VISL & ಪೆನ್ ಡ್ರೈವ್ ಬಗ್ಗೆ ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಹೇಳಿದ್ದೇನು?
What did Madhu Bangarappa say in Shivamogga about VISL & Pen Drive? VISL & ಪೆನ್ ಡ್ರೈವ್ ಬಗ್ಗೆ ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಹೇಳಿದ್ದೇನು?

KARNATAKA NEWS/ ONLINE / Malenadu today/ Aug 5, 2023 SHIVAMOGGA NEWS
ಭದ್ರಾವತಿ ವಿಐಎಸ್ ಎಲ್ ಕಾರ್ಖಾನೆ ಆರಂಭಗೊಳ್ಳುವುದರ ಕುರಿತು ಪ್ರತಿಕ್ರಿಯೆ ನೀಡಿದ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಇನ್ನೊಂದು 7 ತಿಂಗಳಿಗೆ ಲೋಕಸಭೆ ಚುನಾವಣೆ ಬರಲಿದೆ. ಹೀಗಾಗಿ ವಿಐಎಸ್ ಎಲ್ ಕಾರ್ಖಾನೆಗೆ ತಾತ್ಕಾಲಿಕವಾಗಿ ಚಾಲನೆ ಕೊಟ್ಟಿದ್ದಾರೆ. ಪೂರ್ಣವಾಗಿ ಚಾಲನೆ ಕೊಟ್ಟರೆ, ಕಾರ್ಖಾನೆ ಮುಚ್ಚದೇ ಮುಂದುವರಿಸಿದರೆ ಒಳ್ಳೆಯದು ಎಂದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ವಿಐಎಸ್ ಎಲ್, ಎಂಪಿಎಂ ಕಾರ್ಖಾನೆ ಶಿವಮೊಗ್ಗ ಜಿಲ್ಲೆಗೆ ಕಿರೀಟವಿದ್ದಂತೆ. ಕಾರ್ಖಾನೆ ನಡೆಸಲು ಹೊರೆ ಇರುತ್ತದೆ. ಅದನ್ನು ಉಳಿಸುವುದು ಕೇಂದ್ರ ಸರ್ಕಾರದ ಕೈಯಲ್ಲಿದೆ ಎಂದಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನಿಸಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಈ ರೀತಿ ಹೇಳಿಕೆ ನೀಡುವುದರ ಮೂಲಕ ಅವರ ಯೋಗ್ಯತೆ ಏನುಅಂತಾ ತೋರಿಸಿಕೊಟ್ಟಿದ್ದಾರೆ. ಅವರ ಬಗ್ಗೆ ಮಾತನಾಡುವುದಿಲ್ಲ. ನಾವು ರಾಜಕಾರಣಿಗಳು ಎಲ್ಲರಿಗೂ ಮಾದರಿಯಾಗಿರಬೇಕು. ಮೊದಲು ಖರ್ಗೆ ಅಂದ್ರು, ಆಮೇಲೆ ಇಲ್ಲ ಅಂದ್ರು. ವ್ಯಕ್ತಿಗತ ನಿಂದನೆ ಒಳ್ಳೆಯದಲ್ಲ, ಅದು ನಿಲ್ಲಬೇಕು. ಅಭಿವೃದ್ಧಿ ಕಾರ್ಯಕ್ರಮದ ಬಗ್ಗೆ ಮಾತನಾಡಬೇಕು ಎಂದರು.
ಇನ್ನೂ ಇದೇ ವೇಳೆ ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆದಿದೆ ಎಂಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ವರ್ಗಾವಣೆ ಕುರಿತು ಮಾತನಾಡುವ ಕುಮಾರಸ್ವಾಮಿ ಅವರು ಈ ಕೆಲಸವನ್ನು ಎಷ್ಟು ಸಲ ಮಾಡಿದ್ದಾರೆ ? ಪೆನ್ ಡ್ರೈವ್ ಇಟ್ಟುಕೊಂಡು ಬಂದರೂ ಏನು ಆಗಲಿಲ್ಲ. ಆ ರೀತಿ ದೂರು ಇದ್ದರೆ ನನಗೆ ತಿಳಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಸಿಎಂ ಹೇಳಿದ್ದಾರೆ. ಈ ರೀತಿ ಹೇಳಿಕೆಗಳು ಅವರಿಗೆ ಶೋಭೆ ತರುವುದಿಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.
ಇನ್ನಷ್ಟು ಸುದ್ದಿಗಳು
-
ಭದ್ರಾವತಿ ಭದ್ರಗಿರಿ, ಶಿವಮೊಗ್ಗ ಗುಡ್ಡೆಕಲ್ ಆಡಿ ಕೃತ್ತಿಕೆ ಜಾತ್ರೆ! ಯಾವಾಗ ಗೊತ್ತ ಭರಣಿ ಕಾವಡಿ ಉತ್ಸವ?
-
ಅಡ್ಡ ಬಂದ ಬೈಕ್ಗೆ ಡಿಕ್ಕಿ ಹೊಡೆಯುವುದನ್ನ ತಪ್ಪಿಸುವ ವೇಳೆ ಆಕ್ಸಿಡೆಂಟ್ ! ಪಲ್ಟಿಯಾದ ಬಸ್ , 25 ಮಂದಿಗೆ ಗಾಯ!
-
ಶರಾವತಿ ಹಿನ್ನೀರಿನಲ್ಲಿ ಮುಳುಗಿತು ಲಾರಿ! ಲಾಂಚ್ ಹತ್ತಿಸುವಾಗ ನಡೆದ ಘಟನೆ!
-
ಬಾಯಿ ತಪ್ಪಿ ಆಡಿದ ಮಾತು! ಖರ್ಗೆ, ಖಂಡ್ರೆ ಬಗ್ಗೆ ಅಪಾರ ಗೌರವವಿದೆ ಎಂದರು ಮಾಜಿ ಗೃಹಸಚಿವ!
-
ಪ್ರತಿಭಟನೆ ಸಂದರ್ಭದಲ್ಲಿ ಆರಗ ಜ್ಞಾನೇಂದ್ರರವರು ಆಡಿದ ಮಾತು ವಿವಾದಕ್ಕೆ ಕಾರಣವಾಯ್ತಾ?
-
ಮಹಿಳೆಯ ಕೈ ಹಿಡಿದು ಎಳೆದಾಡಿದ್ದಕ್ಕೆ ಕೋರ್ಟ್ ಕೊಟ್ಟ ಶಿಕ್ಷೆ ಏನು ಗೊತ್ತಾ?