ಸೋಶಿಯಲ್​ ಮೀಡಿಯಾ ಅಡ್ಮಿನ್, ಫಾರವರ್ಡ್​ ಮೆಂಬರ್ಸ್​​ಗೆ ಮಹತ್ವದ ಎಚ್ಚರಿಕೆ ನೀಡಿದ ಎಸ್​ಪಿ ಮಿಥುನ್​ಕುಮಾರ್ ! ಸೂಚನೆ ಉಲ್ಲಂಘಿಸಿದರೇ ಸಂಕಷ್ಟ!

Malenadu Today

KARNATAKA NEWS/ ONLINE / Malenadu today/ Aug 5, 2023 SHIVAMOGGA NEWS 

ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್  ಸಾರ್ವಜನಿಕರಿಗೆ ಪ್ರಕಟಣೆ ಮೂಲಕ ಎಚ್ಚರಿಕೆಯ ಸೂಚನೆಯೊಂದನ್ನ ರವಾನಿಸಿದ್ದಾರೆ. ಅವರು ನೀಡಿದ ಸೂಚನೆಯನ್ನು ಗಮನಿಸುವುದಾದರೆ, ಅದರ ವಿವರ ಇಲ್ಲಿದೆ. 

ಸೂಚನೆಯಲ್ಲಿ ಏನಿದೆ.  

ಹೊರ ರಾಜ್ಯಗಳಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋ ತುಣುಕುಗಳು ರಾಜ್ಯಕ್ಕೆ ಸಂಬಂಧಿಸಿದ್ದಲ್ಲ. ನೈಜ ಸುದ್ದಿಗಳನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟವರ ಮೇಲೆ ನಿಗಾ ಇರಿಸಿದ್ದು, ಕಾನೂನು ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ವಾಟ್ಸ್‌ಆ್ಯಪ್, ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಬಿಡಿವುದು ಕಾನೂನು ರೀತಿಯ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಪೊಲೀಸ್ ಇಲಾಖೆಯಿಂದ ನಿರಂತರವಾಗಿ ಸಾಮಾಜಿಕ ಜಾಲತಾಣದ ಮೇಲೆ ನಿಗಾ ಇಡಲಾಗಿದೆ. ಯಾವುದೇ ಪ್ರಚೋದನಾತ್ಮಕ ವಿಡಿಯೋಗಳನ್ನು ಹರಿಬಿಟ್ಟಿರುವುದು ಇಲಾಖೆಯ ಗಮನಕ್ಕೆ ಬಂದರೆ, ವಿಡಿಯೋಗಳನ್ನು ಹರಿಬಿಟ್ಟವರು ಈ ಬಗ್ಗೆ ಇಲಾಖೆಗೆ ಸೂಕ್ತ ಸ್ಪಷ್ಟನೆ ನೀಡಬೇಕು ಎಂದಿದ್ದಾರೆ.

ಒಂದು ವೇಳೆ ಕಾನೂನು ಉಲ್ಲಂಘನೆ ಮಾಡಿರುವುದು ಕಂಡುಬಂದಲ್ಲಿ ಅಂತಹ ವ್ಯಕ್ತಿಗಳು ಮತ್ತು ಗ್ರೂಪ್ ಅಡ್ಮಿನ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹಾಗಾಗಿ ಸಾರ್ವಜನಿಕರು ಯಾವುದೇ ರೀತಿಯ ಸುಳ್ಳುಸುದ್ದಿಗಳಿಗೆ ಕಿವಿಗೊಡಬಾರದು. ಪ್ರಚೋದನೆಗೆ ಒಳಗಾಗಬಾರದು ಹಾಗೂ ಯಾವುದೇ ಸುಳ್ಳು, ಪ್ರಚೋದನಾತ್ಮಕ ವಿಡಿಯೋ, ಪೋಸ್ಟ್, ಸುದ್ದಿಗಳ ಸತ್ಯಾಸತ್ಯತೆಯನ್ನು ತಿಳಿಯದೇ ಫಾರ್ವರ್ಡ್, ಪೋಸ್ಟ್ ಅಥವಾ ಟ್ವೀಟ್ ಮಾಡಬೇಡಿ. ಸತ್ಯಾಸತ್ಯತೆ ಕುರಿತು ಇಲಾಖೆಯಿಂದ ಸ್ಪಷ್ಟನೆ ಪಡೆಯುವಂತೆ ಸೂಚಿಸಿದ್ದಾರೆ.

ಆ.2 ರಂದು ಬಿದರೆಯಿಂದ ನಾಗರಾಜ್ ಎಂಬುವರು ಸಂಜೆ 4-30 ರ ಸಮಯದಲ್ಲಿ ತರಕಾರಿ ತರಲು ಹೀರೋ ಹೊಂಡಾ ಹೆಚ್ ಎಫ್ ಡಿಲಕ್ಸ್ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಬ್ಲಡ್ ಬ್ಯಾಂಕ್ ರಸ್ತೆಯಲ್ಲಿ ಇಬ್ಬರು ಅಪರಿಚಿತರು ಅಡ್ಡಗಟ್ಟಿದ್ದಾರೆ. ಓರ್ವ ಬೊಮ್ಮನ್ ಕಟ್ಟೆಗೆ ಹೋಗುವ ದಾರಿಯಾವುದು ಎಂದು ವಿಳಾಸ ಕೇಳುವ ನಾಟಕವಾಡಿದ್ದಾನೆ. ಮತ್ತೋರ್ವ ಬೈಕ್ ನ ಕೀ ಕಿತ್ತುಕೊಂಡಿದ್ದಾನೆ. ಕೀ ಯಾಕೆ ಕಿತ್ತುಕೊಂಡ್ರಿ ಕೀ ಕೊಡಿ ಎಂದು ಕೇಳಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಲಾಗಿದೆ. ಇಬ್ಬರು ಅಪರಿಚಿತರು ನಿನ್ನ ಬಳಿ ಏನಿದೆ ಅದನ್ನ ಕೊಡು ಎಂದು ಬೆದರಿಸಿದ್ದಾರೆ. ನನ್ನ ಬಳಿ ಏನೂ ಇಲ್ಲವೆಂದು ಹೇಳುವರ್ಷರಲ್ಲಿ ಆತನ ಜೇಬಿಗೆ ಕೈಹಾಕಿ 10 ಸಾವಿರ ರೂ. ಹಣ ಮತ್ತು‌ ವಿವೋ ಮೊಬೈಲ್ ಕಿತ್ತುಕೊಂಡು ಅಪರಿಚತರು ಪರಾರಿಯಾಗಿದ್ದಾರೆ. ಪ್ರಕರಣ ಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.


