ಶಿವಮೊಗ್ಗ ಮಾರ್ನಿಂಗ್ ಶಾರ್ಟ್ ನ್ಯೂಸ್: ದಿನಸಿ ಅಂಗಡಿಗೆ ಬೆಂಕಿ, ಚಾಕು ತೋರಿಸಿ ಹಲ್ಲೆ, ಕೆರೆಯಲ್ಲಿ ಅಪರಿಚಿತ ಶವ ಪತ್ತೆ

ಹಂಚಿಕೊಳ್ಳಿ
WhatsApp Facebook X Telegram
Shivamogga Morning News, Shivamogga Short News,
Shivamogga Morning News, Shivamogga Short News,

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ನಗರದ ಕುಚಲಕ್ಕಿಕೇರಿಯಲ್ಲಿ ದಿನಸಿ ಅಂಗಡಿಗೆ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದೆ. ಮತ್ತೊಂದೆಡೆ ಸಾಗರದಲ್ಲಿ ಬುದ್ಧಿಮಾಂದ್ಯ ವ್ಯಕ್ತಿಯೊಬ್ಬರಿಗೆ ಚಾಕು ತೋರಿಸಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಇತ್ತ ಹೊಳೆಹೊನ್ನೂರು ಸಮೀಪದ ಚಿಕ್ಕೂಡ್ಲಿ ಗ್ರಾಮದ ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಜಿಲ್ಲೆಯ ವಿವಿಧೆಡೆ ನಡೆದ ಈ 3 ಘಟನೆಗಳ ವಿವರ ಇಲ್ಲಿದೆ.

ಅಂಗಡಿಗೆ ಬೆಂಕಿ ಬಿದ್ದು ಅಪಾರ ಹಾನಿ

ಶಿವಮೊಗ್ಗ ನಗರದ ಕುಚಲಕ್ಕಿಕೇರಿಯಲ್ಲಿ ಮಂಗಳವಾರ ಬೆಳಗಿನ ಜಾವ ದಿನಸಿ ಅಂಗಡಿಗೆ ಬೆಂಕಿ ಬಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ. ಶಾರ್ಟ್ ಸರ್ಕ್ಯುಟ್ ನಿಂದಾಗಿ ಬೆಂಕಿ ತಗುಲಿದ್ದು, ಅಂಗಡಿಯಲ್ಲಿದ್ದ ದಿನಸಿ ಪದಾರ್ಥಗಳು ಸುಟ್ಟುಕರಕಲಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದರು.

ಬುದ್ಧಿಮಾಂದ್ಯ ವ್ಯಕ್ತಿಗೆ ಚಾಕು ತೋರಿಸಿ ಹಲ್ಲೆ

ಸಾಗರ: ನಗರದಲ್ಲಿ ಬುದ್ದಿಮಾಂದ್ಯ ವ್ಯಕ್ತಿಯೊಬ್ಬರಿಗೆ ಇಬ್ಬರು ಅಪರಿಚಿತರು ಚಾಕು ತೋರಿಸಿ ಹಲ್ಲೆ ನಡೆಸಿದ ಘಟನೆ ಕಳೆದ ಬುಧವಾರ ನಡೆದಿದೆ. ಬುದ್ದಿಮಾಂದ್ಯ ವ್ಯಕ್ತಿಯೊಬ್ಬ ಜೋಸೆಫ್ ನಗರದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಈ ಬಂದ ಇಬ್ಬರು ಯುವಕರ ಪೈಕಿ ಹಿಂಬದಿ ಕುಳಿತಿದ್ದ ವ್ಯಕ್ತಿ ಚಾಕು ತೋರಿಸಿ ಬೆದರಿಸಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಬಳಿಕ ಇಬ್ಬರೂ ಬೈಕ್‌ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಅಸಹಾಯಕ ವ್ಯಕ್ತಿಯ ಮೇಲೆ ನಡೆದ ದಿಢೀರ್ ಹಲ್ಲೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು -ಸ್ಥಳೀಯರು ಆಗ್ರಹಿಸಿದ್ದಾರೆ.

ಅಪರಿಚಿತ ವ್ಯಕ್ತಿ ಶವ ಪತ್ತೆ

ಹೊಳೆಹೊನ್ನೂರು: ಚಿಕ್ಕೂಡ್ಲಿ ಗ್ರಾಮದ ಸಂಘದ ಕೆರೆಯಲ್ಲಿ ಪುರುಷನೊಬ್ಬನ ಶವ ಪತ್ತೆಯಾಗಿದೆ. ಸುಮಾರು 40ರಿಂದ 45 ವರ್ಷ ವಯಸ್ಸಿನ, 5.8 ಅಡಿ ಎತ್ತರ, ಸಾದಾರಣ ಮೈಕಟ್ಟು ಎಣ್ಣೆಕೆಂಪು ಮೈಬಣ್ಣ, ನೇರಳೆ ಬಣ್ಣದ ಅಂಗಿ, ಕೆಂಪು ಬನಿಯನ್, ನೀಲಿ ಬಣ್ಣದ ಚಡ್ಡಿ, ಕಪ್ಪು ಪ್ಯಾಂಟ್ ಧರಿಸಿದ್ದಾರೆ. ಬಲಗೈನಲ್ಲಿ ಆಶಾ ಎಂದು ಹಚ್ಚೆ ಇರುತ್ತದೆ. ಈ ಚಹರೆ ವ್ಯಕ್ತಿ ವಾರಸುದಾರರು ಸ್ಥಳೀಯ ಪೊಲೀಸ್ ಠಾಣೆ ಮೊ.9408033399 ಸಂಪರ್ಕಿಸಲು ಕೋರಲಾಗಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor