ಸಾಗರ : ಪಿಕಾಪ್​​ ಪಲ್ಟಿ, ರಸ್ತೆ ತುಂಬಾ ಟೊಮಟೊ ಚೆಲ್ಲಾಪಿಲ್ಲಿ

ಹಂಚಿಕೊಳ್ಳಿ
WhatsApp Facebook X Telegram
Pickup Carrying Tomatoes Overturns Near Sagara
Pickup Carrying Tomatoes Overturns Near Sagara

Pickup ಸಾಗರ: ಟೊಮಟೊ ಸಾಗಿಸುತ್ತಿದ್ದ ಪಿಕಾಪ್​​ ಪಲ್ಟಿಯಾಗಿ ರಾಶಿ ರಾಶಿ ಟೊಮೆಟೊಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಘಟನೆ ತಾಲೂಕಿನ ಉಳ್ಳೂರು ಗ್ರಾಮದ ಸಮೀಪ ಹೆದ್ದಾರಿಯಲ್ಲಿ ನಡೆದಿದೆ.

ಶಿವಮೊಗ್ಗ ; 27 ವರ್ಷದ ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ, ಸಂತ್ರಸ್ತೆಗೆ 2 ಲಕ್ಷ ಪರಿಹಾರ, ಏನಿದು ಸುದ್ದಿ 

ಪಿಕಪ್​ ವಾಹನದಲ್ಲಿ ಸುಮಾರು 40 ಸಾವಿರ ಮೌಲ್ಯದ ಟೊಮೆಟೊವನ್ನು ಚಿಕ್ಕಮಗಳೂರಿನಿಂದ ಗೋವಾದ ಪಣಜಿಗೆ ಸಾಗಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಿಕಾಪ್​ ವಾಹನ ಪಲ್ಟಿಯಾಗಿದ್ದು, ಟೊಮೆಟೊಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ರಸ್ತೆಯ ಮೇಲೆ ಬಿದ್ದಿವೆ.

ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾರಿಗೂ ಗಾಯವಾಗಿಲ್ಲ ಹಾಗೂ ಯಾವುದೇ ಜೀವಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ತಹಶೀಲ್ದಾರ್ ಡಾ. ಪ್ರತಿಭಾ.ಆರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ, ಪಿಕಪ್‌ ವಾಹನದ ಚಾಲಕನ ಆರೋಗ್ಯ ವಿಚಾರಿಸಿದರು. ರಸ್ತೆಯನ್ನು ತೆರವುಗೊಳಿಸಿ ವಾಹನ ಸುಗಮವಾಗಿ ಸಾಗಲು ಅಗತ್ಯ ಸಹಾಯ ಒದಗಿಸಿದರು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor