ಅಕ್ರಮ ನಿವಾಸಿಗಳಿಗೆ ಹಕ್ಕು ಪತ್ರ, ಶರಾವತಿ ಸಂತ್ರಸ್ತರಿಗೆ ಅನ್ಯಾಯ: ರಾಜ್ಯ ಸರ್ಕಾರದ ವಿರುದ್ಧ ಆರಗ ಗರಂ

Araga Jnanendra Slams State Government Over Sharavathi Project

ಶಿವಮೊಗ್ಗ: ಬೆಂಗಳೂರಿನ ಕೋಗಿಲು ಗ್ರಾಮದ ಸಮುದಾಯಕ್ಕೆ ರಾಜ್ಯ ಸರ್ಕಾರ ತರಾತುರಿಯಲ್ಲಿ ಹಕ್ಕು ಪತ್ರ ನೀಡಲು ಮುಂದಾಗಿರುವುದನ್ನು ಮಾಜಿ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಖಂಡಿಸಿದ್ದಾರೆ.  ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮವಾಗಿ ನೆಲೆಸಿದವರಿಗೆ ನೀಡುತ್ತಿರುವ ಆದ್ಯತೆಯನ್ನು ದಶಕಗಳಿಂದ ಹೋರಾಡುತ್ತಿರುವ ಶರಾವತಿ ಸಂತ್ರಸ್ತರಿಗೆ ನೀಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಶಿವಮೊಗ್ಗ ಇಂಟರ್​ ಸಿಟಿ ಟ್ರೈನ್​ ಸೇರಿದಂತೆ ಹತ್ತಕ್ಕೂ ಹೆಚ್ಚು ಟ್ರೈನ್​ಗಳ ನಂಬರ್​ ಬದಲಾವಣೆ! ಹೊಸ ಸಂಖ್ಯೆ ತಿಳಿದುಕೊಳ್ಳಿ ಕೋಗಿಲು ಗ್ರಾಮದಲ್ಲಿ … Read more

ತೀರ್ಥಹಳ್ಳಿಯಲ್ಲಿ ಡಿಎಸ್‌ಎಸ್ ತಮಟೆ ಚಳವಳಿ: ಶಾಸಕ ಆರಗ ಜ್ಞಾನೇಂದ್ರ ವಿರುದ್ಧ ಆಕ್ರೋಶ.

DSS  Protest in Thirthahalli for Dalit Land Right

ತೀರ್ಥಹಳ್ಳಿ :  ತೀರ್ಥಹಳ್ಳಿಯ ಶಿರುಪತಿ ಗ್ರಾಮದಲ್ಲಿ ದಲಿತರಿಗೆ ಸರ್ಕಾರದಿಂದ ಮಂಜೂರಾದ ಜಮೀನಿನ ಸಾಗುವಳಿಗೆ ಪಟ್ಟಭದ್ರ ಹಿತಾಸಕ್ತಿಗಳು ಅಡ್ಡಿಪಡಿಸುತ್ತಿವೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಘಟಕವು ಭೂ ಮಾಪನ ಕಚೇರಿಯ ಮುಂಭಾಗ ಶುಕ್ರವಾರ ಹಠಾತ್ ತಮಟೆ ಚಳವಳಿ ನಡೆಸಿತು. ಶಿವಮೊಗ್ಗದ ನಿರಂಜನಿ ರವೀಂದ್ರ ಅವರಿಗೆ ಸೌತ್ ಇಂಡಿಯನ್ ವುಮೆನ್ ಅಚೀವರ್ಸ್ ಅವಾರ್ಡ್  ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಕೀಗಡಿ ಕೃಷ್ಣಮೂರ್ತಿ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದು ದಶಕಗಳು ಕಳೆದರೂ ದಲಿತರು ಇಂದಿಗೂ ಭಯದ … Read more

ಮೃತ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಕುಟುಂಬಕ್ಕೆ 1 ಕೋಟಿ ರೂಪಾಯಿ

ಪರಿಹಾರ ಚೆಕ್, ಕೆಎಸ್‌ಆರ್‌ಟಿಸಿ, ಎಸ್‌ಬಿಐ, ಅಪಘಾತ ವಿಮೆ, ವೀರಣ್ಣ ಸೇಬಿನಕಟ್ಟಿ, ಹೊಸನಗರ ತೆಪ್ಪ ದುರಂತ, ಪೂರ್ಣೇಶ್ ಕುಟುಂಬ, ಆರಗ ಜ್ಞಾನೇಂದ್ರ, ಕಾಲುಸೇತುವೆ ನಿರ್ಮಾಣ

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ:  ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ  ಸಿಬ್ಬಂದಿಯೊಬ್ಬರ ಕುಟುಂಬಕ್ಕೆ  ಕೋಟಿ ರೂಪಾಯಿ ಪರಿಹಾರ ಸಿಕ್ಕಿದೆ. ಕೆಎಸ್‌ಆರ್‌ಟಿಸಿ ಚಾಲಕರಾಗಿದ್ದ ವೀರಣ್ಣ ಸೇಬಿನಕಟ್ಟಿ  ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.  ಅವರ ಕುಟುಂಬಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಅಪಘಾತ ವಿಮಾ ಯೋಜನೆಯಡಿ ಒಟ್ಟು 1 ಕೋಟಿ ರೂಪಾಯಿ (1 Crore Insurance) ಪರಿಹಾರ ಮೊತ್ತವನ್ನು ಗುರುವಾರ ಚೆಕ್‌ ಮೂಲಕ ನೀಡಲಾಯಿತು.  20 ಸೆಕೆಂಡ್​ನಲ್ಲಿ ಕದ್ದು ಬಿಟ್ಟರು! ಮೂಕ ಪ್ರಾಣಿಯ ಕಳ್ಳತನಕ್ಕೆ ಮೌನ ಸಾಕ್ಷಿಯಾದ … Read more

ಹೆಸರಿನ ಮುಂದೆ ಬಂಗಾರಪ್ಪ ಎಂದು ಇಟ್ಟುಕೊಂಡರೆ ಸಾಲದು, ಆರಗ ಜ್ಞಾನೇಂದ್ರ ತಿರುಗೇಟು

Araga Jnanendra Hits Back at Madhu Bangarappa

ಶಿವಮೊಗ್ಗ : ತಮ್ಮ ಅನುಭವದ ಮುಂದೆ ಶಾಸಕ ಆರಗ ಜ್ಞಾನೇಂದ್ರ ಅವರು ಬಚ್ಚಾ ಎಂಬ ಸಚಿವ ಮಧು ಬಂಗಾರಪ್ಪ ಅವರ ಹೇಳಿಕೆಗೆ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಮಧು ಬಂಗಾರಪ್ಪ ಅವರು ತಮ್ಮ ಹೆಸರಿನ ಮುಂದೆ ತಮ್ಮ ತಂದೆ ಎಸ್. ಬಂಗಾರಪ್ಪ ಅವರ ಹೆಸರನ್ನು ಇಟ್ಟುಕೊಂಡರೆ ಮಾತ್ರ ಸಾಲುವುದಿಲ್ಲ, ಬದಲಾಗಿ ಅವರ ತಂದೆಯವರು ಹೊಂದಿದ್ದ ಉತ್ತಮ ಮಾತು ಮತ್ತು ಸೌಜನ್ಯದ ನಡವಳಿಕೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.  Araga Jnanendra ಇಂದು ನಗರದಲ್ಲಿನಡೆದ … Read more

ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜ್ಯಾತಿಥ್ಯ..? ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದೇನು

Parappana Agrahara Jail

Parappana Agrahara Jail ಶಿವಮೊಗ್ಗ : ಜೈಲುಗಳೆಂದರೆ ಅಪರಾಧಿಗಳಲ್ಲಿ ಭಯ ಹುಟ್ಟಬೇಕು, ಮತ್ತು ಅಲ್ಲಿಗೆ ಹೋದವರು ಇನ್ನು ಮುಂದೆ ಅಪರಾಧ ಮಾಡುವುದಿಲ್ಲ ಎಂಬ ಸಂಕಲ್ಪ ಮಾಡಬೇಕು. ಆದರೆ, ಪ್ರಸ್ತುತ ರಾಜ್ಯದ ಪ್ರಮುಖ ಜೈಲುಗಳಲ್ಲಿ, ವಿಶೇಷವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜ್ಯಾತಿಥ್ಯ ನೀಡಲಾಗುತ್ತಿದೆ ಎಂದು ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಅವರು ಕಾಂಗ್ರೆಸ್ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ … Read more

ಕಾಂಗ್ರೆಸ್ ಹಿನ್ನೆಲೆಯಲ್ಲಿ ಮತಗಳ್ಳತನದ ಇತಿಹಾಸವಿದೆ : ಆರಗ ಜ್ಞಾನೇಂದ್ರ

Araga Jnanendra

Araga Jnanendra ಶಿವಮೊಗ್ಗ: ಮತಗಳ್ಳತನದ ಬಗ್ಗೆ ಕಾಂಗ್ರೆಸ್ ಬಹಳ ಹಿಂದಿನಿಂದಲೂ ಇತಿಹಾಸ ಹೊಂದಿದ್ದು, ರಾಹುಲ್ ಗಾಂಧಿ ಅವರ ಅಜ್ಜಿ ಇಂದಿರಾ ಗಾಂಧಿ ಕೂಡ ಮತಗಳ್ಳತನದಿಂದಲೇ ಚುನಾವಣೆಯಲ್ಲಿ ಗೆದ್ದಿದ್ದರು ಎಂದು ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದ್ದಾರೆ.  ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ದೇಶದಾದ್ಯಂತ ಪ್ರಚಾರಕ್ಕಾಗಿ “ಮತಗಳ್ಳತನ ಆಗಿದೆ” ಎಂದು ಸುಳ್ಳು ಹೇಳುತ್ತಿದ್ದಾರೆ. ಈ ಹಿಂದೆ ರಾಯ್ ಬರೇಲಿಯಲ್ಲಿ ರಾಜ್ ನಾರಾಯಣ್ ವಿರುದ್ಧ ಇಂದಿರಾ ಗಾಂಧಿ ಮತಗಳ್ಳತನದಿಂದ ಗೆದ್ದಿದ್ದರು. ಆಗ ಅಲಹಾಬಾದ್ ಹೈಕೋರ್ಟ್ ಅವರ ಸದಸ್ಯತ್ವವನ್ನು … Read more