ಸಂಸತ್​ ಸ್ಥಾನದಿಂದ ಪ್ರಜ್ವಲ್ ರೇವಣ್ಣ ವಜಾ/ ಅಕ್ರಮದ ತನಿಖೆ ವೇಳೆ ಮುಖ್ಯ ಶಿಕ್ಷಕಿ ಮೈಮೇಲೆ ದೇವರು ಬಂತು/ ಮಟನ್​ನಲ್ಲಿ ಗೋಮಾಂಸ ಪತ್ತೆ/ 48 ಮಂದಿಗೆ ಪೊಲೀಸರ ಶಾಕ್​

Here is a brief report of various incidents in Shivamogga, Hassan and Chikkamagaluru districts ಶಿವಮೊಗ್ಗ , ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ವಿವಿಧ ಘಟನೆಗಳ ಸಂಕ್ಷಿಪ್ತ ವರದಿ ಇಲ್ಲಿದೆ

ಸಂಸತ್​ ಸ್ಥಾನದಿಂದ ಪ್ರಜ್ವಲ್ ರೇವಣ್ಣ ವಜಾ/ ಅಕ್ರಮದ ತನಿಖೆ ವೇಳೆ ಮುಖ್ಯ ಶಿಕ್ಷಕಿ ಮೈಮೇಲೆ ದೇವರು ಬಂತು/ ಮಟನ್​ನಲ್ಲಿ ಗೋಮಾಂಸ ಪತ್ತೆ/ 48 ಮಂದಿಗೆ ಪೊಲೀಸರ ಶಾಕ್​

KARNATAKA NEWS/ ONLINE / Malenadu today/ Sep 1, 2023 SHIVAMOGGA NEWS

ಸಂಸತ್ ಸ್ಥಾನದಿಂದ ಪ್ರಜ್ವಲ್ ರೇವಣ್ಣ ವಜಾ

ಚುನಾವಣಾ ಆಯೋಗಕ್ಕೆ ಸುಳ್ಳು ಆದಾಯ ಪ್ರಮಾಣಪತ್ರ ಸಲ್ಲಿಸಿರುವ ಆರೋಪದಡಿಯಲ್ಲಿ ಹೈಕೋರ್ಟ್​ ಪ್ರಜ್ವಲ್​ ರೇವಣ್ಣರವರನ್ನು ಸಂಸದ ಸ್ಥಾನದಿಂದ ವಜಾಗೊಳಿಸಿದೆ. ಸದ್ಯ ಈ ಸಂಬಂಧ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಪ್ರಜ್ವಲ್ ಮುಂದಾಗಿದ್ದಾರೆ. ಹಾಸನ ಲೋಕಸಭೆ ಕ್ಷೇತ್ರದ ಸಂಸದ ಪ್ರಜ್ವಲ್​ ರೇವಣ್ಣರನ್ನು ಸಂಸತ್​ ಸದಸ್ಯತ್ವದಿಂದ ರಾಜ್ಯ ಹೈಕೋರ್ಟ್​ ಅನರ್ಹಗೊಳಿಸಿ ಆದೇಶಿಸಿದೆ.2019ರ ಲೋಕಸಭೆ ಚುನಾವಣೆಯಲ್ಲಿ ಸುಳ್ಳು ಆದಾಯ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂಬ ಆರೋಪ ಅವರ ಮೇಲಿತ್ತು. ಅವರನ್ನು ಸಂಸತ್ ಸ್ಥಾನದಿಂದ  ಅಸಿಂಧುಗೊಳಿಸಬೇಕೆಂದು ಕೋರಿ ಎ.ಮಂಜು ಹಾಗೂ ಪಕ್ಷೇತರ ಅಭ್ಯರ್ಥಿ ದೇವರಾಜೇಗೌಡ ಎಂಬುವವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. 

ತನಿಖೆಗೆ ಅಧಿಕಾರಿಗಳು ಬಂದರೆ, ಮುಖ್ಯ ಶಿಕ್ಷಕಿಗೆ ದೇವರು ಬಂತು

ಶಾಲೆಯೊಂದರ ಅಕ್ರಮದ ತನಿಖೆ ಕೈಗೊಳ್ಳಲು ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಮೈಮೇಲೆ ದೇವರು ಬಂದಂತೆ ಆಡಿದ ಘಟನೆಯೊಂದು ಚಿಕ್ಕಮಗಳೂರಿನಲ್ಲಿ ನಡೆದಿದೆ. ಇಲ್ಲಿನ ಶಾಲೆಯೊಂದರಲ್ಲಿ ಮೈಮೇಲೆ ದೇವರು ಬಂದಂತೆ ಆಡಿದ ಮುಖ್ಯ ಶಿಕ್ಷಕಿ ಯಾರನ್ನೂ ಬಿಡಲ್ಲ, ಒಂಬತ್ತು ಜನರ ಬಲಿ ಪಡೆದೇ ಪಡೀತೇನೆ ಎಂದು ಅಬ್ಬರಿಸಿದ್ದಾರೆ. ಆನಂತರ  ಬಿಇಒ ರವರ ಎದುರು ತಮಗೆ  ದೇವಸ್ಥಾನ ಕಟ್ಟಿಕೊಡಬೇಕು. ಇಲ್ಲಂದ್ರೆ ಯಾರನ್ನೂ ಬಿಡಲ್ಲ ಎಂದೆಲ್ಲ  ಹೇಳಿದ್ದರ ಬಗ್ಗೆ ವರದಿಯಾಗಿದೆ  

ಮಟನ್​ನಲ್ಲಿ ಗೋಮಾಂಸ ಪತ್ತೆ ದಾಖಲಾಯ್ತು ಕೇಸ್

ಚಿಕ್ಕಮಗಳೂರು ನಗರದ ಎರಡು ಪ್ರತಿಷ್ಠಿತ ಹೋಟೆಲ್‌ನಲ್ಲಿ ಮಟನ್ ಬಿರಿಯಾನಿ ಜೊತೆ ಗೋಮಾಂಸ ವನ್ನು ಮಿಕ್ಸ್ ಮಾಡಲಾಗುತ್ತಿದೆ ಆರೋಪದಡಿಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲದೆ ಈ ಸಂಬಂಧ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಮಟನ್ ಬಿರಿಯಾನಿ ಜೊತೆ ಗೋಮಾಂಸವನ್ನು ಮಿಕ್ಸ್ ಮಾಡಲಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಮಾಂಸವನ್ನು ವಶಕ್ಕೆ ಪಡೆದು, ಅದರ ಸ್ಯಾಂಪಲ್ ಪಡೆದುಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. 

48 ಮಂದಿಗೆ ಶಾಕ್​ ಕೊಟ್ಟ ಪೊಲೀಸ್​ 

ಶಿವಮೊಗ್ಗ-ಎ, ಶಿವಮೊಗ್ಗ-ಬಿ ಮತ್ತು ಭದ್ರಾವತಿ  ಉಪ ವಿಭಾಗ ವ್ಯಾಪ್ತಿಯ ಪೊಲೀಸ್ ಠಾಣೆಗಳ ಪೊಲೀಸರು ಆಯಾ ಠಾಣಾ ವ್ಯಾಪ್ತಿಯ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ Area Domination ವಿಶೇಷ ಗಸ್ತು ಮುಂದುವರಿಸಿದ್ದಾರೆ.  ಇದಕ್ಕೆ ಪೂರಕವಾಗಿ ದಿನಾಂಕ: 31-08-2023 ರಂದು ಸಂಜೆ Public Nuisance ಮಾಡುವ ಮತ್ತು ಅನುಮಾನಸ್ಪಾದ ವ್ಯಕ್ತಿಗಳನ್ನು ಠಾಣೆಗೆ ಕರೆತಂದು, ಅವರುಗಳ ಪೂರ್ವಾಪರಗಳನ್ನು ಪರಿಶೀಲಿಸಿ, Public Nuisance ಮಾಡಿದ ವ್ಯಕ್ತಿಗಳ ವಿರುದ್ದ ಒಟ್ಟು 48 ಲಘು ಪ್ರಕರಣಗಳನ್ನು ಮತ್ತು 04 IMV ಪ್ರಕರಣಗಳನ್ನು ದಾಖಲಿಸಿದ್ದಾರೆ 


ಇನ್ನಷ್ಟು ಸುದ್ದಿಗಳು