ATM ಗೆ ಬೆಂಕಿ | 5 ಲಕ್ಷ ರೂಪಾಯಿ ಸುಟ್ಟು ಭಸ್ಮ | 15 ಲಕ್ಷ ನಷ್ಟ

ATM on fire 5 lakh rupees burnt 15 lakh loss Chikkamagaluru, fire accident

ATM ಗೆ ಬೆಂಕಿ | 5 ಲಕ್ಷ ರೂಪಾಯಿ ಸುಟ್ಟು ಭಸ್ಮ |  15 ಲಕ್ಷ  ನಷ್ಟ
Chikkamagaluru, fire accident

CHIKKAMAGALURU | MALENADUTODAY NEWS |  Apr 22, 2024  

ಚಿಕ್ಕಮಗಳೂರಿನಲ್ಲಿ ನಿನ್ನೆ ರಾತ್ರಿ ಅಗ್ನಿ ಆಕಸ್ಮಿಕದ ಘಟನೆಯೊಂದು ಸಂಭವಿಸಿದೆ. ಈ ಇನ್ಸಿಡೆಂಟ್‌ನಲ್ಲಿ ಎಟಿಎಂವೊಂದು ಬೆಂಕಿಗೆ ಆಹುತಿಯಾಗಿದ್ದು  ATM ನಲ್ಲಿದ್ದ ಐದು ಲಕ್ಷ ರೂಪಾಯಿ ಸುಟ್ಟುಹೋಗಿದೆ. 

ಚಿಕ್ಕಮಗಳೂರು ಪೇಟೆಯ ಐಜಿ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಇಲ್ಲಿನ ಸಾರಗೋಡು ಆರ್ಕೆಡ್‌ನಲ್ಲಿದ್ದ ಎಟಿಎಂಗೆ ನಿನ್ನೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಶಾರ್ಟ್‌ ಸರ್ಕಿಟ್‌ ನಿಂದ ಹೀಗಾಗಿರಬಹುದು ಎಂದು ಹೇಳಲಾಗುತ್ತಿದೆ. ಇನ್ನೂ ಬೆಂಕಿಯಿಂದಾಗಿ ಬ್ಯಾಂಕ್‌ವೊಂದರ 5 ಲಕ್ಷ ಹಣ ಸೇರಿದಂತೆ 15 ಲಕ್ಷ ಮೌಲ್ಯದ ಎಟಿಎಂ ಯಂತ್ರ ಸಂಪೂರ್ಣ ಭಸ್ಮವಾಗಿದೆ.