ಸಿಡಿಲು ಬಡಿದು ಇಬ್ಬರು ಸಹೋದರರ ಸಾವು!

brothers were killed in a lightning strike near Hunshekatte junction in Bhadravathi taluk

ಸಿಡಿಲು ಬಡಿದು ಇಬ್ಬರು ಸಹೋದರರ ಸಾವು!

SHIVAMOGGA NEWS / Malenadu today/ Dec 1, 2023 | MALENADU TODAY | MALNAD NEWS 

BHADRAVATI |   ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಹುಣಸೆಕಟ್ಟೆ ಜಂಕ್ಷನ್​ ಸಮೀಪ ಇಬ್ಬರು ಸಹೋದರರು ಸಿಡಿಲು ಬಡಿದು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. 

ಇಲ್ಲಿನ ಗೌಳಿಗರ ಕ್ಯಾಂಪ್ ನಿವಾಸಿಗಳಾದ ಎಸ್‌.ಬೀರೇಶ್ (32) ಮತ್ತು ಎಸ್.ಸುರೇಶ್ (30) ಮೃತ ಸಹೋದರರು. ಗದ್ದೆಯಲ್ಲಿ ಕಟಾವು ಮಾಡಿ ಇರಿಸಿದ್ದ ಭತ್ತ ಕಾಯಲು ತೆರಳಿದ್ದ ವೇಳೆ ಈ ಘಟನೆ ನಡೆದಿದೆ. 

READ : ಎಸ್.ಎಸ್.ಎಲ್.ಸಿ.ಮತ್ತು ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ! ಇಲ್ಲಿದೆ ಲಿಸ್ಟ್!

ಗುಡುಗು ಸಹಿತ ಮಳೆಯಾಗುತ್ತಿದ್ದ ಹೊತ್ತಿನಲ್ಲಿ ಇಬ್ಬರಿಗೂ ಸಿಡಿಲು ಬಡಿದಿದೆ. ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನೂ ಸಹೋದರರು ಬೆಳಗ್ಗೆ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಿಕೊಂಡು ಗದ್ದೆಗೆ ಹೋಗಿದ್ದಾರೆ. ಅಲ್ಲಿ ಇಬ್ಬರು ಸಹ ಮೃತಪಟ್ಟಿರುವುದು ಕಂಡುಬಂದಿದೆ. 

ಪ್ರಕರಣ ಸಂಬಂಧ  ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ಕೇಸ್ ದಾಖಲಾಗಿದೆ