KARNATAKA NEWS/ ONLINE / Malenadu today/ Aug 7, 2023 SHIVAMOGGA NEWS
ಶಿವಮೊಗ್ಗ: ಕುಡಿಯುವ ನೀರಿನ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ವೇತನ ಕೊಡಲು ತಂದಿದ್ದ 20 ಲಕ್ಷ ರೂಪಾಯಿಯನ್ನು ಕದ್ದೊಯ್ದ ಪ್ರಕರಣವನ್ನು ಶಿವಮೊಗ್ಗದ ತುಂಗಾ ನಗರ ಪೊಲೀಸ್ ಸ್ಟೇಷನ್ ಪೊಲೀಸರು (Tunga Nagar Police Station Police) ಭೇದಿಸಿದ್ದಾರೆ.
ಏನಿದು ಪ್ರಕರಣ?
ಶಿವಮೊಗ್ಗ ಸಿಟಿಯಲ್ಲಿನ 24*7 ಕುಡಿಯುವ ನೀರು ಸರಬರಾಜು ಕಾಮಗಾರಿಯ ಯೋಜನಾ ವ್ಯವಸ್ಥಾಪಕ ಹೇಮಂತ್ ಕುಮಾರ್ ರವರು ಕಾರ್ಮಿಕರಿಗೆ ವೇತನ ನೀಡಲು 20 ಲಕ್ಷ ರೂಪಾಯಿ ಕ್ಯಾಶ್ ಹಿಡಿದುಕೊಂಡು ಬಂದಿದ್ದರು. ಅದನ್ನ ಜ್ಯೋತಿ ನಗರದ ಬಳಿಯಲ್ಲಿ ಅವರ ಕಾರಿನಚಾಲಕ ಕಿತ್ತುಕೊಂಡು ಪರಾರಿಯಾಗಿದ್ದ. ಜುಲೈ 29ರಂದು ಈ ಘಟನೆ ನಡೆದಿತತ್ತು. ಪ್ರಕರಣ ಸಂಬಂಧ ತುಂಗಾನಗರ ಪೊಲೀಸರು ಕೇಸ್ ದಾಖಲಿಸಿದ್ದರು.
ಗೋವಾ ಕ್ಯಾಸಿನೋದಲ್ಲಿ ಅರೆಸ್ಟ್
ಇನ್ನೂ ತನಿಖೆ ಆರಂಭಿಸಿದ್ದ ತುಂಗಾನಗರ ಪೊಲೀಸರು ಆರೋಪಿಯ ಬೆನ್ನುಹತ್ತಿದ್ದಾರೆ. ಆತನಿಗೆ ಕ್ಯಾಸಿನೋದಲ್ಲಿ ಜೂಜಾಡುವ ಚಟವಿತ್ತು ಎಂದು ತಿಳಿದ ಪೊಲೀಸರು ಗೋವಾದಲ್ಲಿ ಆರೋಪಿಯ ಇರುವಿಕೆಯನ್ನ ಪತ್ತೆ ಮಾಡಿದ್ಧಾರೆ. ಅಲ್ಲಿಗೆ ತೆರಳಿದ್ದ ತನಿಖಾ ತಂಡ, ಕ್ಯಾಸಿನೋದಿಂದಲೇ ಆರೋಪಿಯನ್ನ ಬಂಧಿಸಿ ಕರೆತಂದಿದೆ. ಕದ್ದಿದ್ದ 20 ಲಕ್ಷ ರೂಪಾಯಿಯಲ್ಲಿ ಆರೋಪಿ ಅದಾಗಲೇ 12.39 ಲಕ್ಷ ರೂಪಾಯಿಯನ್ನು ಜೂಜಾಡಿ ಕಳೆದಿದ್ದ. ಸದ್ಯ ಆತನಿಂದ 7.61 ಲಕ್ಷ ರೂಪಾಯಿಯನ್ನ ಪೊಲೀಸರು ಜಪ್ತಿ ಮಾಡಿದ್ದಾರೆ.
ಇನ್ನಷ್ಟು ಸುದ್ದಿಗಳು
ತಾಯಿ ಜಗನ್ಮಾತೆ ಈ ಸುಂದರನ ಸರ್ವಾಂಗ ಸುಂದರನಾಗಿ ಮಾಡುವಳೇ!? ವೈರಲ್ ಆಯ್ತು ಹರಕೆ!
ಭದ್ರಾವತಿ ಭದ್ರಗಿರಿ, ಶಿವಮೊಗ್ಗ ಗುಡ್ಡೆಕಲ್ ಆಡಿ ಕೃತ್ತಿಕೆ ಜಾತ್ರೆ! ಯಾವಾಗ ಗೊತ್ತ ಭರಣಿ ಕಾವಡಿ ಉತ್ಸವ?
