ಮಲೆನಾಡು ಟುಡೆ ಸುದ್ದಿ / ರಿಪ್ಪನ್ ಪೇಟೆ / ಹೊಸನಗರ ತಾಲ್ಲೂಕಿನ, ಗರ್ತಿಕೆರೆ ಗ್ರಾಮದ ಯುವಕ ಬೆಂಗಳೂರಲ್ಲಿ ಸೂಸೈಡ್ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ದೀಕ್ಷಿತ್ (28) ಮೃತರು. ಇವ್ರು ತಮ್ಮ ಕೊಠಡಿಯಲ್ಲಿ ಕಳೆದ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ನಿನ್ನೆ ದಿನ ವಿಷಯ ಗೊತ್ತಾಗಿದೆ.
ಹೊಸನಗರ ತಾಲ್ಲೂಕು ಕಮ್ಮಚ್ಚಿ ಗ್ರಾಮದ ನಿವಾಸಿಯಾಗಿದ್ದ ದೀಕ್ಷಿತ್ ಅವರು ಬೆಂಗಳೂರಿನಲ್ಲಿ ವಾಸವಾಗಿದ್ದರು. ಒಂದು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ಮದುವೆಯ ಸಂಭ್ರಮ ಹಸಿಯಾಗಿರುವಾಗಲೇ ಅವರ ಸಾವಿನ ಸುದ್ದಿ ಕೇಳಿದೆ. ದೀಕ್ಷಿತ್ ಅವರ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಘಟನೆ ಸಂಬಂಧ ಸ್ಥಳೀಯ ಪೊಲೀಸರು ಕೇಸ್ ಮಾಡಿದ್ದು, ಮಾಹಿತಿ ಕಲೆಹಾಕುತ್ತಿದ್ದಾರೆ.
