ಪೋಕ್ಸೋ ಕೇಸ್​ ನಲ್ಲಿ 27 ರ ಯುವಕನಿಗೆ 20 ವರ್ಷ ಶಿಕ್ಷೆ ಕೋರ್ಟ್ ಶಿವಮೊಗ್ಗ ಕೋರ್ಟ್! ಅಪ್ರಾಪ್ತೆಯರ ತಂಟೆಗೆ ಹೋದರೆ ಹುಷಾರ್!

Malenadu Today

KARNATAKA NEWS/ ONLINE / Malenadu today/ Aug 6, 2023 SHIVAMOGGA NEWS

14 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ 27 ವರ್ಷದ ಆರೋಪಿಗೆ ಬರೋಬ್ಬರಿ 20 ವರ್ಷ ಶಿಕ್ಷೆ ನೀಡಲಾಗಿದೆ. ಈ ಸಂಬಂಧ The Addl District and Sessions Court, FTSC–II (POCSO) Shivamogga ನ್ಯಾಯಾಲಯ ತೀರ್ಪು ನೀಡಿದೆ. 

ಏನಿದು ಪ್ರಕರಣ?

2022ನೇ ಸಾಲಿನಲ್ಲಿ ಶಿವಮೊಗ್ಗ ಟೌನ್ ನ 27 ವರ್ಷದ ವ್ಯಕ್ತಿಯೊಬ್ಬನು, 14  ವರ್ಷದ ಅಪ್ರಾಪ್ತ ವಯ್ಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಕೇಳಿಬಂದಿತ್ತು. ಈ ಸಂಬಂಧ  ನೊಂದ ಬಾಲಕಿಯ ತಂದೆಯು ದೂರು ನೀಡಿದ್ದರು. ಆನಂತರ ಪ್ರಕರಣವೂ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಕೊಂಡಿತ್ತು. ಅಂದಿನ ತನಿಖಾಧಿಕಾರಿ ಡಿವೈಎಸ್​ಪಿ ಬಾಲರಾಜ್​  ಆರೋಪಿ ವಿರುದ್ಧ ಕೋರ್ಟ್​ಗೆ ಚಾರ್ಜ್​ ಶೀಟ್​ ಸಲ್ಲಿಸಿದ್ರು.  

ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ  ಹರಿಪ್ರಸಾದ್  ವಾದ ಮಂಡಿಸಿದ್ದು, The Addl District and Sessions Court, FTSC–II (POCSO) Shivamogga ನ್ಯಾಯಾಲಯ ಇದೀಗ ತೀರ್ಪು ನೀಡಿದೆ. ಈ ಸಂಬಂಧ 04-08-2023 ರಂದು ಆರೋಪಿತನಿಗೆ 20 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು 1,50,000 /- ರೂ ದಂಡ, ದಂಡಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 09 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ  ಆದೇಶ ನೀಡಿದೆ. 

ಇನ್ನಷ್ಟು ಸುದ್ದಿಗಳು 

 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

 

Share This Article