ಪೀರನಕಣಿವೆ ದಾಟಿ ಬಂದು ಗೌತಮಪುರ, ತ್ಯಾಗರ್ತಿ ಸುತ್ತಮುತ್ತ ಕಾಡಾನೆಗಳ ಓಡಾಟ! ಈ ಸಲ ಬೇರೆ ಹಿಂಡೆ ಬಂದವೆ! ವಿಡಿಯೋ ನೋಡಿ

ಹಂಚಿಕೊಳ್ಳಿ
WhatsApp Facebook X Telegram
Wild Elephant Movement Near Gauthamapura and Tyagarthi, Shivamogga
Wild Elephant Movement Near Gauthamapura and Tyagarthi, Shivamogga

ಮಲೆನಾಡು ಟುಡೆ ಸುದ್ದಿ / ಆನಂದಪುರ / ಇಲ್ಲಿನ ಗೌತಮಪುರ ಹಾಗೂ ತ್ಯಾಗರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳು ಗದ್ದೆ ಬಯಲಿನಲ್ಲಿ ಗುಡುಗಡು ಅಂತಾ ಓಡುತ್ತಿರುವ ದೃಶ್ಯಗಳು ವೈರಲ್ ಆಗುತ್ತಿದೆ. ಮೊಬೈಲ್ ಹಿಡಿದು ಜನರು ಸಹ ವಿಡಿಯೋ ಮಾಡ್ರೋ.. ಫಾರೆಸ್ಟ್​ನೋರೇ ಎಲ್ಲಿದ್ದೀರಿ ಅಂತಾ ಕೂಗುತ್ತಾ ಓಡುತ್ತಿರುವ ವಿಡಿಯೋಗಳು ವೈರಲ್​ ಆಗಿವೆ. ಇನ್ನೊಂದು ಕಡೆ, ದೊಡ್ಡ ದೊಡ್ಡ ಜೀವಿಗಳು ಭತ್ತದ ಗದ್ದಗಳಲ್ಲಿ ಓಡಾಡ್ತಾ ಭತ್ತ ಪೂರ್ತಿ ನೆಲದಡಿಯಾಗ್ತಿರುವುದನ್ನ ಕಂಡು ರೈತರು ಕಂಗಾಲಾಗಿದ್ದಾರೆ. ಇತ್ತ ಕಾಡಂಚಿನ ಮನೆಯವರು ಎಲ್ಲಿ ಮನೆಗಳ ಮೇಲೆ ಕಾಡಾನೆಗಳು ನುಗ್ಗತ್ತವೋ ಎಂದು ಆತಂಕಗೊಂಡಿದ್ದಾರೆ.

ಸ್ಥಳೀಯ ನಮ್ಮ ಮಾಹಿತಿದಾರರ ಮಾಹಿತಿ ಪ್ರಕಾರ, ಬೆಳಂದೂರು ರಾಜ್ಯ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮಗಳ ಸುತ್ತಮುತ್ತ ಕಾಡಾನೆಗಳು ಬೀಡುಬಿಟ್ಟಿವೆ. ಇದೆ ಪ್ರಕಾರವಾಗಿ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ. ಗೌತಮಪುರ, ಚನ್ನಾಪುರ ಹಾಗೂ ನಾಡವಳ್ಳಿ ಭಾಗಗಳಲ್ಲಿ ಕಾಡಾನೆಗಳು ಕಾಣಿಸಿಕೊಂಡಿವೆ. ಸ್ಥಳದಲ್ಲಿ ಅಂಬ್ಲಿಗೋಳ ಅರಣ್ಯ ವಲಯದ ಅಧಿಕಾರಿಗಳು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆನೆಗಳನ್ನ ಬೆರಸುತ್ತಿದ್ದಾರೆ.

ಮೂಲಗಳ ಪ್ರಕಾರ, ಕಾಡಾನೆಗಳು ಪೀರನಕಣಿವೆ ಪ್ರದೇಶವನ್ನು ದಾಟಿ ಬೆಳಂದೂರು ಅರಣ್ಯದತ್ತ ತೆರಳುತ್ತಿವೆ. ಅರಣ್ಯ ಇಲಾಖೆಯ ಮಾಹಿತಿಯ ಪ್ರಕಾರ, ಕಾಡಾನೆಗಳು ಮುಂದಿನ ದಿನಗಳಲ್ಲಿ ನಾಡವಳ್ಳಿ, ಚನ್ನಾಪುರ, ಕುಡಿಗೇರಿ ಹಾಗೂ ಬೆಳಂದೂರು ಮಾರ್ಗವಾಗಿ ಲಾವಿಗೇರಿ ಮತ್ತು ಹುಲಿಯಪ್ಪನ ಕಣಿವೆ ಭಾಗದತ್ತ ಸಂಚರಿಸುವ ಸಾಧ್ಯತೆಯಿದೆ. ಇದರೊಂದಿಗೆ ಅಂಬ್ಲಿಗೋಳ ಡ್ಯಾಮ್ ಮೂಲಕ ಬೈರಾಪುರ ಹಾಗೂ ಕಣ್ಣೂರು ಮಾರ್ಗದಲ್ಲಿಯೂ ಕಾಡಾನೆಗಳು ಸಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ಈ ಆನೆಗಳು ಭದ್ರಾ ಅರಣ್ಯ ವ್ಯಾಪ್ತಿಯಿಂದ ಬಂದಿದ್ದು, ಈ ಸಲ ಹಿಂಡು ದೊಡ್ದದಾಗಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor