SHIVAMOGGA | ಲಾಡ್ಜ್‌ ರೂಮ್‌ನಲ್ಲಿ ಯುವತಿಯ ಬರ್ಬರ ಹತ್ಯೆ! ನಡೆದಿದ್ದೇನು? ಪೊಲೀಸ್‌ ಅಲರ್ಟ್!‌

SHIVAMOGGA | Young woman brutally murdered in lodge room What happened? Police alert! Hazrat Syed Sadat Dargah Bhootaraya Chowdeshwari Temple, Hanagere Katte, ಹಜರತ್ ಸೈಯದ್ ಸಾದತ್ ದರ್ಗಾ ಭೂತರಾಯ ಚೌಡೇಶ್ವರಿ ದೇವಾಲಯ, ಹಣಗೆರೆ ಕಟ್ಟೆ,

SHIVAMOGGA | ಲಾಡ್ಜ್‌ ರೂಮ್‌ನಲ್ಲಿ ಯುವತಿಯ ಬರ್ಬರ ಹತ್ಯೆ! ನಡೆದಿದ್ದೇನು? ಪೊಲೀಸ್‌ ಅಲರ್ಟ್!‌
Hazrat Syed Sadat Dargah Bhootaraya Chowdeshwari Temple, Hanagere Katte, ಹಜರತ್ ಸೈಯದ್ ಸಾದತ್ ದರ್ಗಾ ಭೂತರಾಯ ಚೌಡೇಶ್ವರಿ ದೇವಾಲಯ, ಹಣಗೆರೆ ಕಟ್ಟೆ,

Shivamogga  Apr 4, 2024   ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಹಣಗೆರೆ ಕಟ್ಟೆ  ಹಜರತ್ ಸೈಯದ್ ಸಾದತ್ ದರ್ಗಾ ಭೂತರಾಯ ಚೌಡೇಶ್ವರಿ ದೇವಾಲಯದ ಸಮೀಪ ಯುವತಿಯೊಬ್ಬಳ ಹತ್ಯೆಯಾಗಿದೆ. ಪ್ರಕರಣ ತೀರಾ ಗಂಭೀರ ಸ್ವರೂಪ ಪಡೆದುಕೊಂಡಿದೆ. ಇದಕ್ಕೆ ಕಾರಣವೂ ಇದೆ. ಪವಿತ್ರ ಕ್ಷೇತ್ರದಲ್ಲಿ ಇಂತಹದ್ದೊಂದು ಘಟನೆ ನಡೆದಿರುವುದು ಭಕ್ತರ ಆತಂಕಕ್ಕೆ ಕಾರಣವಾಗಿದೆ. ಈ ಆತಂಕವನ್ನು ನಿವಾರಿಸುವ ಅನಿವಾರ್ಯತೆ ಪೊಲೀಸ್‌ ಹೆಗಲೇರಿದೆ.. 

ಸ್ಥಳೀಯರ ಆರೋಪ ಮತ್ತು ಆತಂಕ

ಇನ್ನೊಂದು ಕಡೆ ‍ಈ ಹಿಂದೆಯು ಹಲವು ಸಲ ಸ್ಥಳೀಯರು ಹೇಳಿಕೊಂಡ ದೂರಿನಂತೆ ಇಲ್ಲಿನ ಕೆಲವು ಲಾಡ್ಜ್‌ಗಳು ಅಕ್ರಮ ಚಟುವಟಿಕೆಗೆ ಆಸ್ಪದ ಮಾಡಿಕೊಡುತ್ತಿವೆ ಎಂಬ ದೂರಿತ್ತು. ಅಲ್ಲದೆ ಮಾದಕ ವಸ್ತುಗಳ ಮಾರಾಟ ಈ ಭಾಗದಲ್ಲಿ ನಡೆಯುತ್ತಿವೆ ಎಂಬ ಊರು ಮನೆಯವರ ಆರೋಪಗಳಿಗೆ ಪೊಲೀಸ್‌ ಇಲಾಖೆ ತಲೆ  ಕೆಡಿಸಿಕೊಂಡಿರಲಿಲ್ಲ. ಇದೀಗ ಯುವತಿಯೊಬ್ಬಳ ಹತ್ಯೆಯಾಗಿದ್ದು ಘಟನೆ ನಡೆದು ಸುಮಾರು ಮೂರು ದಿನಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ. 

ನಡೆದಿದ್ದೇನು?

