ಆನಂದಪುರ: ನಿಂತಿದ್ದ ಓಮಿನಿ ಹಾಗೂ ಸ್ಕೂಟಿಗೆ ವ್ಯಾಗನರ್ ಕಾರು ಡಿಕ್ಕಿ : ಹಿಟ್ ಅಂಡ್ ರನ್ ! ವಿಡಿಯೋ ನೋಡಿ

ಹಂಚಿಕೊಳ್ಳಿ
WhatsApp Facebook X Telegram
Anandapura Hit and Run
Anandapura Hit and Run

ಸುದ್ದಿಯ ಸ್ಥಳ: Sagara, Shivamogga, Karnataka

ಮಲೆನಾಡು ಟುಡೆ ಸುದ್ದಿ / ಆನಂದಪುರ: ರಸ್ತೆ ದಾಟಲು ನಿಂತಿದ್ದ ಮಾರುತಿ ಓಮಿನಿ ವಾಹನ ಹಾಗೂ ಸ್ಕೂಟಿಗೆ ಮಾರುತಿ ವ್ಯಾಗನರ್ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ಆನಂದಪುರದಲ್ಲಿ ನಡೆದಿದೆ.

ಮಾರುತಿ ವ್ಯಾಗನರ್ ಕಾರನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದಿದ್ದು, ರಸ್ತೆ ದಾಟಲು ನಿಂತಿದ್ದ ಮಾರುತಿ ಓಮಿನಿ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ವಾಹನಗಳಿಗೆ ಹಾನಿಯಾಗಿದ್ದು, ಸ್ಕೂಟಿ ಚಾಲಕ ಪ್ರವೀಣ್ ಮತ್ತು ಅವರ 7 ವರ್ಷದ ಮಗನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿಸಲಾಗಿದೆ. 

ಚಾಲಕ ಕಾರನ್ನು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದು, ಅತಿವೇಗ ಹಾಗೂ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಘಟನೆ ಹಿನ್ನೆಲೆ ಆನಂಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor