ಸುದ್ದಿಯ ಸ್ಥಳ: Bengaluru, Karnataka
ಶಿವಮೊಗ್ಗ ಜಿಲ್ಲೆಯ ಇ.ಎಸ್.ಐ. ವಿಮಾದಾರ ಕಾರ್ಮಿಕರು ಕಳೆದ ನಾಲ್ಕು ತಿಂಗಳಿಂದ ಎದುರಿಸುತ್ತಿರುವ ಒಪಿಡಿ ಚಿಕಿತ್ಸಾ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು ಅಂತಾ ಶಾಸಕ ಎಸ್.ಎನ್. ಚನ್ನಬಸಪ್ಪ ಒತ್ತಾಯಿಸಿದ್ದಾರೆ. ಈ ಸಂಬಂಧ ರಾಜ್ಯದ ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಅವರನ್ನು ಭೇಟಿಮಾಡಿದ್ದಷ್ಟೆ ಅಲ್ಲದೆ, ಕಾರ್ಮಿಕರ ಗೋಳನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ.
ಶಿವಮೊಗ್ಗ ಜಿಲ್ಲಾ ಇ.ಎಸ್.ಐ. ವಿಮಾದಾರರ ಹಾಗೂ ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘವು ನೀಡಿರುವ ದೂರಿನಂತೆ, ಇಎಸ್ಐ ಜೊತೆ ಒಪ್ಪಂದ ಮಾಡಿಕೊಂಡಿರುವ ಖಾಸಗಿ ಆಸ್ಪತ್ರೆಗಳು ಹಣದ ಆಸೆಗೆ ರೋಗಿಗಳಿಗೆ ಅಗತ್ಯವಿಲ್ಲದಿದ್ದರೂ ಅನಗತ್ಯವಾಗಿ ಎಕ್ಸ್-ರೇ, ಸ್ಕ್ಯಾನಿಂಗ್, ರಕ್ತ ಪರೀಕ್ಷೆಯಂತಹ ತಪಾಸಣೆಗಳನ್ನು ನಡೆಸಿ ದುಬಾರಿ ಹಣ ವಸೂಲಿ ಮಾಡುತ್ತಿವೆ ಎಂಬ ಕಾರಣ ನೀಡಿ, ಕಳೆದ ನಾಲ್ಕು ತಿಂಗಳಿಂದ ಒಪಿಡಿ ಸೌಲಭ್ಯವನ್ನೇ ಸ್ಥಗಿತಗೊಳಿಸಲಾಗಿದೆ. ಆಸ್ಪತ್ರೆಗಳ ಅಕ್ರಮಗಳಿಗೆ ಬಡಕಾರ್ಮಿಕರನ್ನು ಶಿಕ್ಷಿಸುವುದು ಎಷ್ಟು ಸರಿ? ಎಂದು ಶಾಸಕರು ಪ್ರಶ್ನಿಸಿದ್ದಾರೆ.
ಇ.ಎಸ್.ಐ. ಯೋಜನೆಯು ಕಾರ್ಮಿಕರುಮತ್ತು ಮಾಲೀಕರು ನೀಡುವ ಶ್ರಮದ ವಂತಿಗೆಯಿಂದಲೇ ನಡೆಯುತ್ತಿರುವ ವೈದ್ಯಕೀಯ ಸೇವಾ ವ್ಯವಸ್ಥೆಯಾಗಿದೆ. ತಪ್ಪು ಮಾಡಿದ ಆಸ್ಪತ್ರೆ ಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದನ್ನು ಬಿಟ್ಟು, ಒಟ್ಟಾರೆಯಾಗಿ ಒಪಿಡಿ ಸೌಲಭ್ಯ ನಿಲ್ಲಿಸಿರುವುದರಿಂದ ನೂರಾರು ಕಾರ್ಮಿಕರುನಿತ್ಯ ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಆದ್ದರಿಂದ, ಕಾರ್ಮಿಕ ಇಲಾಖೆಯುತಕ್ಷಣವೇಮಧ್ಯ ಪ್ರವೇಶಿಸಿ, ಕಾರ್ಮಿಕರ ಸಂಕಷ್ಟವನ್ನು ಬಗೆಹರಿಸಿ ಗುಣಮಟ್ಟದ ಚಿಕಿತ್ಸೆ ಮುಂದುವರಿಯುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನನಿರ್ದೇಶನ ನೀಡಬೇಕುಎಂದುಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
