ತಾಯಿ ಜಗನ್ಮಾತೆ ಈ ಸುಂದರನ ಸರ್ವಾಂಗ ಸುಂದರನಾಗಿ ಮಾಡುವಳೇ!? ವೈರಲ್ ಆಯ್ತು ಹರಕೆ!

A letter written by a devotee to God asking him to make himself beautiful has gone viral. ತನ್ನನ್ನು ಸುಂದರನಾಗಿಸಬೇಕು ಎಂದು ದೇವರಿಗೆ ಭಕ್ತನೊಬ್ಬ ಬರೆದ ಪತ್ರ ವೈರಲ್ ಆಗಿದೆ.

ತಾಯಿ ಜಗನ್ಮಾತೆ ಈ ಸುಂದರನ ಸರ್ವಾಂಗ ಸುಂದರನಾಗಿ ಮಾಡುವಳೇ!? ವೈರಲ್ ಆಯ್ತು ಹರಕೆ!

KARNATAKA NEWS/ ONLINE / Malenadu today/ Aug 5, 2023 SHIVAMOGGA NEWS ನಾನೊಬ್ಬ ನಟನಾಗಬೇಕು, ಫ್ಯಾಷನ್​ ಮಾಡೆಲ್ ಆಗಬೇಕು, ನಿಮ್ಮಂದತೆ ಸರ್ವಾಂಗ ಸುಂದರನಾಗಬೇಕು ಎಂದು ದೇವರಿಗೆ ಭಕ್ತನೊಬ್ಬ ಪತ್ರ ಬರೆದಿದ್ಧಾನೆ. ಅಲ್ಲದೆ ಕನಸನ್ನ ನನಸು ಮಾಡುವ ಹೊಣೆ ನಿನ್ನದೇ ಬೇಡಿಕೊಂಡಿದ್ಧಾನೆ. 

 

ಚಿಕ್ಕಮಗಳೂರಿನ ಕಳಸದ (kalasa temple) ಕಳಸೇಶ್ವರ ಸ್ವಾಮಿ ದೇವಾಲಯದ ಹುಂಡಿಯಲ್ಲಿ ಈ ಪತ್ರ ಸಿಕ್ಕಿದೆ. ಹುಂಡಿ ಎಣಿಕೆ ಸಂದರ್ಭದಲ್ಲಿ ಭಕ್ತನ ಹರಕೆ ಪತ್ರವೂ ಲಭ್ಯವಾಗಿದೆ. ಸದ್ಯ ಈ ಪತ್ರ ವೈರಲ್​ ಆಗಿದ್ದು, ತಾಯಿ ಗಿರಿಜಾದೇವಿಗೆ ಹರಕೆ ಸಲ್ಲಿಸಿದ ಪತ್ರ ಇದಾಗಿದೆ.  

VISL & ಪೆನ್​ ಡ್ರೈವ್​ ಬಗ್ಗೆ ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಹೇಳಿದ್ದೇನು?



ಭದ್ರಾವತಿ ವಿಐಎಸ್ ಎಲ್ ಕಾರ್ಖಾನೆ ಆರಂಭಗೊಳ್ಳುವುದರ ಕುರಿತು ಪ್ರತಿಕ್ರಿಯೆ ನೀಡಿದ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಇನ್ನೊಂದು 7 ತಿಂಗಳಿಗೆ ಲೋಕಸಭೆ ಚುನಾವಣೆ ಬರಲಿದೆ. ಹೀಗಾಗಿ ವಿಐಎಸ್‌ ಎಲ್‌ ಕಾರ್ಖಾನೆಗೆ ತಾತ್ಕಾಲಿಕವಾಗಿ ಚಾಲನೆ ಕೊಟ್ಟಿದ್ದಾರೆ. ಪೂರ್ಣವಾಗಿ ಚಾಲನೆ ಕೊಟ್ಟರೆ, ಕಾರ್ಖಾನೆ ಮುಚ್ಚದೇ ಮುಂದುವರಿಸಿದರೆ ಒಳ್ಳೆಯದು ಎಂದರು. 

ನಗರದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ವಿಐಎಸ್ ಎಲ್, ಎಂಪಿಎಂ ಕಾರ್ಖಾನೆ ಶಿವಮೊಗ್ಗ ಜಿಲ್ಲೆಗೆ ಕಿರೀಟವಿದ್ದಂತೆ. ಕಾರ್ಖಾನೆ ನಡೆಸಲು ಹೊರೆ ಇರುತ್ತದೆ. ಅದನ್ನು ಉಳಿಸುವುದು ಕೇಂದ್ರ ಸರ್ಕಾರದ ಕೈಯಲ್ಲಿದೆ ಎಂದಿದ್ದಾರೆ. 

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನಿಸಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಈ ರೀತಿ ಹೇಳಿಕೆ ನೀಡುವುದರ ಮೂಲಕ ಅವರ ಯೋಗ್ಯತೆ ಏನುಅಂತಾ ತೋರಿಸಿಕೊಟ್ಟಿದ್ದಾರೆ. ಅವರ ಬಗ್ಗೆ ಮಾತನಾಡುವುದಿಲ್ಲ. ನಾವು ರಾಜಕಾರಣಿಗಳು ಎಲ್ಲರಿಗೂ ಮಾದರಿಯಾಗಿರಬೇಕು. ಮೊದಲು ಖರ್ಗೆ ಅಂದ್ರು, ಆಮೇಲೆ ಇಲ್ಲ ಅಂದ್ರು. ವ್ಯಕ್ತಿಗತ ನಿಂದನೆ ಒಳ್ಳೆಯದಲ್ಲ, ಅದು ನಿಲ್ಲಬೇಕು.  ಅಭಿವೃದ್ಧಿ ಕಾರ್ಯಕ್ರಮದ ಬಗ್ಗೆ ಮಾತನಾಡಬೇಕು ಎಂದರು.

ಇನ್ನೂ ಇದೇ ವೇಳೆ ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆದಿದೆ ಎಂಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ವರ್ಗಾವಣೆ ಕುರಿತು ಮಾತನಾಡುವ ಕುಮಾರಸ್ವಾಮಿ ಅವರು ಈ ಕೆಲಸವನ್ನು ಎಷ್ಟು ಸಲ ಮಾಡಿದ್ದಾರೆ ? ಪೆನ್ ಡ್ರೈವ್ ಇಟ್ಟುಕೊಂಡು ಬಂದರೂ ಏನು ಆಗಲಿಲ್ಲ. ಆ ರೀತಿ ದೂರು ಇದ್ದರೆ ನನಗೆ ತಿಳಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಸಿಎಂ ಹೇಳಿದ್ದಾರೆ. ಈ ರೀತಿ ಹೇಳಿಕೆಗಳು ಅವರಿಗೆ ಶೋಭೆ ತರುವುದಿಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.  




ಇನ್ನಷ್ಟು ಸುದ್ದಿಗಳು 



 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು