ವಾಣಿಜ್ಯ ವಿಮಾನಯಾನದ ಎರಡನೇ ದಿನ, ಟರ್ಮಿನಲ್ ಬಳಿ ನಡೆಯಿತು ಪ್ರತಿಭಟನೆ! ಕಾರಣ?

Malenadu Today

KARNATAKA NEWS/ ONLINE / Malenadu today/ Sep 1, 2023 SHIVAMOGGA NEWS

ಕುವೆಂಪು ವಿಮಾನ ನಿಲ್ದಾಣದಲ್ಲಿ ವಿವಿಧ ಮಾಹಿತಿಯನ್ನು ನೀಡುವ ಬೋರ್ಡ್​ಗಳಲ್ಲಿ ಕನ್ನಡಕ್ಕೆ ಆಧ್ಯತೆ ನೀಡದಿರುವುದರ ಬಗ್ಗೆ ಈಗಾಗಲೇ ವಿರೋಧ ವ್ಯಕ್ತವಾಗಿದ್ದು, ಈ ಸಂಬಂದ ಸಚಿವ ಎಂಬಿ ಪಾಟೀಲ್ ಪರಿಶೀಲಿಸುವುದಾಗಿ ಹೇಳಿದ್ಧಾರೆ. 

ಇದರ ನಡುವೆ  ವಿಮಾನ ನಿಲ್ದಾಣದ ಎದುರು, ಕನ್ನಡಕ್ಕೆ ಆದ್ಯತೆ ನೀಡುವುದರ ಜೊತೆಗೆ  ರಾಷ್ಟ್ರಕವಿ ಕುವೆಂಪು ಅವರ ನಾಮಫಲಕ ಹಾಕಬೇಕು ಎಂದು ಆಗ್ರಹಿಸಿ, ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿದೆ.  ಟರ್ಮಿನಲ್ ಎದುರು ಧರಣಿ ನಡೆಸಿದ ಕಾರ್ಯಕರ್ತರು ಈ ಸಂಬಂದ ಮನವಿ ಸಲ್ಲಿಸಿದ್ರು.  

 ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಮಾಹಿತಿ ನೀಡುವ ಫಲಕಗಳಲ್ಲಿ ಇಂಗ್ಲೀಷ್, ಹಿಂದಿ ಭಾಷೆಗೆ ಒತ್ತು ನೀಡಲಾಗಿದೆ. ಕನ್ನಡ ಭಾಷೆಯ ಕಡೆಗಣನೆ ಮಾಡಲಾಗಿದೆ ಎಂದು ಇದೇ ವೇಳೆ ಕಾರ್ಯಕರ್ತರು ಆರೋಪಿಸಿದ್ರು.  ಅಲ್ಲದೆ ವಿಮಾನನಿಲ್ದಾಣದಲ್ಲಿ ಕುವೆಂಪು ವಿಮಾನ ನಿಲ್ದಾಣ ಎಂಬ ಹೆಸರು ಎಲ್ಲಿಯು ಕಾಣುತ್ತಿಲ್ಲ ಶೀಘ್ರವೇ ಬೋರ್ಡ್​ ಹಾಕಬೇಕು ಎಂದು ಆಗ್ರಹಿಸಿದ್ರು.  


ಇನ್ನಷ್ಟು ಸುದ್ದಿಗಳು 


 

 

Share This Article