ವಾಟ್ಸ್ಯಾಪ್​ ನಲ್ಲಿ ಡೆತ್​ ನೋಟ್ ಮೆಸೇಜ್​ ಮಾಡಿ ನಾಪತ್ತೆಯಾಗಿದ್ದ ಎನ್​ಪಿಎಸ್ ನೌಕರರ ಸಂಘದ ಶಿವಮೊಗ್ಗ ತಾಲ್ಲೂಕು ಅಧ್ಯಕ್ಷ ಪತ್ತೆ! ಸಿಕ್ಕಿದ್ದೇಗೆ ಗೊತ್ತಾ?

Shimoga taluk president of NPS Employees' Union, who went missing after sending a suicide note on WhatsApp, has been found. Do you know why you got it?

ವಾಟ್ಸ್ಯಾಪ್​ ನಲ್ಲಿ ಡೆತ್​ ನೋಟ್ ಮೆಸೇಜ್​ ಮಾಡಿ ನಾಪತ್ತೆಯಾಗಿದ್ದ ಎನ್​ಪಿಎಸ್ ನೌಕರರ ಸಂಘದ ಶಿವಮೊಗ್ಗ ತಾಲ್ಲೂಕು ಅಧ್ಯಕ್ಷ ಪತ್ತೆ! ಸಿಕ್ಕಿದ್ದೇಗೆ ಗೊತ್ತಾ?

KARNATAKA NEWS/ ONLINE / Malenadu today/ Jul 22, 2023 SHIVAMOGGA NEWS 

ಶಿವಮೊಗ್ಗದಲ್ಲಿ ತಮಗೆ ಸಂಬಂಧಿಸಿದ ವಾಟ್ಸ್ಯಾಪ್ ಗ್ರೂಪ್​ನಲ್ಲಿ ಡೆತ್ ನೋಟ್ ಮಾದರಿಯ ಮೆಸೇಜ್​ವೊಂದನ್ನ ಹಾಕಿ ನಾಪತ್ತೆಯಾಗಿದ್ದ  ಎನ್​ಪಿಎಸ್​ ನೌಕರರರ ಸಂಘದ ಶಿವಮೊಗ್ಗ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಭಾಕರ್ ಎಸ್​ ಪತ್ತೆಯಾಗಿದ್ದಾರೆ. 

ಇದ್ದಕ್ಕಿದ್ದಂತೆ ಬೆಳಗಿನ ಜಾವ ಮೆಸೇಜ್ ಹಾಕಿದ್ದ ಪ್ರಭಾಕರ್​ ಇತ್ತೀಚೆಗೆ ನಾಪತ್ತೆಯಾಗಿದ್ದರು. ಅವರು ಹಾಕಿದ್ದ ಎರಡು ಮೆಸೇಜ್​ಗಳು ಆತಂಕ ಮೂಡಿಸಿದ್ದವಷ್ಟೆ ಅಲ್ಲದೆ, ಅದರಲ್ಲಿದ್ದ ವ್ಯಕ್ತಿಗಳ ವಿರುದದ್ಧ ಆರೋಪ  ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಪ್ರಭಾಕರ್ ಪತ್ತೆಯಾಗಿದ್ದಾರೆ., ‘

NPS ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಮಿಸ್ಸಿಂಗ್​ ಕೇಸ್​! ಪ್ರಕರಣದ ಬಗ್ಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್​.ಷಡಾಕ್ಷರಿ ಹೇಳಿದ್ದೇನು?

ಪ್ರಭಾಕರ್​ರವರ ನಾಪತ್ತೆ ಪ್ರಕರಣ ಸಂಬಂಧ ಶಿವಮೊಗ್ಗ ನಗರದ ಕೋಟೆ ಪೊಲೀಸ್ ಸ್ಟೇಷನ್ (Kote Police Station) ನಲ್ಲಿ ಅವರ ಪ್ರತ್ನಿ ದೂರು ದಾಖಲಿಸಿದ್ದರು, ಆನಂತರ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಪ್ರಭಾಕರ್​ರವರ ಇರುವಿಕೆಯನ್ನು ಪತ್ತೆ ಮಾಡಲು ಮುಂದಾಗಿದ್ದರು. 

Whatsapp ನಲ್ಲಿ ಡೆತ್ ನೋಟ್​ ಕಳುಹಿಸಿ NPS ನೌಕರರ ಸಂಘದ ಶಿವಮೊಗ್ಗ ತಾಲ್ಲೂಕು ಘಟಕದ ಅಧ್ಯಕ್ಷ MISSING

ಸದ್ಯ ಕೋಟೆ ಠಾಣೆ ಪೊಲೀಸರು ಪ್ರಭಾಕರ್​ರವರನ್ನ ದಾವಣಗೆರೆಯಲ್ಲಿ ಪತ್ತೆ ಮಾಡಿ ಶಿವಮೊಗ್ಗಕ್ಕೆ ಕರೆ ತಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ತಮ್ಮ ಕಾರಿನೊಂದಿಗೆ ಮನೆ ಬಿಟ್ಟಿದ್ದ ಪ್ರಭಾಕರ್  ಕಾರ್ಕಳ ತೆರಳಿದ್ದು, ಅಲ್ಲಿ ಕಾರನ್ನು ಬಿಟ್ಟು ಹುಬ್ಬಳ್ಳಿಗೆ ತೆರಳಿದ್ದರಂತೆ ಆನಂತರ ಅಲ್ಲಿಂದ ದಾವಣಗೆರೆ ತಲುಪಿದ್ದರಂತೆ. ಇದರ ಬಗ್ಗೆ ಸುಳಿವು ಪಡೆದ ಪೊಲೀಸರು ಪ್ರಭಾಕರ್​ ರವರನ್ನ ದಾವಣಗೆರೆಯಲ್ಲಿ ಪತ್ತೆ ಮಾಡಿ ಕರೆತಂದಿದ್ದಾರೆ. ಸದ್ಯ ಕೋಟೆ ಪೊಲೀಸ್ ಸ್ಟೇಷನ್​ನಲ್ಲಿ ವಿಚಾರಣೆ ನಡೆಯುತ್ತಿದೆ. 



ನಡುರಸ್ತೆಯಲ್ಲಿ ಮಹಿಳೆಯ ಕೊಲೆ! ಸಾಬೀತಾಯ್ತು ಅಪರಾಧ! ಶಿಕಾರಿಪುರ ಗ್ರಾಮಾಂತರ ಠಾಣೆಯ ಕೇಸ್​ನಲ್ಲಿ ಕೋರ್ಟ್ ತೀರ್ಪು!

ಮಾಜಿ ಸಿಎಂ ಬಿಎಸ್​ವೈ ಇನ್ಮುಂದೆ ಡಾ.ಬಿಎಸ್​ ಯಡಿಯೂರಪ್ಪ! ಅಭಿಮಾನಿಗಳಿಗೂ ಅವಕಾಶ ನೀಡಿದ BYR

ಮಗ ಬೈಕ್​ ಓಡಿಸಿದ ತಪ್ಪಿಗೆ 25 ಸಾವಿರ ರೂಪಾಯಿ ದಂಡ ಕಟ್ಟಿದ ತಂದೆ! ಕಾರಣವೇನು ಗೊತ್ತಾ?

ವೈದ್ಯರೊಬ್ಬರ ಸಮಯ ಪ್ರಜ್ಞೆಯಿಂದ ಬಯಲಾಯ್ತು ದುಷ್ಕೃತ್ಯ! ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಯ್ತು ಮತ್ತೊಂದು ಪೋಕ್ಶೋ ಕೇಸ್!

 ​