15 ವರ್ಷದ ಹಿಂದೆ ಆನವಟ್ಟಿಯಿಂದ ಮನೆಬಿಟ್ಟು ಶಿವಮೊಗ್ಗಕ್ಕೆ ಬಂದ ವ್ಯಕ್ತಿ ಸಾವು! ಪೊಲೀಸ್ ಇಲಾಖೆಯಿಂದ ಪ್ರಕಟಣೆ
15 years ago, the man who left home from Anavatti and came to Shimoga died! Announcement from Police Department
Shivamogga Apr 17, 2024 Shimoga police Department ಶಿವಮೊಗ್ಗದಲ್ಲಿ ಸೊರಬ ತಾಲ್ಲೂಕು ಆನವಟ್ಟಿ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಅವರ ಪೂರ್ವಪರ ಹಾಗೂ ಸಂಬಂಧಿಕರ ಗುರುತಿಗಾಗಿ ಶಿವಮೊಗ್ಗದ ತುಂಗಾನಗರ ಪೊಲೀಸ್ ಸ್ಟೇಷನ್ ಪೊಲೀಸರು ಪ್ರಕಟನೆಯನ್ನ ಹೊರಡಿಸಿದೆ.
ಅನಾಮಿಕ ಮೃತ ವ್ಯಕ್ತಿಯ ವಾರಸ್ಸುದಾರರ ಪತ್ತೆಗೆ ಮನವಿ
ಕಳೆದ ಮಾ.28 ರಂದು ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಸವರಾಜ್ ಬಿನ್ ಬಸವಣ್ಯಪ್ಪ ಎಂಬ 40 ವರ್ಷದ ವ್ಯಕ್ತಿಯು ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರು ಆನವಟ್ಟಿಯ ನೆರಲಗಿ ಗ್ರಾಮದಿಂದ 15 ವರ್ಷದ ಹಿಂದೆ ಮನೆಬಿಟ್ಟು ಬಂದಿರುವುದಾಗಿ ಹೇಳಿಕೊಂಡಿದ್ದರು.
ಆತನ ಸ್ಥಿತಿಯನ್ನು ಗಮನಿಸಿ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈತ ಏಪ್ರಿಲ್ 07 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಆತನ ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
ಈತನ ಚಹರೆ ಸುಮಾರು 05.06 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲುಮುಖ, ಮೃತನ ಬಲ ಕೈಯಲ್ಲಿ ತಂದೆ-ತಾಯಿ ಎಂಬ ಹಚ್ಚೆ ಗುರುತಿದೆ. ಕೊರಳಲ್ಲಿ ಕಪ್ಪು ಬಣ್ಣದ ರುದ್ರಾಕ್ಷಿ ಮತ್ತು ಶಿವನ ಚಿತ್ರವಿರುವ ದಾರವಿದೆ.
ಈ ವ್ಯಕ್ತಿಯ ವಾರಸ್ಸುದಾರರು ಪತ್ತೆಯಾದಲ್ಲಿ ತುಂಗಾನಗರ ಪೊಲೀಸ್ ಠಾಣೆ, ದೂ.ಸಂ.: 9141289308/ 9480803370 / 9480803377 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.