Andar Bahar card counting / ಬೆಜ್ಜವಳ್ಳಿ ಜಾತ್ರೆಯಲ್ಲಿ ಅಂದರ್ ಬಾಹರ್​ಗೆ ಬ್ರೇಕ್​ ಹಾಕಿದ ಪೊಲೀಸ್ ! ಮಲೆನಾಡು ಟುಡೆ ವರದಿ ಎಫೆಕ್ಟ್!

ಹಂಚಿಕೊಳ್ಳಿ
WhatsApp Facebook X Telegram

SHIVAMOGGA  |  Jan 14, 2024  |  ಶಿವಮೊಗ್ಗ ಜಿಲ್ಲೆ ಬೆಜ್ಜವಳ್ಳಿ ಜಾತ್ರೆಯ ನಡುವೆ ಸ್ಟಾಲ್ ಹಾಕಿ ಇಸ್ಪೀಟ್ ಅಂದರ್ ಬಾಹರ್​ ಆಡಿಸ್ತಿರುವ ವಿಡಿಯೋಗಳು ವೈರಲ್ ಆದ ಬೆನ್ನಲ್ಲೆ  ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ವೈರಲ್ ವಿಡಿಯೋ ಎಸ್​ಪಿ ಮಿಥುನ್ ಕುಮಾರ್​ ಯವರ ಗಮನಕ್ಕೆ ತರಲಾಗಿತ್ತು. 

ಅಲ್ಲದೆ ಇಸ್ಪೀಟ್ ಅಂದರ್ ಬಾಹರ್​ ಆಟ ಆಡಿಸ್ತಿರುವ ಬಗ್ಗೆ ಮಲೆನಾಡು ಟುಡೆ ಎಕ್ಸ್​ ಕ್ಲ್ಯೂಸಿವ್ ಆಗಿ ವರದಿ ಮಾಡಿತ್ತು.ವರದಿಯ ಬೆನ್ನಲ್ಲೆ ಮಾಳೂರು ಪೊಲೀಸ್ ಸ್ಟೇಷನ್ ಪೊಲೀಸರು ದಾಳಿ ನಡೆಸಿ ಸ್ಟಾಲ್​ಗಳನ್ನು ತೆರವುಗೊಳಿಸಿದ್ದಾರೆ. ಅಲ್ಲದೆ ಈ ಸಂಬಂಧ ಪ್ರಕರಣವನ್ನು ಸಹ ದಾಖಲಿಸಿದ್ದಾರೆ ಎಂಬ ಮಾಹಿತಿಯು ಲಭ್ಯವಾಗಿದೆ. ಯಾರ ವಿರುದ್ಧ ದಾಖಲಾಗಿದೆ. ಇಸ್ಪೀಟ್ ಆಡಿಸುತ್ತಿರುವ ಟೀಂ ಯಾವುದು ಎಂಬಿತ್ಯಾದಿ ಮಾಹಿತಿಗಳು ಇನ್ನಷ್ಟೆ ಗೊತ್ತಾಗಬೇಕಿದೆ. 

ಇಸ್ಪೀಟ್ ಅಂದರ್ ಬಾಹರ್ ಜಾತ್ರೆ 

ಇದರ ಜನರ ಅಲ್ಪಸ್ವಲ್ಪ ಕಾಸನ್ನ ಖಾಲಿಮಾಡಿಸಿ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಬೆಜ್ಜವಳ್ಳಿ ಜಾತ್ರೆಯಲ್ಲಿ ಇಸ್ಪೀಟ್ ಆಟಗಳನ್ನ ಬಹಿರಂಗವಾಗಿಯೇ ಆಟವಾಡಿಸಲಾಗುತ್ತಿದೆ. ದೇವಸ್ಥಾನದ ಸಮೀಪವೇ ಅಕ್ರಮ ಇಸ್ಪೀಟ್ ಆಟ ನಡೆಯುತ್ತಿರುವುದು ಅಚ್ಚರಿ ಮೂಡಿಸಿದ್ದು ಹಲವರಲ್ಲಿ  ಆಕ್ರೋಶ ಮೂಡಿಸಿದೆ. 

ಎಂಟು ಸ್ಟಾಲ್​ಗಳಲ್ಲಿ ಅಂದರ್ ಬಾಹರ್

ಸುಮಾರು ಎಂಟು ಸ್ಟಾಲ್​ಗಳನ್ನ ಇಸ್ಪೀಟ್ ಆಟಕ್ಕಾಗಿ ಹಾಕಲಾಗಿದ್ದು, ಅದರ ದೃಶ್ಯಗಳನ್ನು ಮಲೆನಾಡು ಟುಡೆಗೆ ಸ್ಥಳೀಯರು ಕಳುಹಿಸಿದ್ದರು. ಈ ವಿಡಿಯೋವನ್ನು ಮಲೆನಾಡು ಟುಡೆ ತಂಡ ಎಸ್​ಪಿ ಮಿಥುನ್ ಕುಮಾರ್​ರವರ ಗಮನಕ್ಕೆ ತಂದು ಅವರಿಗೆ ವಿಡಿಯೋವನ್ನು ವರ್ಗಾಯಿಸಿದೆ. ಸದ್ಯ ಎಸ್​ಪಿ ಮಿಥುನ್ ಕುಮಾರ್​ ರವರು ಈ ಬಗ್ಗೆ ಪರಿಶೀಲಿಸುವುದಾಗಿ ಹೇಳಿದ್ದರು. 

ಏನಿದು ಇಸ್ಪೀಟ್​​ ಅಕ್ರಮದ ಆಟ

ಇಸ್ಪೀಟ್​ ಎಲೆಯಲ್ಲಿ ಒಟ್ಟು 52 ಕಾರ್ಡ್​ ಇರುತ್ತವೆ. ಸ್ಟಾಲ್​ಗಳಲ್ಲಿ ಈ ಕಾರ್ಡ್​ಗಳನ್ನು ಬಳಸಿ ಅಂದರ್ ಬಾಹರ್ ಆಡುತ್ತಾರೆ. ಆಟ ಆಡಿಸುವಾತ ಒಂದು ಎಲೆ ಹೊರಗೆ ಒಂದು ಎಲೆ ಒಳಗೆ ಹಾಕುತ್ತಾನೆ. ಆಗ ನೆಕ್ಟ್​ ಕಾರ್ಡ್​ ಯಾವುದು ಬರುತ್ತೆ ಅಂತಾ ಹಣ ಕಟ್ಟಲಾಗುತ್ತದೆ. 

ಹಳ್ಳಿಗರಿಗೆ ಮೋಸ

ಇದು ಆಟವಾದರೆ, ಇದರಲ್ಲಿ ಇಸ್ಪೀಟ್ ಎಲೆಗಳನ್ನು ತೆಗೆದಿಟ್ಟು ಬೇರೆ ಎಲೆ ಬರುವಂತೆ ಮಾಡಿ ಮೋಸಮಾಡುತ್ತಾರೆ. ಹಳ್ಳಿಜನಗಳಿಗೆ ಅಂದರ್ ಬಾಹರ್​ನ ಒಳಗಿನ ಕರಾಮತ್ತು ಗೊತ್ತಿರುವುದಿಲ್ಲ. ಹೀಗಾಗಿ ಮೋಸ ಹೋಗುತ್ತಾರೆ. 


ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor