ಈ ರಸ್ತೆಯಲ್ಲಿ ಆಕ್ಸಿಡೆಂಟ್​ ನಿರಂತರ! ಪ್ಲೀಸ್​ ಜೀವ ಉಳಿಸಿ ಎಂದು ಫೇಸ್​ಬುಕ್​ ಪೋಸ್ಟ್​ ಹಾಕಿ SP ,DC, ತಹಶೀಲ್ದಾರ್​ಗೆ ಮನವಿ

Malenadu Today

KARNATAKA NEWS/ ONLINE / Malenadu today/ Aug 8, 2023 SHIVAMOGGA NEWS

ಶಿವಮೊಗ್ಗದ ಮಲ್ಲಿಗೇನಹಳ್ಳಿಯಿಂದ ಶಾಂತಿ ನಗರದವರೆಗೆ ಪದೇಪದೇ ಆಕ್ಸಿಡೆಂಟ್​ ಆಗ್ತಿದೆ ಎಂದು ಸ್ಥಳೀಯ ನಿವಾಸಿಯೊಬ್ಬರು ಶಿವಮೊಗ್ಗ ಎಸ್​ಪಿ, ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಭದ್ರಾವತಿ ತಹಶೀಲ್ದಾರ್​ರವರಿಗೆ ತಮ್ಮ ಫೇಸ್​ಬುಕ್ ಖಾತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಮೋಹನ್ ವೀರಭದ್ರಪ್ಪ ಎಂಬವರು ಎಸ್​ಹೆಚ್​ 57 ನಲ್ಲಿ ಸಂಭವಿಸಿದ ಆಕ್ಸಿಡೆಂಟ್​ಗಳ ಫೋಟೋಗಳನ್ನು ಹಾಕಿ ಅದರ ಬಗ್ಗೆ ವಿವರಿಸಿ, ಸ್ಥಳದಲ್ಲಿ ಬ್ಯಾರಿಕೇಡ್​ ಅಥವಾ ಸೂಚನ ಫಲಕವನ್ನು ಅಳವಡಿಸುವಂತೆ ಮಾಡಿದ್ದಾರೆ. 

ಫೇಸ್​ಬುಕ್​ ಪೋಸ್ಟ್​ ನಲ್ಲಿ ಏನಿದೆ

ಮಾನ್ಯ ಪೊಲೀಸ್ ಇಲಾಖೆ SP Shivamogga SP Shivamogga /ಗ್ರಾಮ ಪಂಚಾಯತ್ /ತಹಶೀಲ್ದಾರ್ ರವರು ಭದ್ರಾವತಿ /ಜಿಲ್ಲಾಧಿಕಾರಿಗಳು ಶಿವಮೊಗ್ಗ ಜಿಲ್ಲೆ.

#ಮನವಿ: ಮಲ್ಲಿಗೇನಹಳ್ಳಿ ಇಂದ ಶಾಂತಿನಗರದ ವರೆಗೆ SH57 ರಸ್ತೆಯಲ್ಲಿ ನೆಡೆಯುತ್ತಿರುವ ಅಪಘಾತಗಳನ್ನು ತಡೆಯಲು ಬ್ಯಾರಿಗೇಡ್ ಅಥವಾ ಸೂಚನಾ ಫಲಕ ಹಾಕುವ ಬಗ್ಗೆ.

#ಮಾನ್ಯರೇ :

ತಮಲ್ಲಿ ಕೇಳಿಕೊಳ್ಳುವುದು ಏನಂದರೆ ಕಳೆದ ಎರಡು ತಿಂಗಳಿಂದ ಮಲ್ಲಿಗೇನಹಳ್ಳಿ ಇಂದ ಶಾಂತಿನಗರದ ವರೆಗೆ SH57 ರಸ್ತೆಯಲ್ಲಿ ತುಂಬಾ ಸಂಖ್ಯೆಯಲ್ಲಿ ವಾಹನ ಅಪಘಾತ ಸಾವು ನೋವುಗಳು ಸಂಬಂವಿಸಿದ್ದು ಇದರ ಬಗ್ಗೆ ಎಲ್ಲಾ ಅಧಿಕಾರಿ ವರ್ಗಗಳು ಮೌನವ್ಹಿಸಿದ್ದು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ..

1:ಈ ರಸ್ತೆಯಲ್ಲಿ ವೇಗ ಮಿತಿ ಬೋರ್ಡ್ ಗಳನ್ನ ಅಳವಡಿಸಿ ರೋಡ್ ಅಮ್ಸ್ ಗಳನ್ನು ನಿರ್ಮಿಸಿ.

2: ಗ್ರಾಮ ಪಂಚಾಯಿತಿ ವತಿಯಿಂದ ಸರಿಯಾದ ಕಸದ ವಿಲೇವಾರಿ ಆಗದ ಕಾರಣ ನಾಯಿಗಳು ಬೈಕ್ ಸವಾರರಿಗೆ ತುಂಬಾ ಅಡಚಣೆ ಮಾಡುತ್ತಿದೆ.

3:ಬೀದಿ ದೀಪದ ಸರಿಯಾದ ವ್ಯವಸ್ತೆಯನ್ನು ಸರಿಪಡಿಸಿ ಅಮಾಯಕ ಜೀವಿಗಳನ್ನು ಉಳಿಸಬೇಕಾಗಿ ತಮ್ಮಲ್ಲಿ ಸಮಸ್ತ ಗ್ರಾಮಸ್ಥರ ಪರವಾಗಿ ಕೇಳಿಕೊಳ್ಳುತ್ತೇವೆ.

 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

 

 

 

Share This Article