ಭದ್ರಾವತಿಯಲ್ಲಿ ಒಮಿನಿ & ಹಾಲಿನ ಟ್ಯಾಂಕರ್‌ ಡಿಕ್ಕಿ | ದೊಡ್ಡಪೇಟೆಯಲ್ಲಿ ಯುವಕರನ್ನ ಅಡ್ಡಗಟ್ಟಿ ದರೋಡೆ

Omini & Milk Tanker Collision in Bhadravati | Robbery of youths in Doddapete

ಭದ್ರಾವತಿಯಲ್ಲಿ ಒಮಿನಿ & ಹಾಲಿನ ಟ್ಯಾಂಕರ್‌ ಡಿಕ್ಕಿ | ದೊಡ್ಡಪೇಟೆಯಲ್ಲಿ ಯುವಕರನ್ನ ಅಡ್ಡಗಟ್ಟಿ ದರೋಡೆ
Bhadravati

SHIVAMOGGA | MALENADUTODAY NEWS |  Apr 20, 2024  

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ನ್ಯೂಟೌನ್‌ ಪೊಲೀಸ್‌ ಸ್ಟೇಷನ್‌ ವ್ಯಾಪ್ತಿಯಲ್ಲಿ ಒಮಿನಿ ಹಾಗೂ ಹಾಲಿನ ಟ್ಯಾಂಕರ್‌ ನಡುವೆ ಡಿಕ್ಕಿಯಾದ ಬಗ್ಗೆ ವರದಿಯಾಗಿದೆ. 18 ರಂದು ನಡೆದ ಘಟನೆ ಸಂಬಂಧ 112 ಎಕ್ಸ್‌ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ  

ಓಮಿನಿ ಹಾಗೂ ಹಾಲಿನ ಟ್ಯಾಂಕರ್‌ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಆದರೆ ಒಮಿನಿ ವಾಹನದ ಒಂದು ಬದಿ ಡ್ಯಾಮೇಜ್‌ ಆಗಿದೆ. ಈ ಸಂಬಂಧ ಠಾಣೆಗೆ ಬಂದು ಸಮಸ್ಯೆಗೆ ಬಗೆಹರಿಸಿಕೊಳ್ಳುವಂತೆ ಪೊಲೀಸರು ದೂರುದಾರರಿಗೆ ಸೂಚಿಸಿರುವ ಬಗ್ಗೆ ತಿಳಿದು ಬಂದಿದೆ. 

ನಡೆದುಕೊಂಡು ಹೋಗ್ತಿದ್ದವರ ದರೋಡೆ

ಇನ್ನೊಂದೆಡೆ ಶಿವಮೊಗ್ಗ  ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕರನ್ನ ಬೈಕ್ ನಲ್ಲಿ ಬಂದ ಯುವಕರು ಅಡ್ಡಗಟ್ಟಿ ಹಣ ಹಾಗೂ ಒಡವೆಯನ್ನು ದೋಚಿರುವ ಬಗ್ಗೆ ವರದಿಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ಪ್ರಕರಣದ ಪರಿಶೀಲನೆ ನಡೆಸಿದ್ದಾರೆ. ದೊಡ್ಡಪೇಟೆ ಪೊಲೀಸ್‌ ಸ್ಠೇಷನ್‌ ಲಿಮಿಟ್ಸ್‌ನಲ್ಲಿ ಕ್ರೈಂ ಘಟನೆಗಳು ಹೆಚ್ಚಾಗುತ್ತಿದ್ದು,  ಈ ಬಗ್ಗೆ ಪೊಲೀಸರು ಹೆಚ್ಚು ನಿಗಾವಹಿಸುತ್ತಿದ್ದಾರೆ.