ಅಡ್ಡ ಬಂದ ಬೈಕ್​ಗೆ ಡಿಕ್ಕಿ ಹೊಡೆಯುವುದನ್ನ ತಪ್ಪಿಸುವ ವೇಳೆ ಆಕ್ಸಿಡೆಂಟ್ ! ಪಲ್ಟಿಯಾದ ಬಸ್​ , 25 ಮಂದಿಗೆ ಗಾಯ!

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಉಳ್ಳೂರು ಸಮೀಪ ಅಡ್ಡ ಬಂದ  ಬೈಕ್ಗೆ ಡಿಕ್ಕಿಯಾಗುವುದನ್ನ ತಪ್ಪಿಸುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್​ವೊಂದು ರಸ್ತೆ ಪಕ್ಕದ ತಗ್ಗಿಗೆ ಉರುಳಿ ಪಲ್ಟಿಯಾಗಿದೆ. ಘಟನೆಯಲ್ಲಿ 25  ಮಂದಿ ಗಾಯಗೊಂಡಿದ್ದಾರೆ. ಶಿವಮೊಗ್ಗದಿಂದ ಸಾಗರಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಬೈಕ್​ವೊಂದು  ಅಡ್ಡ  ಬಂದಿತ್ತು. ಇದನ್ನ   ತಪ್ಪಿಸಲು ಹೋದಾಗ ಬಸ್ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ರಸ್ತೆಯ ಪಕ್ಕದಲ್ಲಿ ಮಣ್ಣಿನ ದಿಬ್ಬ ಇದ್ದಿದ್ದರಿಂದ ಭಾರಿ ಅವಘಡ ತಪ್ಪಿದೆ. ಇನ್ನೂ ಘಟನೆಯಲ್ಲಿ ಬೈಕ್​ ಸವಾರನು ಬಿದ್ದಿದ್ದು, ಘಟನೆ ನೋಡಿ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಬಸ್‌ನಲ್ಲಿದ್ದ 27 ಪ್ರಯಾಣಿಕರ ಪೈಕಿ 25 ಜನರಿಗೆ ಗಾಯಗಳಾಗಿವೆ. 4 ಜನರನ್ನು ಶಿವಮೊಗ್ಗಾದ ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.  ಬಸ್‌ಚಾಲಕ ಸಣ್ಣಪ್ಪ ಗಾಣಿಗೆರ ಅವರ ತಲೆಗೆ ಪೆಟ್ಟಾಗಿದ್ದು ನಿರ್ವಾಹಕ ಗೌಡಪ್ಪ ಅವರ ಕೈ ಮುರಿದಿದೆ. 


ನಾಗೋಡಿ ಬಳಿ ವಿದ್ಯುತ್​ ಕಂಬಕ್ಕೆ ಗುದ್ದಿದ ತಮಿಳುನಾಡಿನ ಟೂರಿಸ್ಟ್​ ಬಸ್​! ವಾರದಲ್ಲಿ ಎರಡನೇ ಘಟನೆ!

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು  ನಿಟ್ಟೂರು ಸಮೀಪ ನಿನ್ನೆ ಬಸ್​ವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ. ಕೆಲದಿನಗಳ ಹಿಂದ ಸಾಗರ ತಾಲ್ಲೂಕಿನ ಗೆಣಸಿನಕುಣಿ ಬಳಿಯಲ್ಲಿ ಖಾಸಗಿ ಬಸ್​ವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಯಾಗಿತ್ತು. ಪರಿಣಾಮ ಕರೆಂಟ್​ ವಯರ್​ ಬಸ್ ಮೇಲೆಯೆ ಬಿದ್ದಿತ್ತು. ಈ ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಇದರ ಬೆನ್ನಲ್ಲೆ ನಿನ್ನೆ  ನಿಟ್ಟೂರು ಸಮೀಪ ನಾಗೋಡಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿ ಬಸ್ಸೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ತಮಿಳುನಾಡಿನ ವಂದವಾಸಿಯಿಂದ ಬಂದಿದ್ದ ಬಸ್​ ಹುಂಚಾದ ಮೂಲಕ ಸಾಗಿ ಕೊಲ್ಲೂರು ಕಡೆಗೆ ಹೋಗುತ್ತಿತ್ತು. ದನವೊಂದಕ್ಕೆ ಡಿಕ್ಕಿಯಾಗುವುದನ್ನ ತಪ್ಪಿಸುವ ವೇಳೆ ಬಸ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ . ಅದೃಷ್ಟಕ್ಕೆ ಯಾವುದೇ ಅಪಾಯ ಸಂಭವಿಸಲಿಲ್ಲ. ಬಸ್​ನಲ್ಲಿ 51 ಜನರಿದ್ದರು. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇನ್ನಷ್ಟು ಸುದ್ದಿಗಳು 

 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

Share This Article