ಎನ್‌ಡಿಎ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಪಡೆದ ಭದ್ರಾವತಿಯ ಶ್ರೇಯಾ ಎನ್. ಗೌಡರಿಗೆ ಗೌರವ ಸನ್ಮಾನ! ಕರೆ ಮಾಡಿದ ಕೇಂದ್ರ ಸಚಿವ!

ಹಂಚಿಕೊಳ್ಳಿ
WhatsApp Facebook X Telegram
NDA Exam Topper Shreya N Gowda Felicitated by MP BY Raghavendra in Bhadravathi
NDA Exam Topper Shreya N Gowda Felicitated by MP BY Raghavendra in Bhadravathi

ಸುದ್ದಿಯ ಸ್ಥಳ: Bhadravati, Shivamogga, Karnataka

ಮಲೆನಾಡು ಟುಡೆ ಸುದ್ದಿ / ಭದ್ರಾವತಿ / ಎನ್‌ಡಿಎ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದು ದೇಶದ ಟಾಪರ್ ಆಗಿರುವ ಭದ್ರಾವತಿಯ ಶ್ರೇಯಾ ಎನ್. ಗೌಡ ಸೇನೆಯಲ್ಲಿ ಉನ್ನತ ಸ್ಥಾನಕ್ಕೇರಿ ದೇಶಕ್ಕೆ ದೊಡ್ಡ ಕೊಡುಗೆ ನೀಡಲಿ ಎಂದು ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಹಾರೈಸಿದರು.

ನಗರದ ತಿಮ್ಲಾಪುರದಲ್ಲಿರುವ ಶ್ರೇಯಾ ಅವರ ನಿವಾಸಕ್ಕೆ ಮಂಗಳವಾರ ತೆರಳಿ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ನಾಗೇಂದ್ರ ಹಾಗೂ ಡಾ. ಬಿ.ಎಂ.ಆಶಾ ಅವರ ಪುತ್ರಿಯಾಗಿರುವ ಶ್ರೇಯಾ ಅವರು ತಮ್ಮ ಕನಸನ್ನು ನನಸಾಗಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.

ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಗುರಿ ಇದ್ದರೆ ಎಂತಹ ಕಷ್ಟಗಳನ್ನಾದರೂ ಮೆಟ್ಟಿ ನಿಲ್ಲಬಹುದು ಎಂಬುದಕ್ಕೆ ಶ್ರೇಯಾ ಸಾಕ್ಷಿಯಾಗಿದ್ದಾರೆ. ಅವರ ಸಾಧನೆ ದೇಶಕ್ಕೆ ಹೆಮ್ಮೆಯ ಕೊಡುಗೆ ಯಾಗಿದೆ. ಸೇನೆಯಲ್ಲಿ ಉನ್ನತ ಜವಾಬ್ದಾರಿ ನಿರ್ವಹಿಸುವ ಮೂಲಕ ಭಾರತಮಾತೆಯ ಸೇವೆಯಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಯುವ ಪೀಳಿಗೆಗೆ ಮಾದರಿಯಾಗಲಿ ಎಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಲಾದ ಜೋಶಿ ದೂರವಾಣಿ ಮೂಲಕ ಶ್ರೇಯಾ ಅವರೊಂದಿಗೆ ಮಾತನಾಡಿ, ಶುಭ ಹಾರೈಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲ ತೇಶ್, ನಗರ ಬಿಜೆಪಿ ಅಧ್ಯಕ್ಷ ಧರ್ಮ ಪ್ರಸಾದ್, ಮುಖಂಡರಾದ ಮುಂಗೋಟೆ ರುದ್ರೇಶ್, ಕೂಡ್ಲಿಗೆರೆ ಹಾಲೇಶ್, ಆನಂದ ಕುಮಾ‌ರ್, ರಾಮಲಿಂಗಯ್ಯ, ಸುರೇಶಪ್ಪ, ರಘುರಾವ್, ಅಣ್ಣಪ್ಪ, ಸಂತೋಷ್ ಕುಮಾರ್, ಮಹಿಳಾ ಕಾರ್ಯಕರ್ತರು ಹಾಗೂ ಶ್ರೇಯಾ ಅವರ ತಂದೆ ನಾಗೇಂದ್ರ, ತಾಯಿ ಹಾಗೂ ಉಪನ್ಯಾಸಕಿ ಬಿ.ಎಂ. ಆಶಾ ಉಪಸ್ಥಿತರಿದ್ದರು.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor