KARNATAKA NEWS/ ONLINE / Malenadu today/ Aug 4, 2023 SHIVAMOGGA NEWS
ತಾಲೂಕಿನ ಶರಾವತಿ ಹಿನ್ನೀರಿನ ಸಿಗಂದೂರು ಸೇತುವೆ ಕಾಮಗಾರಿಗೆ ಅಂಬಾರಗೊಡ್ಡು ಕಡೆಯಿಂದ ಜಲ್ಲಿ ತುಂಬಿಕೊಂಡು ಡಿಬಿಎಲ್ ಕಂಪನಿಯ ಲಾಂಚ್‌ಗೆ ಹತ್ತಿಸಲು ಹೋಗುತ್ತಿದ್ದ 10 ಚಕ್ರದ ಲಾರಿ ಬ್ರೇಕ್ ವಿಫಲವಾಗಿ ನೀರಿಗೆ ಬಿದ್ದ ಘಟನೆ ಗುರುವಾರ ಸಂಜೆ ನಡೆದಿದೆ.
ಸಿಗಂದೂರು ಬದಿಯಲ್ಲಿ ನಡೆಯುತ್ತಿದ್ದ ಸೇತುವೆ ಕಾಮಗಾರಿಗೆ ಜಲ್ಲಿ ತುಂಬಿ ಕೊಂಡು ಅಂಬಾರಗೊಡ್ಡು ಕಡೆಯಿಂದ ಹೊರಟಿದ್ದ ಲಾರಿಯನ್ನು ಹಿಮ್ಮುಖವಾಗಿ ಲಾಂಚಿಗೆ ಹತ್ತಿಸುವಾಗ ಚಾಲಕನ ನಿಯಂತ್ರಣ ತಪ್ಪಿ, ಬ್ರೇಕ್ ವಿಫಲವಾಗಿ ಲಾರಿ ಶರಾವತಿ ಹಿನ್ನೀರಿಗೆ ಜಾರಿದೆ. ಅಪಾಯದ ಸೂಚನೆ ಅರಿತ ಚಾಲಕ ಕೂಡಲೆ ಹೊರಕ್ಕೆ ಹಾರಿ ಬಚಾವಾಗಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಸೇತುವೆ ಕಾಮಗಾರಿ ಮಾಡುತ್ತಿರುವ ಡಿಬಿಎಲ್ ಕಂಪನಿಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನಷ್ಟು ಸುದ್ದಿಗಳು
ಬಾಯಿ ತಪ್ಪಿ ಆಡಿದ ಮಾತು! ಖರ್ಗೆ, ಖಂಡ್ರೆ ಬಗ್ಗೆ ಅಪಾರ ಗೌರವವಿದೆ ಎಂದರು ಮಾಜಿ ಗೃಹಸಚಿವ!
ಪ್ರತಿಭಟನೆ ಸಂದರ್ಭದಲ್ಲಿ ಆರಗ ಜ್ಞಾನೇಂದ್ರರವರು ಆಡಿದ ಮಾತು ವಿವಾದಕ್ಕೆ ಕಾರಣವಾಯ್ತಾ?
ಮಹಿಳೆಯ ಕೈ ಹಿಡಿದು ಎಳೆದಾಡಿದ್ದಕ್ಕೆ ಕೋರ್ಟ್ ಕೊಟ್ಟ ಶಿಕ್ಷೆ ಏನು ಗೊತ್ತಾ?



