KSRTC ಬಸ್​ ನಿಲ್ದಾಣದಲ್ಲಿ ಬೈಕ್​ ನಿಲ್ಲಿಸಿ ಶಿವಮೊಗ್ಗಕ್ಕೆ ಹೋಗಿ ಬಂದು ನೋಡುವಾಗ ಕಾದಿತ್ತು ಶಾಕ್

case has been registered at Bhadravathi New Town police station in connection with the theft of a bike near Bhadravathi KSRTC bus stand.

KSRTC  ಬಸ್​ ನಿಲ್ದಾಣದಲ್ಲಿ ಬೈಕ್​ ನಿಲ್ಲಿಸಿ ಶಿವಮೊಗ್ಗಕ್ಕೆ ಹೋಗಿ ಬಂದು ನೋಡುವಾಗ ಕಾದಿತ್ತು ಶಾಕ್
Bhadravathi New Town police station

shivamogga Mar 13, 2024 Bhadravathi New Town police station  ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನಲ್ಲಿ ಬೈಕ್ ಕಳ್ಳತನವಾಗಿರುವ ಬಗ್ಗೆ ಭದ್ರಾವತಿ ನ್ಯೂಟೌನ್​ ಪೊಲೀಸ್​ ಸ್ಟೇಷನ್​ನಲ್ಲಿ  Bhadravathi New Town PS  ಕೇಸ್ ದಾಖಲಾಗಿದೆ. 

ಭದ್ರಾವತಿ ತಾಲ್ಲೂಕು ಬಾಬಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ಕಳೆದ ದಿನಾಂಕ:10-03-2024 ರಂದು ಸುಮಾರು 4.00 ಗಂಟೆಗೆ KA 14  ET 0868 HONDA DREAM NEO ಬೈಕ್ ಅನ್ನು ಭದ್ರಾವತಿಯ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣ ದ ಬಳಿ ನಿಲ್ಲಿಸಿ ಹ್ಯಾಂಡ್ ಲಾಕ್ ಮಾಡಿ ಶಿವಮೊಗ್ಗಕ್ಕೆ ಹೋಗಿದ್ದರು

ವಾಪಾಸ್ ಸಂಜೆ 7.00 ಗಂಟೆಗೆ ಬಂದು ನೋಡಿದಾಗ ಬೈಕ್ ಇರಲಿಲ್ಲ. ಯಾರೋ ಕಳ್ಳರು ಬೈಕ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಸದರಿ ಬೈಕ್ ನ ಅಂದಾಜು ಬೆಲೆ 30000 /-ಗಳಾಗಬಹುದು. ಕಳ್ಳತನವಾದ ಬೈಕ್ ನ್ನು ಪತ್ತೆಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ  ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.