ಒಂದೆ ದಿನ ಮೂವರ ಸಾವು | ಮದುವೆ ನಿಶ್ಚಯವಾಗಿದ್ದ ಯುವತಿ ನೇಣಿಗೆ ಶರಣು | shivamogga crime news

Three people died in one day A young woman who was engaged to be married surrendered to hanging shivamogga crime news. Sogane, Abbalagere, Tank Mohalla

ಒಂದೆ ದಿನ ಮೂವರ ಸಾವು | ಮದುವೆ ನಿಶ್ಚಯವಾಗಿದ್ದ ಯುವತಿ ನೇಣಿಗೆ ಶರಣು | shivamogga crime news
shivamogga crime news. Sogane, Abbalagere, Tank Mohalla

SHIVAMOGGA | MALENADUTODAY NEWS | May 4, 2024    ‌ 

ಮದುವೆ ನಿಶ್ಚಯಗೊಂಡಿದ್ದ ಯುವತಿಯೊಬ್ಬಳು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಶಿವಮೊಗ್ಗದ ಟ್ಯಾಂಕ್‌ ಮೊಹಲ್ಲಾ ನಿವಾಸಿ ಇಪ್ಪತ್ತು ವರ್ಷದ ಯುವತಿಗೆ ಇದೇ ಮೇ 8 ರಂದು ಮದುವೆ ನಿ‍ಶ್ಚಯವಾಗಿತ್ತು. ಇದರ ನಡುವೆ ಎನಾಯ್ತು ಎಂಬುದು ತಿಳಿದುಬಂದಿಲ್ಲ. ಯುವತಿ ನೇಣಿಗೆ ಶರಣಾಗಿದ್ದಾಳೆ. ಈ ಸಂಬಂದ ಕೋಟೆ ಪೊಲೀಸ್‌ ಸ್ಟೇಷನ್‌ನಲ್ಲಿ ಕೇಸ್‌ ದಾಖಲಾಗಿದೆ. 

ಅಪಘಾತ ಇಬ್ಬರ ಸಾವು

ಇನ್ನೊಂದಡೆ ಶಿವಮೊಗ್ಗ  ಸೋಗಾನೆ ಹಾಗೂ ಅಬ್ಬಲಗೆರೆಯ ಬಳಿ ಸಂಭವಿಸಿದ ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಕಾಚಿನಕಟ್ಟೆಯಿಂದ ಎಳೆನೀರು ತಂದು ಶಿವಮೊಗ್ಗಕ್ಕೆ ಹಾಕಿ ಅಲ್ಲಿಂದ ವಾಪಸ್‌ ಆಗುವಾಗ ಬೈಕ್‌ನಿಂದ ಬಿದ್ದು ಓರ್ವರು ಸಾವನ್ನಪ್ಪಿದ್ದಾರೆ. ಇನ್ನೊಂದು ಘಟನೆ ಅಬ್ಬಲಗೆರೆ ಬಳಿ ಸಂಭವಿಸಿದ್ದು, ಕೆರೆಯ ಸಮೀಪ ಬ್ಯಾರಿಕೇಡ್‌ಗೆ ಡಿಕ್ಕಿಯಾಗಿ ಓರ್ವರು ಸಾವನ್ನಪ್ಪಿದ್ದಾರೆ.