ಸಿಗಂದೂರು ಸೇತುವೆ ಉದ್ಘಾಟನೆಗೆ ಕಾಗೋಡು ತಿಮ್ಮಪ್ಪರವರ ನೇತೃತ್ವ!

Malenadu Today

KARNATAKA NEWS/ ONLINE / Malenadu today/ Aug 7, 2023 SHIVAMOGGA NEWS 

ಸಹಕಾರಿ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಪ್ರವೇಶ ಮಾಡಬಾರದು ಎಂದು ಸಹಕಾರಿ ಸಚಿವ ರಾಜಣ್ಣ ಹೇಳಿದ್ದಾರೆ. ಅಡಿಕೆ ಆಮದು ಮಾಡಿಕೊಳ್ಳುತ್ತಿರುವ ಸರ್ಕಾರ, ವಿದೇಶಿ ಅಡಿಕೆಗೆ ಸೂಕ್ತ ತೆರಿಗೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ಸಾಗರದ ಅಡಿಕೆ ಪರಿಷ್ಕರ ಮತ್ತು ಮಾರಾಟ ಸಂಗ್ರಹದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾಗರದ ಅಪ್ಕೋಸ್ ಸಂಸ್ಥೆ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಸಹಕಾರಿ ಸಂಸ್ಥೆ ಪ್ರಾರಂಭ ಮಾಡುವುದು ಸುಲಭ .ಆದರೆ ಸಂಸ್ಥೆಯ ಉದ್ದೇಶ ಕಾರ್ಯಚಟುವಟೆಯನ್ನು ವೃದ್ಧಿಗೊಳಿಸಿ ಆರ್ಥಿಕವಾಗಿ ಸದೃಡಗೊಳಿಸುವುದು ತುಂಬಾ ಕಷ್ಟದ ಕೆಲಸ ಎಂದು ಹೇಳಿದರು. ಸಹಕಾರಿ ಕ್ಷೇತ್ರ ರಾಜಕೀಯದಿಂದ ಮುಕ್ತವಾಗಿರಬೇಕು. ಈ ಕ್ಷೇತ್ರದ ಮೇಲೆ ರಾಜಕೀಯ ಎಂದು ಪ್ರವೇಶ ಮಾಡಬಾರದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಧು ಬಂಗಾರಪ್ಪ ಅಪ್ಕೋಸ್ ಸಂಸ್ಥೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಸಂಸ್ಥೆಯಲ್ಲಿ ತಾವು ಕೂಡ ಸಾಲ ಪಡೆದಿರುವುದಾಗಿ ತಿಳಿಸಿದರು. ಅಡಿಕೆ ಬೆಳೆಗಾರರ ಸಂಕಷ್ಟ ಏನೆಂಬುದು ನಮಗೆ ಗೊತ್ತಿದ. ವಿದೇಶದಿಂದ ಅಡಿಕೆ ಇಂದು ಅಮಾದಾಗುತ್ತಿದ್ದು, ಅದರ ಪರಿಣಾಮ ಸ್ಥಳೀಯ ಅಡಿಕೆ ಬೆಳೆಗಾರರ ಮೇಲೆ  ಬೀಳುತ್ತಿದೆ. ವಿದೇಶಿ ಅಡಿಕೆಗೆ ಸುಂಕ ವಿಧಿಸಿದರೆ, ಸರ್ಕಾರಕ್ಕೂ ಲಾಭವಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರದ ಮೇಲೆ ಒತ್ತಡ ಹೇರಬೇಕಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು. ಅಲ್ಲದೆ ಅಪ್ಕೋಸ್ ಸಂಸ್ಥೆಯ ವಿರುದ್ಧ ನ್ಯಾಯಾಲಯದಲ್ಲಿ ಹೂಡಲಾಗಿರುವ ಧಾವೆಯನ್ನು ಸಹಕಾರಿ ಸಚಿವರು ರದ್ದುಗೊಳಿಸಬೇಕೆಂದು ಮಧು ಬಂಗಾರಪ್ಪ ವೇದಿಕೆಯಲ್ಲಿ ಮನವಿ ಮಾಡಿದರು.

ಇದಕ್ಕು ಮುನ್ನ ಮಾತನಾಡಿದ ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ, ಅಡಿಕೆ ಬೆಳೆಗಾರರ ಹಿತಕಾಯಲು ತಾವು ಬದ್ದವಿರುವುದಾಗಿ ಜನತೆಯಲ್ಲಿ ವಿಶ್ವಾಸ ತುಂಬಿದರು. ಅಡಿಕೆ ಆಮದನಿಂದ ರೈತರಿಗೆ ಸಂಕಷ್ಟವಾಗಿದ್ದರೂ, ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು. ತಾಳಗುಪ್ಪ ಹೊನ್ನಾವರ ರೈಲು ಮಾರ್ಗಕ್ಕೆ ಹಸಿರು ನಿಶಾನೆ ದೊರೆತಿದ್ದು, ಅರಣ್ಯ ಇಲಾಖೆಯ ಕೆಲವು ಫಾರ್ಮಲಿಟಿಸ್ ಬಾಕಿ ಇದೆ ಎಂದು ತಿಳಿಸಿದ ಅವರು ತಮ್ಮ ಅಧಿಕಾರವಧಿಯಲ್ಲಿ ಆದ ಕಾಮಗಾರಿಗಳ ಬಗ್ಗೆ ವಿವರಣೆ ನೀಡಿದರು ಶೀಘ್ರದಲ್ಲಿಯೇ ಸಿಗಂದೂರು ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದ್ದು,ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪರವರ ನೇತ್ರತ್ವದಲ್ಲಿ ಉದ್ಗಾಟನೆ ಮಾಡುವುದಾಗಿ ರಾಘವೇಂದ್ರ ತಿಳಿಸಿದರು. ಸಮಾವೇಶದಲ್ಲಿ ಅಧ್ಯಕ್ಷತೆ ಭಾಷಣ ಮಾಡಿದ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ, ಅಡಿಕೆ ಬೆಳೆಗಾರರ ಹಿತಕಾಯಲು ತಾವು ಬದ್ಧ ಇರುವುದಾಗಿ ತಿಳಿಸಿದರು. ಸಮಾವೇಶದಲ್ಲಿ ಹಿರಿಯ ಸಹಕಾರಿಗಳನ್ನು ಗೌರವಿಸಲಾಯಿತು. ಕೂಪನ್ ಗಳನ್ನು ವಿತರಿಸಲಾಯಿತು.

ಶಿವಮೊಗ್ಗದಲ್ಲಿ ಮತ್ತೊಬ್ಬ ಕಾರು ಚಾಲಕ ಅರೆಸ್ಟ್! ಗೋವಾದ ಕ್ಯಾಸಿನೋದಲ್ಲಿ ಸಿಕ್ಕಿಬಿದ್ದಆರೋಪಿ! ಏನಿದು 20 ಲಕ್ಷ ರೂಪಾಯಿ ಕೇಸ್!

ಇನ್ನಷ್ಟು ಸುದ್ದಿಗಳು 

 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

 

Share This Article