KARNATAKA NEWS/ ONLINE / Malenadu today/ Jun 27, 2023 SHIVAMOGGA NEWS
ತೀರ್ಥಹಳ್ಳಿಯಲ್ಲಿ ನಡೆದಿರೋ ಹನಿಟ್ರ್ಯಾಪ್ ಕೇಸ್ನ ಬಗ್ಗೆ ಶಿವಮೊಗ್ಗ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಪ್ರಮುಖ ಮಾಹಿತಿಗಳನ್ನ ನೀಡಿದೆ. ಪೊಲೀಸ್ ಇಲಾಖೆಯಿಂದ ಹೊರಬಿದ್ದ ಪ್ರಕಟಣೆಯಲ್ಲಿನ ಮಾಹಿತಿಯನ್ನು ಗಮನಿಸುವುದಾದರೆ, ನಡೆದ ಕ್ರೈಂನಲ್ಲಿ ಓರ್ವ ಯುವತಿ ಹಾಗೂ ಇಬ್ಬರು ಯುವಕರನ್ನ ಬಂಧಿಸಲಾಗಿದೆ.
ಬಂಧಿತರು ಯಾರ್ಯಾರು?
ಸೌರಭ @ ಅನನ್ಯ, 22 ವರ್ಷ, ತೀರ್ಥಹಳ್ಳಿ, ಅಬೂಬಕರ್ ಸಿದ್ದಿಕಿ, 26 ವರ್ಷ, ತೀರ್ಥಹಳ್ಳಿ ಮತ್ತು ಮೋಹಿತ್ ಗೌಡ, 28 ವರ್ಷ, ತೀರ್ಥಹಳ್ಳಿ ತಾಲ್ಲೂಕು ರವರುಗಳನ್ನು ಪೊಲೀಸರು ಬಂಧಿಸಿದ್ಧಾರೆ.
ಪ್ರಕಟಣೆಯಲ್ಲಿ ಇದ್ದಂತೆ
ತೀರ್ಥಹಳ್ಳಿ ತಾಲ್ಲೂಕಿನ ಉಂಟೂರುಕಟ್ಟೆ ಕೈಮರದ ವಾಸಿ ವ್ಯಕ್ತಿಯೊಬ್ಬರಿಗೆ ಯುವತಿಯೊಬ್ಬಳು ಮೊಬೈಲ್ ಮುಖಾಂತರ ಪರಿಚಯವಾಗಿ ಫೊನ್ ನಲ್ಲಿ ಸಲುಗೆಯಿಂದ ಮಾತನಾಡುತ್ತಿದ್ದು, ದಿನಾಂಕಃ 05-04-2023 ರಂದು ಆಕೆಯು ದೂರುದಾರರ ಮನೆಗೆ ಬಂದಿದ್ದಾಳೆ.
ಆನಂತರ ಯುವತಿಯ ಕಡೆಯ ವ್ಯಕ್ತಿಗಳು ಏಕಾಏಕಿ ಆತನ ಮನೆಗೆ ನುಗ್ಗಿ, ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿ ಯುವತಿಯೊಂದಿಗೆ ಅಶ್ಲೀಲವಾದ ಫೋಟೋ ಮತ್ತು ವೀಡಿಯೋಗಳನ್ನು ಚಿತ್ರೀಕರಿಸಿದ್ದಾರೆ. ಅಲ್ಲದೆ, ನೀನು ಹಣ ಕೊಡದೆ ಇದ್ದರೆ ಇವುಗಳನ್ನು ನಿನ್ನ ಹೆಂಡತಿಗೆ ಕಳುಹಿಸುತ್ತೇವೆ ಮತ್ತು ಅತ್ಯಾಚಾರ ಪ್ರಕರಣವನ್ನು ದಾಖಲಿಸುತ್ತೇವೆಂದು ಹೆದರಿಸಿದ್ದಾರೆ.
ಬಳಿಕ ಹಣವನ್ನು ತೆಗೆದುಕೊಂಡು ಹೋಗಿದ್ದಷ್ಟೆ ಅಲ್ಲದೆ, ಪುನಾಃ ಬೆದರಿಸಿ ಹಣವನ್ನು ಪಡೆದಿದ್ದಾರೆ., ಆನಂತರವೂ ಸಹಾ ನೀನು ಹಣ ಕೊಡದಿದ್ದರೆ ಇವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿರುತ್ತಾರೆ. ಈ ಸಂಬಂಧ ನೊಂದ ವ್ಯಕ್ತಿಯು ದೂರು ನೀಡಿದ್ದು, ಈ ಸಂಬಂಧ ಐಪಿಸಿ 386, 388 ಸಹಿತ 149 ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಸದ್ಯ ಮೂವರು ಆರೋಪಿಗಳನ್ನ ಬಂಧಿಸಲಾಗಿದ್ದು, ಉಳಿದವರಿಗಾಗಿ ಹುಡುಕಾಟ ನಡೆದಿದೆ.
ಶಿವಮೊಗ್ಗ-ತಾಳಗುಪ್ಪ-ಮೈಸೂರು, ಯಶವಂತಪುರ ಟ್ರೈನ್ಗಳ ಸಮಯದಲ್ಲಿ ಬದಲಾವಣೆ! ಎಷ್ಟೊತ್ತಿಗೆ ಹೊರಡಲಿದೆ!? ಎಷ್ಟೊತ್ತಿಗೆ ಬರಲಿದೆ ವಿವರ ಇಲ್ಲಿದೆ ನೋಡಿ
ಶಿವಮೊಗ್ಗದ ರೈಲ್ವೆ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಮಹತ್ವದ ಮಾಹಿತಿಯೊಂದನ್ನ ನೀಡಿದ್ದು, ಶಿವಮೊಗ್ಗಕ್ಕೆ ಸಂಬಂಧಿಸಿದ ತನ್ನ ರೈಲುಗಳ ಸಂಚಾರದ ಸಮಯದಲ್ಲಿ ಬದಲಾವಣೆಯನ್ನು ಕೈಗೊಂಡಿದೆ. ಮುಖ್ಯವಾಗಿ ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್, (talguppa-mysuru-express)
ಶಿವಮೊಗ್ಗ – ಯಶವಂತಪುರ ಎಕ್ಸ್‌ಪ್ರೆಸ್ ರೈಲು (yesvantpur-shivamogga-town-express-16581) ಮತ್ತು ಮೈಸೂರು – ಶಿವಮೊಗ್ಗ ಅನ್ ರಿಸರ್ವಡ್ ಎಕ್ಸ್‌ಪ್ರೆಸ್ (mysuru-shivamogga-town-express-16225) ರೈಲಿನ ಟೈಮಿಂಗ್ಸ್ನ್ನ ನೈರುತ್ಯ ರೈಲ್ವೆ ಇಲಾಖೆ ಬದಲಾಯಿಸಿದೆ.
ಈ ಸಂಬಂಧ ನೈಋತ್ಯ ರೈಲ್ವೆ (South Western Railway) ಹೊರಡಿಸಿರುವ ಪ್ರಕಟಣೆಯಲ್ಲಿ ವಿವರ ನೀಡಲಾಗಿದ್ದು, ಈ ಬದಲಾವಣೆ ಜೂನ್ 28 ರಿಂದ ಜಾರಿಗೆ ಬರಲಿದೆ.
ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್, (talguppa-mysuru-express)
ತಾಳಗುಪ್ಪ ಮೈಸೂರು ಎಕ್ಸ್‌ಪ್ರೆಸ್ ರೈಲು ತಾಳಗುಪ್ಪದಿಂದ ಎಂದಿನಂತೆ ರಾತ್ರಿ 9 ಗಂಟೆಗೆ ಹೊರಡಲಿದೆ. ಇದುವರೆಗೂ ರಾತ್ರಿ 3.28ಕ್ಕೆ ತುಮಕೂರು ತಲುಪುತ್ತಿದ್ದ ರೈಲು 3.30ಕ್ಕೆ ಹೊರಡುತ್ತಿತ್ತು. ಬದಲಾದ ಸಮಯದಂತೆ ಜೂನ್ 28ರಿಂದ ರಾತ್ರಿ 2.18ಕ್ಕೆ ತುಮಕೂರು ತಲುಪಿ 2.20ಕ್ಕೆ ನಿರ್ಗಮಿಸಲಿದೆ. ಇನ್ನೂ ಬೆಳಗ್ಗೆ 4.40ಕ್ಕೆ ಯಶವಂತಪುರ ನಿಲ್ದಾಣ ತಲುಪುತ್ತಿದ್ದ ಟ್ರೈನ್ 4.28ಕ್ಕೆ ತಲುಪಿ 4.30ಕ್ಕೆ ಹೊರಡಲಿದೆ. ಬೆಳಗ್ಗೆ 5 ಗಂಟೆಗೆ ಬೆಂಗಳೂರು ನಿಲ್ದಾಣ ತಲುಪುತ್ತಿದ್ದ ರೈಲು 4.50 ಕ್ಕೆ ತಲುಪಿ 5.05ಕ್ಕೆ ನಿರ್ಗಮಿಸಲಿದೆ.
ಶಿವಮೊಗ್ಗ – ಯಶವಂತಪುರ ಎಕ್ಸ್‌ಪ್ರೆಸ್ ರೈಲು (yesvantpur-shivamogga-town-express)
ಇನ್ನೂ ಮುಖ್ಯವಾಗಿ ಶಿವಮೊಗ್ಗ ಯಶವಂತಪುರ ಎಕ್ಸ್‌ಪ್ರೆಸ್ ಟ್ರೈನ್ (ರೈಲು ಸಂಖ್ಯೆ 16580) ಶಿವಮೊಗ್ಗದಿಂದ ಮಧ್ಯಾಹ್ನ 3.30ಕ್ಕೆ ಹೊರಡುತ್ತಿತ್ತು. ಜೂನ್ 28ರಿಂದ 5 ನಿಮಿಷ ತಡವಾಗಿ ಹೊರಡಲಿದೆ. ಅಂದರೆ 3.45ಕ್ಕೆ ಹೊರಡಲಿದೆ.
ಮಧ್ಯಾಹ್ನ 3.48ಕ್ಕೆ ಭದ್ರಾವತಿಗೆ ತಲುಪುತ್ತಿದ್ದ ರೈಲು ಜೂನ್ 28 ರಿಂದ ಸಂಜೆ 4.3ಕ್ಕೆ ತಲುಪಿ 4.5ಕ್ಕೆ ಹೊರಡಲಿದೆ.ತರಿಕೆರೆಗೆ 4.22 ಕ್ಕೆ ತಲುಪಿ 4.24ಕ್ಕೆ ನಿರ್ಗಮಿಸಲಿದೆ. ಬೀರೂರಿಗೆ 4.52ಕ್ಕೆ ತಲುಪಿ 4.54ಕ್ಕೆ ಹೊರಡಲಿದೆ. ಕಡೂರಿಗೆ ಸಂಜೆ 5.3ಕ್ಕೆ ತಲುಪಿ 5.05ಕ್ಕೆ ನಿರ್ಗಮಿಸಲಿದೆ. ಅರಸೀಕೆರೆಗೆ 5.35ಕ್ಕೆ ತಲುಪಿ 5.40ಕ್ಕೆ ನಿರ್ಗಮಿಸಲಿದೆ. ತಿಪಟೂರಿಗೆ ರೈಲು 6 ಗಂಟೆಗೆ ತಲುಪಿ 6.02ಕ್ಕೆ ಹೊರಡಲಿದೆ. ತುಮಕೂರಿಗೆ ರೈಲು 6.40ಕ್ಕೆ ತಲುಪಿ 6.42ಕ್ಕೆ ನಿರ್ಗಮಿಸಲಿದೆ.
ಮೈಸೂರು – ಶಿವಮೊಗ್ಗ ಅನ್ ರಿಸರ್ವಡ್ ಎಕ್ಸ್‌ಪ್ರೆಸ್
ಮೈಸೂರು ಶಿವಮೊಗ್ಗ ಅನ್ ರಿಸರ್ವಡ್ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ16225) ಸಂಜೆ 4.25ಕ್ಕೆ ಶಿವಮೊಗ್ಗ ನಿಲ್ದಾಣದ ತಲುಪುತ್ತಿತ್ತು. ಬದಲಾದ ಸಮಯದಂತೆ ಜೂನ್ 28 ರಿಂದ ಈ ರೈಲು ಸಂಜೆ 4.40ಕ್ಕೆ ತಲುಪಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
