಿಷಯ ತಿಳಿದು ಸಿಟಿ ರವಿ ಅವರು ಜಿಲ್ಲಾಸ್ಪತ್ರೆಗೆ ದೌಡಾಯಿಸಿ ದುರ್ಗೇಶ್ರವರನ್ನ ಮಾತನಾಡಿಸಿದ್ದಾರೆ. ಘಟನೆಗೆ ಕಾರಣವೇನು ಎಂಬುದು ಗೊತ್ತಾಗಿಲ್ಲವಾದರೂ, ದುಷ್ಕರ್ಮಿಗಳು ಮಂಕಿಕ್ಯಾಪ್ ಧರಿಸಿದ್ದರು ಎಂದು ತಿಳಿದುಬಂದಿದೆ.