ಶಿವಮೊಗ್ಗ ಸಿಟಿಯಲ್ಲಿ ವಾಟರ್‌ ಸಪ್ಲೆಗೆ ಸಂಬಂಧಿಸಿದ ಹಿಂದಿನ ಪ್ರಕಟಣೆ ರದ್ದು? 2 ದಿನವೂ ನೀರು ಬರುತ್ತೆ! ಕಾರಣ ಎಲೆಕ್ಷನ್ನಾ?

Will there be water supply in Shimoga City tomorrow and the day after tomorrow!? Cancellation of previous announcement? Is the reason election?

ಶಿವಮೊಗ್ಗ ಸಿಟಿಯಲ್ಲಿ ವಾಟರ್‌ ಸಪ್ಲೆಗೆ ಸಂಬಂಧಿಸಿದ ಹಿಂದಿನ ಪ್ರಕಟಣೆ ರದ್ದು? 2 ದಿನವೂ ನೀರು ಬರುತ್ತೆ!  ಕಾರಣ ಎಲೆಕ್ಷನ್ನಾ?
water supply in Shimoga City

Shivamogga Apr 17, 2024  water supply in Shimoga City   ಶಿವಮೊಗ್ಗ ಸಿಟಿಯಲ್ಲಿ ಇದೇ ಏಪ್ರಿಲ್‌ 18 ಮತ್ತು 19 ರಂದು ಕುಡಿಯುವ ನೀರು ಪೂರೈಕೆಯಲ್ಲಿ  ವ್ಯತ್ಯಯವಾಗುತ್ತದೆ ಎಂದು ಪ್ರಕಟಣೆ ನೀಡಲಾಗಿತ್ತು. ಆದರೆ ಇದೀಗ ದಿಢೀರ್‌ ಎಂಬಂತೆ ಆ ದಿನಗಳಂದು ನೀರು ಪೂರೈಕೆ ಯಥಾಸ್ಥಿತಿಯಲ್ಲಿ  ಇರಲಿದೆ ಎಂದು ಮರು ಪ್ರಕಟಣೆ ನೀಡಲಾಗಿದೆ. ಚುನಾವಣೆ ಎಫೆಕ್ಟೋ ಏನೋ ಎಂಬಂತೆ ಕುಡಿಯುವ ನೀರಿನ ಪೂರೈಕೆಯ ಪ್ರಕಟಣೆಯು 24 ಗಂಟೆಯಲ್ಲಿ ಬದಲಾಗಿದೆ.

ಏ.18 ಮತ್ತು 19 ರಂದು ಕುಡಿಯುವ ನೀರು ವ್ಯತ್ಯಯ ರದ್ದು

ಕೃಷ್ಣರಾಜೇಂದ್ರ ಜಲಶುದ್ಧಿಕರಣ ಘಟಕಕ್ಕೆ ವಿದ್ಯುತ್ ಪೂರೈಕೆಯನ್ನು ನಿಲುಗಡೆಯನ್ನು ತಾಂತ್ರಿಕ ಕಾರಣದಿಂದ ಮುಂದೂಡಲಾಗಿದ್ದು,  ಏ.18 ಮತ್ತು 19 ರಂದು ಶಿವಮೊಗ್ಗ ನಗರದ ದೈನಂದಿನ ಕುಡಿಯುವ ನೀರು ಸರಬರಾಜಿನಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂದು  ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.