ಕಾರವಾರದಲ್ಲೊಂದು ಕಾಂತಾರ ಕಥೆ! ಊರಿನವರಿಗೆ ಹತ್ತಿರವಾಗಿದ್ದ ಕಾಡುಹಂದಿಯ ಶಿಕಾರಿ! ನೌಕಾನೆಲೆ ಸಮೀಪ ಸಿಕ್ತು ಸಜೀವ ಸ್ಫೋಟಕ

KARNATAKA NEWS/ ONLINE / Malenadu today/ Aug 7, 2023 SHIVAMOGGA NEWS

ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿರುವ ಸೀಬರ್ಡ್​ ನೌಕಾನೆಲೆ (Seabird Naval Base) ಸಮೀಪ ನಡೆದ ಘಟನೆಯೊಂದು ಕೆಲಕಾಲ ಆತಂಕ ಮೂಡಿಸಿದ್ದಷ್ಟೆ ಅಲ್ಲದೆ, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. 

ಪ್ರಕರಣವೇನು?

ಇಲ್ಲಿನ ನೌಕಾನೆಲೆಯ ಕಾಪೌಂಡ್​ ಸಮೀಪವೇ ನಾಡಬಾಂಬ್​ವೊಂದು ಪತ್ತೆಯಾಗಿತ್ತು. ಅದನ್ನ ಸ್ಥಳಕ್ಕೆ ಬಂದ ಪೊಲೀಸರು ನಿಷ್ಕ್ರೀಯಗೊಳಿಸಿದರು. ಅಲ್ಲದೆ ಘಟನೆ ಸಂಬಂಧ ಓರ್ವವನ್ನ ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ. 

ನಡೆದಿದ್ದೇನು?

ಕಳೆದ ಶುಕ್ರವಾರ ರಾತ್ರಿ ನೌಕಾನೆಲೆ ಕಾಂಪೌಂಡ್ ಸಮೀಪ ದೊಡ್ಡ ಸ್ಪೋಟದ ಶಬ್ಧ ಕೇಳಿಸಿದೆ  ಸ್ಥಳೀಯರು ಆತಂಕಗೊಂಡು ಶಬ್ಧ ಬಂದ ಜಾಗಕ್ಕೆ ಹೋಗಿ ನೋಡಿದ್ದಾರೆ. ಅಲ್ಲದೆ ಕಾಡು ಹಂದಿಯೊಂದು ಮೃತಪಟ್ಟಿದ್ದು ಕಂಡುಬಂದಿದೆ. ಅದನ್ನ ಕಂಡು ಜನರಿಗೆ ಸಿಟ್ಟು ಬಂದಿತ್ತು. ಏಕೆಂದರೆ, ಕಾಡುಹಂದಿ ಊರಿನವರ ಅಚ್ಚುಮೆಚ್ಚಿನ ಹಂದಿಯಾಗಿತ್ತು. ದನಕರುಗಳ ಜೊತೆಗೆ ಓಡಾಡುತ್ತಿದ್ದ ಹಂದಿಯು ಜನರು ಕೊಟ್ಟಿದ್ದನ್ನೆ ತಿಂದು ಅಲ್ಲಿಯೇ ಸುತ್ತಮುತ್ತ ಓಡಾಡುತ್ತಿತ್ತು. ಅದರಲ್ಲಿಯು ಕಾಂತಾರ ಸಿನಿಮಾದ ನಂತರ ಕಾಡು ಹಂದಿಯ ಮೇಲಿನ ಗೌರವ ವಿಶೇಷವಾಗಿತ್ತು. ಆದರೆ ಅದನ್ನೆ ಬಾಂಬ್ ಸಿಡಿಸಿ ಕೊಲ್ಲಲಾಗಿತ್ತು. ಈ ಸಂಬಂಧ ಅರಣ್ಯ ಅಧಿಕಾರಿಗಳಿಗೆ ಸ್ಥಳೀಯರು ದೂರು ನೀಡಿದ್ದಾರೆ.  ಅರಣ್ಯ ಅಧಿಕಾರಿಗಳು ಅನುಮಅನದ ಮೇಲೆ ಓರ್ವನನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. 

ವಿಚಾರಣೆ ವೇಳೆ ಆರೋಪಿ ಇನ್ನೊಂದು ನಾಡ ಬಾಂಬ್​ ಜೀವಂತವಾಗಿ ಇರುವುದರ ಬಗ್ಗೆ ಬಾಯ್ಬಿಟ್ಟಿದ್ದಾನೆ. ವಿಷಯ ತಿಳಿದು ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಬಾಂಬ್ ನಿಷ್ಕ್ರೀಯ ದಳ ಸೇರಿದಂತೆ ಸ್ಥಳಕ್ಕೆ ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿಕೊಟ್ಟು ಸರ್ಚಿಂಗ್ ಆಪರೇಷನ್ ನಡೆಸಿದ್ದಾರೆ. ಈ ವೇಳೆ ಸಜೀವ ಬಾಂಬ್ ಪತ್ತೆಯಾಗಿದ್ದು, ಅದನ್ನು ನಿಯಂತ್ರಿತವಾಗಿ ಸ್ಫೋಟಿಸಿ ಆತಂಕವನ್ನ ದೂರ ಮಾಡಿದ್ದಾರೆ. 


