ಒಂದೇ ದಿನ 6 ಅಪ*ಘಾತ, ಓರ್ವ ಸಾವು!ಜೆಸಿ ಆಸ್ಪತ್ರೆ ವೈದ್ಯರ ವಿರುದ್ಧ ಸಿಟ್ಟಾದ ಶಾಸಕ ಆರಗ ಜ್ಞಾನೇಂದ್ರ

ಹಂಚಿಕೊಳ್ಳಿ
WhatsApp Facebook X Telegram
Six Road Accidents in Thirthahalli, One Dead; MLA Araga Jnanendra Raises Hospital Concerns
Six Road Accidents in Thirthahalli, One Dead; MLA Araga Jnanendra Raises Hospital Concerns

ಸುದ್ದಿಯ ಸ್ಥಳ: Thirthahalli, Shivamogga, Karnataka

ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ಕಳೆದ ಶನಿವಾರ ಒಂದೇ ದಿನ 6 ಕಡೆ ರಸ್ತೆ ಅಪಘಾತ ಸಂಭವಿಸಿದ್ದು, ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಆದರೆ ಈ ಘಟನೆಗಳಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಜೆಸಿ ಆಸ್ಪತ್ರೆಯಲ್ಲಿ ಇಲ್ಲ ಎಂಬುದು ಶಾಸಕ ಆರಗ ಜ್ಞಾನೇಂದ್ರರ ಆಕ್ರೋಶಕ್ಕೆ ಕಾರಣವಾದ ಘಟನೆ ಬಗ್ಗೆ ವರದಿಯಾಗಿದೆ.

ಶನಿವಾರ ತೀರ್ಥಹಳ್ಳಿಯ ಬಾಳೆಬೈಲ್‌, ಗಂಟೆಹಕ್ಕಲು, ಕುಪ್ಪಳ್ಳಿ, ಕಿತ್ತನಗದ್ದೆ ಸೇರಿದಂತೆ ವಿವಿಧೆಡೆ ಅಪಘಾತ ಸಂಭವಿಸಿವೆ. ಆದರೆ ಈ ಅಪಘಾತಗಳಲ್ಲಿ ಗಾಯಗೊಂಡವರನ್ನ ಜೆಸಿ ಆಸ್ಪತ್ರೆಗೆ ಕರೆದುಕೊಂಡು ಬಂದರೆ, ಅಲ್ಲಿ ವೈದ್ಯರೇ ಇರಲಿಲ್ಲ ಎಂಬುದು ಜನರ ಆರೋಪ. ಮೇಲಾಗಿ ಕೆಲವು ವೈದ್ಯರು ಆಸ್ಪತ್ರೆಯಲ್ಲಿ ಲಭ್ಯವಿರದೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದರು ಎಂಬ ದೂರು ಸಹ ಶಾಸಕರ ಬಳಿಗೆ ಹೋಗಿದೆ. ಹೀಗಾಗಿ ಸಿಟ್ಟಾದ ಶಾಸಕ ಆರಗ ಜ್ಞಾನೇಂದ್ರ ಇತ್ತೀಚೆಗೆ ಜೆಸಿ ಆಸ್ಪತ್ರೆಯ ಕೆಲವು ವೈದ್ಯರು ಹಣದ ವ್ಯಾಮೋಹಕ್ಕೆ ಒಳಗಾಗಿದ್ದಾರೆ. ಕರ್ತವ್ಯದಲ್ಲಿರುವ ವೈದ್ಯರು ಕೂಡ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡದಿರುವುದು ತಮ್ಮ ಗಮನಕ್ಕೆ ಬಂದಿದೆ. ಈ ಸಮಸ್ಯೆಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಹಲವು ಬಾರಿ ತೆರಳಿ ಸಭೆಗಳನ್ನು ನಡೆಸಲಾಗಿದೆ. ವೈದ್ಯರಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ. ಆದರೂ ಶನಿವಾರ ಮತ್ತೆ ಇಂತಹ ದೂರುಗಳು ಕೇಳಿಬಂದಿರುವುದು ಬೇಸರದ ಸಂಗತಿ ಎಂದಿದ್ದಾರೆ.ಕರ್ತವ್ಯದಲ್ಲಿರುವ ಪ್ರತಿಯೊಬ್ಬ ವೈದ್ಯರೂ ರೋಗಿಗಳಿಗೆ ಉತ್ತಮ ರೀತಿಯ ಚಿಕಿತ್ಸೆ ನೀಡಬೇಕು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಎಂದರು.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor