ಆಯನೂರು ಸಂತೆ ಮುಗಿಸಿ ಬರುವಷ್ಟರಲ್ಲಿ ಬೈಕ್ ಸವಾರನಿಗೆ ಕಾದಿತ್ತು ಶಾಕ್

KARNATAKA NEWS/ ONLINE / Malenadu today/ Aug 8, 2023 SHIVAMOGGA NEWS

ಆಯನೂರು ಸಂಜತೆಗೆ ಹೋಗಿ ವಾಪಸ್​ ಬರುವಷ್ಟರಲ್ಲಿ ಮಂಡಘಟ್ಟದ ರಾಗಿಹೊಸಳ್ಳಿ ನಿವಾಸಿಯೊಬ್ಬರ  ಬೈಕ್​ ಕಳುವಾದ ಬಗ್ಗೆ ಕುಂಸಿ ಪೊಲೀಸ್ ಸ್ಟೇಷನ್​ ನಲ್ಲಿ ( Kunsi Police Station) ಎಫ್ಐಆರ್ ದಾಖಲಾಗಿದೆ.

ದಿನಾಂಕ :30.07.2023 ರಂದು ಮದ್ಯಾಹ್ನ 03.00 ಗಂಟೆಗೆ ಇಲ್ಲಿನ ನಿವಾಸಿಯೊಬ್ಬರು ತಮ್ಮ ಹೀರೋ ಸ್ಪೆಂಡರ್ ಬೈಕ್ ನ್ನ ಆಯನೂರು ಸಂತೆ ಮೈದಾನದ ಸಮೀಪ ನಿಲ್ಲಿಸಿದ್ದರು. ಬಳಿಕ ಸಂತೆಗೆ ಹೋದ ಅವರು ಸಂಜೆ ವಾಪಸ್ ಬರುವಷ್ಟರಲ್ಲಿ ನಿಲ್ಲಿಸಿದ್ದ ಜಾಗದಲ್ಲಿ ಬೈಕ್ ಇರಲಿಲ್ಲ. ಯಾರಾದರೂ ತೆಗೆದುಕೊಂಡು ಹೋಗಿಬಹುದು ಎಲ್ಲಾ ಕಡೆ ವಿಚಾರಿಸಿದ್ದಾರೆ. ಎಲ್ಲಿ ಬೈಕ್ ಕಾಣದೆ ಇದ್ದಿದ್ದರಿಂದ ಕಳೆದ ಆರನೇ ತಾರೀಖು ಈ ಸಂಬಂಧ ದೂರು ನೀಡಿದ್ದಾರೆ. 

ಟೆಲಿಗ್ರಾಂನ ಮೆಸೇಜ್​ ನಂಬಿ ಕೆಟ್ಟ ಸ್ನೇಹಿತರು ಕಳೆದುಕೊಂಡಿದ್ದು ಐದುವರೆ ಲಕ್ಷ ರೂಪಾಯಿ! ಹೇಗೆ ಗೊತ್ತಾ?

ಶಿವಮೊಗ್ಗ  ಜಿಲ್ಲೆ ಸಾಗರದ ಯುವಕನೊಬ್ಬ ಟೆಲಿಗ್ರಾಮ್​ನಲ್ಲಿ ಬಂದ ಬಿಟ್ ಕಾಯಿನ್​ ಜಾಹಿರಾತು ನಂಬಿ, ಬರೋಬ್ಬರಿ  5,56,850/-ರೂ ಗಳನ್ನು ಕಳೆದುಕೊಂಡಿದ್ದಾರೆ. ದಿನಾಂಕ-18-04-2023 ರಂದು  ಇಂದಿರಾ ಎಂಬ ಹೆಸರಿನ ಟೆಲಿಗ್ರಾಮ್ ಅಕೌಂಟ್​ನಿಂದ  VIPWOK Daily Channel ಎಂಬ ಜಾಹಿರಾತು ಬಂದಿದ್ದನ್ನ ನೊಂದ ಯುವಕ  ಕ್ಲಿಕ್ ಮಾಡಿದ್ದಾರೆ. ಅದಲ್ಲಿ ಬಿಟ್ ಕಾಯಿನ್ ಡಿಪಾಸಿಟ್ ಆ್ಯಡ್ ಪ್ರದರ್ಶನ ಗೊಂಡಿದೆ. ಅದನ್ನ ನಂಬಿ ಯುವಕ ಹಣವನ್ನು ಇನ್​ವೆಸ್ಟ್ ಮಾಡಿದ್ಧಾನೆ. ಹಂತ ಹಂತವಾಗಿ ಯುವಕ ಹಾಗೂ ಆತನ ಸ್ನೇಹಿತ  5,56,850/-ರೂ ಗಳನ್ನು ಹೂಡಿಕೆ ಮಾಡಿದ್ದಾರೆ. ಆನಂತರ ಅದು ಆನ್​ಲೈನ್ ವಂಚನೆಯ ಅಕೌಂಟ್ ಎಂದು ಗೊತ್ತಾಗಿದೆ. ಶಿವಮೊಗ್ಗ ಸಿಇಎನ್ ಪೊಲೀಸ್​ ಸ್ಟೇಷನ್​ ನಲ್ಲಿ ಈ ಸಂಬಂಧ ಕಂಪ್ಲೆಂಟ್ ದಾಖಲಾಗಿದ್ದು, ಎಫ್​ಐಆರ್ ಆಗಿದೆ.  

 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

 

Leave a Comment