ಶಿವಮೊಗ್ಗದಲ್ಲಿ ಮತ್ತೊಬ್ಬ ಕಾರು ಚಾಲಕ ಅರೆಸ್ಟ್! ಗೋವಾದ ಕ್ಯಾಸಿನೋದಲ್ಲಿ ಸಿಕ್ಕಿಬಿದ್ದಆರೋಪಿ! ಏನಿದು 20 ಲಕ್ಷ ರೂಪಾಯಿ ಕೇಸ್!

ಶಿವಮೊಗ್ಗ: ಕುಡಿಯುವ ನೀರಿನ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ವೇತನ ಕೊಡಲು ತಂದಿದ್ದ 20 ಲಕ್ಷ ರೂಪಾಯಿಯನ್ನು ಕದ್ದೊಯ್ದ ಪ್ರಕರಣವನ್ನು ಶಿವಮೊಗ್ಗದ ತುಂಗಾ ನಗರ ಪೊಲೀಸ್ ಸ್ಟೇಷನ್​ ಪೊಲೀಸರು (Tunga Nagar Police Station Police) ಭೇದಿಸಿದ್ದಾರೆ.  

ಏನಿದು ಪ್ರಕರಣ? 

ಶಿವಮೊಗ್ಗ ಸಿಟಿಯಲ್ಲಿನ 24*7 ಕುಡಿಯುವ ನೀರು ಸರಬರಾಜು ಕಾಮಗಾರಿಯ ಯೋಜನಾ ವ್ಯವಸ್ಥಾಪಕ ಹೇಮಂತ್ ಕುಮಾರ್ ರವರು ಕಾರ್ಮಿಕರಿಗೆ ವೇತನ ನೀಡಲು 20 ಲಕ್ಷ ರೂಪಾಯಿ ಕ್ಯಾಶ್ ಹಿಡಿದುಕೊಂಡು ಬಂದಿದ್ದರು. ಅದನ್ನ ಜ್ಯೋತಿ ನಗರದ ಬಳಿಯಲ್ಲಿ ಅವರ ಕಾರಿನಚಾಲಕ ಕಿತ್ತುಕೊಂಡು ಪರಾರಿಯಾಗಿದ್ದ. ಜುಲೈ 29ರಂದು ಈ ಘಟನೆ ನಡೆದಿತತ್ತು. ಪ್ರಕರಣ ಸಂಬಂಧ ತುಂಗಾನಗರ ಪೊಲೀಸರು ಕೇಸ್ ದಾಖಲಿಸಿದ್ದರು. 

ಗೋವಾ ಕ್ಯಾಸಿನೋದಲ್ಲಿ ಅರೆಸ್ಟ್

ಇನ್ನೂ ತನಿಖೆ ಆರಂಭಿಸಿದ್ದ ತುಂಗಾನಗರ ಪೊಲೀಸರು ಆರೋಪಿಯ ಬೆನ್ನುಹತ್ತಿದ್ದಾರೆ. ಆತನಿಗೆ ಕ್ಯಾಸಿನೋದಲ್ಲಿ ಜೂಜಾಡುವ ಚಟವಿತ್ತು ಎಂದು ತಿಳಿದ ಪೊಲೀಸರು ಗೋವಾದಲ್ಲಿ ಆರೋಪಿಯ ಇರುವಿಕೆಯನ್ನ ಪತ್ತೆ ಮಾಡಿದ್ಧಾರೆ. ಅಲ್ಲಿಗೆ ತೆರಳಿದ್ದ ತನಿಖಾ ತಂಡ, ಕ್ಯಾಸಿನೋದಿಂದಲೇ ಆರೋಪಿಯನ್ನ ಬಂಧಿಸಿ ಕರೆತಂದಿದೆ. ಕದ್ದಿದ್ದ 20 ಲಕ್ಷ ರೂಪಾಯಿಯಲ್ಲಿ ಆರೋಪಿ ಅದಾಗಲೇ  12.39 ಲಕ್ಷ ರೂಪಾಯಿಯನ್ನು ಜೂಜಾಡಿ ಕಳೆದಿದ್ದ. ಸದ್ಯ ಆತನಿಂದ  7.61 ಲಕ್ಷ ರೂಪಾಯಿಯನ್ನ ಪೊಲೀಸರು ಜಪ್ತಿ ಮಾಡಿದ್ದಾರೆ. 

ಇನ್ನಷ್ಟು ಸುದ್ದಿಗಳು 

 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

 

Leave a Comment