ನಿನ್ನೆ ಹಣಗೆರೆ ಕಟ್ಟೆಯ ಲಾಡ್ಜ್‌ವೊಂದರಲ್ಲಿ ಯುವತಿಯನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂಬ ಸುದ್ದಿ ಆತಂಕವನ್ನು ಜೊತೆಗಿಟ್ಟುಕೊಂಡೇ ಎಲ್ಲ ಕಡೆಗಳಲ್ಲಿ ಹರಿದಾಡಿತ್ತು. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರಿಗೆ ಲಾಡ್ಜ್‌ವೊಂದರ ಕೋಣೆಯಲ್ಲಿ ಹೆಪ್ಪುಗಟ್ಟಿದ ರಕ್ತದ ಕಲೆಗಳ ನಡುವೆ ಯುವತಿಯ ಶವ ಅಸ್ತವ್ಯಸ್ತವಾಗಿ ಬಿದ್ದಿರುವುದು ಕಂಡು ಬಂದಿದೆ. ಶವ ಕೊಳೆತ ‍ಸ್ಥಿತಿಯಲ್ಲಿತ್ತು. ಪೊಲೀಸ್‌ ಮಹಜರ್‌ಗೆ ಸಾಕಷ್ಟು ಸಮಯ ಹಿಡಿದಿತ್ತು, ಇದಕ್ಕೆ ಕಾರಣ ಲಾಡ್ಜ್‌ನಲ್ಲಿ ಯಾವೊಂದು ಸುಳಿವು ಸಿಗದಿರುವುದು. ಯುವತಿಯ ಜೊತೆಗೆ ಬಂದಿದ್ದ ವ್ಯಕ್ತಿಯೊಬ್ಬ ಆಕೆಯ ಕತ್ತು ಸೀಳಿ ಕೊಂದು, ಮಾರಕಾಸ್ತ್ರವನ್ನು ನೀರಿನಲ್ಲಿ ಹಾಕಿ, ಕೈ ಕಾಲು ತೊಳೆದುಕೊಂಡು ಅಲ್ಲಿಂದ ಹೋಗಿದ್ದ. ಇದ್ಯಾವುದು ಲಾಡ್ಜ್‌ನ ಮಾಲೀಕರಿಗೆ ತಿಳಿದಿಲ್ಲ. 

ದಾಖಲೆ ಇಲ್ಲದೇ ಲಾಡ್ಜ್‌ ರೂಂ ಕೊಟ್ಟ ಸಿಬ್ಬಂದಿ

ಪ್ರಾಥಮಿಕ ಹಂತದಲ್ಲಿ ಯುವಕ ಮತ್ತು ಯುವತಿ ಲಾಡ್ಜ್‌ಗೆ ಬಂದು ರೂಂ ಮಾಡಿದ್ದಾರೆ. ಅವರಿಂದ ಯಾವುದೇ ದಾಖಲೆಗಳನ್ನ ಪಡೆಯದ ಸಿಬ್ಬಂದಿ ಕೋಣೆ ನೀಡಿದ್ದಾರೆ. ಆನಂತರ ಅವರ ಇರುವಿಕೆಯ ಬಗ್ಗೆಯು ವಿಚಾರಿಸಿಲ್ಲ. ನಿನ್ನೆ ಕೆಟ್ಟ ವಾಸನೆ ಹೊರಬಂದ ಹಿನ್ನೆಲೆ ಪರಿಶೀಲಿಸಿದಾಗ ಕೊಲೆಯಾಗಿರುವುದು ಗೊತ್ತಾಗಿದೆ. ಇನ್ನೂ ಯುವತಿ ಯಾರು? ಎಲ್ಲಿಯುವಳು ಎಂಬುದು ಸಹ ಗೊತ್ತಾಗಿಲ್ಲ. ಇದರ ಬಗ್ಗೆ ಪೊಲೀಸ್‌ ಟೀಂ ಪರಿಶೀಲನೆ ನಡೆಸ್ತಿದೆ. 

ವಿಧಿ ವಿಜ್ಞಾನ ಇಲಾಖೆ ಸಿಬ್ಬಂದಿ ದೌಡು

ಇನ್ನೂ ವಿಧಿ ವಿಜ್ಞಾನ ಇಲಾಖೆಯ ಸಿಬ್ಬಂದಿ ತಂಡ ಸ್ಥಳಕ್ಕೆ ಬಂದಿದ್ದು ಸಾಕ್ಷ್ಯಗಳನ್ನು ಕಲೆಹಾಕಿದೆ. ಮೇಲ್ನೋಟಕ್ಕೆ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ತನಿಖಾ ಹಂತದಲ್ಲಿ ಹೆಚ್ಚಿನ ಮಾಹಿತಿ ನೀಡಲು ಪೊಲೀಸ್‌ ಇಲಾಖೆಯ ಅಧಿಕಾರಿಗಳಿಂದಲೂ ಸಾಧ್ಯವಾಗುತ್ತಿಲ್ಲ. ನಡೆದ ಘಟನೆಯ ಕ್ಲೂಗಳು ಇಲ್ಲದಿರುವುದರಿಂದ ಪೊಲೀಸ್‌ ಅಧಿಕಾರಿಗಳು ಲಾಡ್ಜ್‌ ಮಾಲೀಕರ ಬೇಜವಾಬ್ದಾರಿತನದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸೂಚನೆ ನೀಡಿದ್ದಾರೆ.