ಭದ್ರಾವತಿ ಭದ್ರಗಿರಿ, ಶಿವಮೊಗ್ಗ ಗುಡ್ಡೆಕಲ್​ ಆಡಿ ಕೃತ್ತಿಕೆ ಜಾತ್ರೆ! ಯಾವಾಗ ಗೊತ್ತ ಭರಣಿ ಕಾವಡಿ ಉತ್ಸವ?

Bhadravathi Bhadragiri, Shivamogga Guddekal Aadi Krittika Jatra! Do you know when bharani kavadi festival? ಭದ್ರಾವತಿ ಭದ್ರಗಿರಿ, ಶಿವಮೊಗ್ಗ ಗುಡ್ಡೆಕಲ್​ ಆಡಿ ಕೃತ್ತಿಕೆ ಜಾತ್ರೆ! ಯಾವಾಗ ಗೊತ್ತ ಭರಣಿ ಕಾವಡಿ ಉತ್ಸವ?

ಭದ್ರಾವತಿ ಭದ್ರಗಿರಿ, ಶಿವಮೊಗ್ಗ ಗುಡ್ಡೆಕಲ್​ ಆಡಿ ಕೃತ್ತಿಕೆ ಜಾತ್ರೆ!  ಯಾವಾಗ ಗೊತ್ತ ಭರಣಿ ಕಾವಡಿ ಉತ್ಸವ?

KARNATAKA NEWS/ ONLINE / Malenadu today/ Aug 5, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ  ಭದ್ರಾವತಿ ತಾಲ್ಲೂಕಿನ  ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಿನ್ನೆ ಶುಕ್ರವಾರ ಆಡಿ ಕೃತ್ತಿಕೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ಸಿಕ್ಕಿದೆ. ಧ್ವಜಾರೋಹಣದೊಂದಿಗೆ ಜಾತ್ರೆಗೆ ಚಾಲನೆ ನೀಡಲಾಗಿದ್ದು, ಇದೇ ಆಗಸ್ಟ್ 8  ರಂದು ಭರಣಿ ಕಾವಡಿ ಉತ್ಸವ ಮತ್ತು  9 ರಂದು ಆಡಿ ಕೃತಿಕೆ ಜಾತ್ರೆ ನಡೆಯಲಿದೆ.

ಇನ್ನೂ ಶಿವಮೊಗ್ಗದಲ್ಲಿ  ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ನಿಂದ ಗುಡ್ಡೇಕಲ್‌ನ ದೇವಸ್ಥಾನದಲ್ಲಿ ಇದೇ ಆಗಸ್ಟ್​ ರಂದು ಭರಣಿ, ಕಾವಡಿ ಉತ್ಸವ ಹಾಗೂ 9ರಂದು ಆಡಿಕೃತ್ತಿಕೆ ಹರೋಹರ ಜಾತ್ರೆ ನಡೆಯಲಿದೆ. ಅಂದು ಬೆಳಗ್ಗೆ 4 ಗಂಟೆಯಿಂದಲೇ ಕಾವಡಿ ಹೊತ್ತ ನೂರಾರು ಭಕ್ತರು ಕುಟುಂಬ ಸಮೇತ ನಗರದ ನಾನಾ ಭಾಗದಿಂದ ಪಾದಯಾತ್ರೆ ಮೂಲಕ ಬಂದು ಹರಕೆ ತೀರಿಸಲಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ 2 ವರ್ಷ ಜಾತ್ರೆ ಅದ್ಧೂರಿಯಾಗಿ ನಡೆದಿರಲಿಲ್ಲ. ಈ ಬಾರಿ ಜಾತ್ರೆಗೆ 2 ಲಕ್ಷಕ್ಕಿಂತ ಅಧಿಕ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದೆ.  

ಬೊಮ್ಮನಕಟ್ಟೆ ಅಡ್ರೆಸ್ ಕೇಳಿ, ಬೈಕ್​ ಸವಾರನ ಮುಖಕ್ಕೆ ಗುದ್ದಿದ ದುಷ್ಕರ್ಮಿಗಳು ಚಾಕು ತೋರಿಸಿ! ಮೊಬೈಲ್​, ದುಡ್ಡು ಕಿತ್ಕೊಂಡು ಪರಾರಿ! ಆತಂಕ ಮೂಡಿಸಿದ ಘಟನೆ

ಶಿವಮೊಗ್ಗ ನಗರದ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಳಾಸ ಕೇಳುವ ನೆಪದಲ್ಲಿ  ಬೈಕ್​ ಸವಾರನೊಬ್ಬನನ್ನ ಸುಲಿಗೆ ಮಾಡಲಾಗಿದೆ. ಶಿವಮೊಗ್ಗ ನಗರದ ರೈಲ್ವೆ ಸ್ಟೇಷನ್​ ಸಮೀಪವೇ ಈ ಘಟನೆ ಸಂಭವಿಸಿದೆ. 

ದಿನಾಂಕ:- 02-08-2023 ರಂದು ನಡೆದ ಘಟನೆ ಇದಾಗಿದೆ. ಘಟನೆ ನಡೆದ ದಿನ ಬಿದರೆಯಿಂದ ಬೈಕ್​ ಸವಾರರೊಬ್ಬರು  100 ಅಡಿ ರಸ್ತೆಯಲ್ಲಿ ಬರುತ್ತಿದ್ದರು. ಈ ವೇಳೇ ಅವರನ್ನು ಹಿಂದಿನಿಂದ ಫಾಲೋ ಮಾಡಿದ್ದ ಇಬ್ಬರು  ಬೊಮ್ಮನಕಟ್ಟೆ ಹೋಗುವುದು ಹೇಗೆ ಎಂದು ವಿಚಾರಿಸಿದ್ದಾರೆ. ಈ ವೇಳೆ, ದೂರುದಾರ ಬೈಕ್​ ನಿಲ್ಲಿಸಿ ಅಡ್ರೆಸ್ ಹೇಳಿದ್ದಾರೆ. ಅಷ್ಟರಲ್ಲಿ ಬೈಕ್​ನಿಂದ ಇಳಿದ ದುಷ್ಕರ್ಮಿ, ಸಂತ್ರಸ್ತ ನಾಗರಾಜ್​ರ  ಬೈಕ್ ಕೀ ತೆಗೆದುಕೊಂಡು ಅವರ  ಮುಖಕ್ಕೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಇನ್ನೊಬ್ಬ ದುಷ್ಕರ್ಮಿ ಚಾಕು ನಾಗರಾಜ್​ರಿಂದ  ಮೊಬೈಲ್ ಹಾಗೂ  ಹಣ ಕಿತ್ತುಕೊಂಡಿದ್ದಾರೆ.  10000/- ರೂ ನಗದು ಹಣ ವೀವೋ ಕಂಪನಿಯ  ಮೊಬೈಲ್ ಅನ್ನು ಕಿತ್ತುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ದೌಡಾಯಿಸಿ ನಾಗರಾಜ್​ರಿಗೆ ಮೆಗ್ಗಾನ್​ನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ಧಾರೆ. ಆನಂತರ ನಾಗರಾಜ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.  





ಇನ್ನಷ್ಟು ಸುದ್ದಿಗಳು 



 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು