ಶಿವಮೊಗ್ಗದ ಗಾರ್ಡನ್​ ಏರಿಯಾದಲ್ಲಿರುವ ಕ್ಲಬ್​ವೊಂದರ ಮೇಲೆ ದೊಡ್ಡಪೇಟೆ ಪೊಲೀಸರ ರೇಡ್

Doddapet police raid a club in Shivamogga's Garden area

ಶಿವಮೊಗ್ಗದ ಗಾರ್ಡನ್​ ಏರಿಯಾದಲ್ಲಿರುವ ಕ್ಲಬ್​ವೊಂದರ ಮೇಲೆ ದೊಡ್ಡಪೇಟೆ ಪೊಲೀಸರ ರೇಡ್
Doddapet police raid a club in Shivamogga's Garden area

Shivamogga | Doddapet police raid   Jan 29, 2024 |  ಶಿವಮೊಗ್ಗ ಜಿಲ್ಲೆ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಪೊಲೀಸರು ರೀಕ್ರಿಯೇಷನ್​ ಕ್ಲಬ್​ವೊಂದರ ಮೇಲೆ ದಾಳಿ ನಡೆಸಿ ಕಲಂ 79, 80 ಕೆ.ಪಿ ಕಾಯ್ದೆ ತಿದ್ದುಪಡಿ 2021 ರ ಅಡಿಯಲ್ಲಿ ಪ್ರಕರಣ ದಾಖಲಿಸಿದೆ. 

ದೊಡ್ಡಪೇಟೆ ಪೊಲೀಸ್ ಸ್ಟೇಷನ್

ಶಿವಮೊಗ್ಗ ಟೌನ್ ಗಾರ್ಡನ್ ಏರಿಯಾದ ತುಂಗಭದ್ರಾ ಹಂಗಾಮಿ ನೌಕರರ ಮನೋರಂಜನಾ ಸಂಘದ ಕ್ಲಬ್ ನ ಒಳಭಾಗದಲ್ಲಿ ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿರುವ ಬಗ್ಗೆ ದೊಡ್ಡಪೇಟೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. 

ಈ ಸಂಬಂಧ  ಸುರೇಶ್ ಎಂ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಬಿ ಉಪ ವಿಭಾಗ ರವರ ನೇತೃತ್ವದಲ್ಲಿ ರವಿ ಪಾಟೀಲ್ ಪಿಐ ದೊಡ್ಡಪೇಟೆ ಪೊಲೀಸ್ ಠಾಣೆ ಹಾಗೂ ಸಿಬ್ಬಂಧಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿದೆ

ಈ ವೇಳೆ ಇಸ್ಪೀಟು ಜೂಜಾಟ ಆಡುತ್ತಿದ್ದ ಒಟ್ಟು 18  ಜನ ಆರೋಪಿತರನ್ನು ದಸ್ತಗಿರಿ ಮಾಡಿ, ಜೂಜಾಟದಲ್ಲಿ ಪಣವಾಗಿಟ್ಟಿದ್ದ ಒಟ್ಟು 21,700/- ರೂ ನಗದು ಹಣ ಮತ್ತು ಇಸ್ಪೀಟು ಎಲೆಗಳನ್ನು ಅಮಾನತ್ತು ಪಡಿಸಿಕೊಂಡು, ಆರೋಪಿತರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣಾ  ಗುನ್ನೆ ಸಂಖ್ಯೆ 0038/2024 ಕಲಂ 79, 80 ಕೆ.ಪಿ ಕಾಯ್ದೆ ತಿದ್ದುಪಡಿ 2021 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.