Whatsapp ನಲ್ಲಿ ಡೆತ್ ನೋಟ್​ ಕಳುಹಿಸಿ NPS ನೌಕರರ ಸಂಘದ ಶಿವಮೊಗ್ಗ ತಾಲ್ಲೂಕು ಘಟಕದ ಅಧ್ಯಕ್ಷ MISSING

Whatsapp ನಲ್ಲಿ ಡೆತ್ ನೋಟ್​ ಕಳುಹಿಸಿದ ಬಳಿಕ NPS ನೌಕರರ ಸಂಘದ ಶಿವಮೊಗ್ಗ ತಾಲ್ಲೂಕು ಘಟಕದ ಅಧ್ಯಕ್ಷ MISSINGShimoga taluk unit president of NPS Employees Association MISSING after sending a death note on WhatsApp

Whatsapp ನಲ್ಲಿ ಡೆತ್ ನೋಟ್​ ಕಳುಹಿಸಿ NPS ನೌಕರರ ಸಂಘದ ಶಿವಮೊಗ್ಗ ತಾಲ್ಲೂಕು ಘಟಕದ ಅಧ್ಯಕ್ಷ MISSING

KARNATAKA NEWS/ ONLINE / Malenadu today/ Jul 19, 2023 SHIVAMOGGA NEWS

ಶಿವಮೊಗ್ಗ / ರಾಜ್ಯ  NPS ನೌಕರರ ಸಂಘ, ಶಿವಮೊಗ್ಗ ತಾಲ್ಲೂಕು ಘಟಕದ ಅಧ್ಯಕ್ಷರಾಗಿದ್ದ ಪ್ರಭಾಕರ್​ ಎಸ್​ ಎನ್ನುವವರು, ತಮ್ಮ ಸರ್ಕಾರಿ ನೌಕರರ ಸಂಘದ ಗ್ರೂಪ್​ನಲ್ಲಿ ಡೆತ್​ನೋಟ್​ ಪೋಸ್ಟ್​ ಮಾಡಿ ನಾಪತ್ತೆಯಾಗಿದ್ದಾರೆ. ವಾಟ್ಸ್ಯಾಪ್​ ಗ್ರೂಪ್​ ಚಾಟ್​ನಲ್ಲಿ ಡೆತ್​ನೋಟ್​ ಸೆಂಡ್​ ಮಾಡಿದ ಬಳಿಕ ಅವರ ಮೊಬೈಲ್  ಸ್ವಿಚ್ ಆಪ್​ ಆಗಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ. ಶಿವಮೊಗ್ಗದ ಮಲ್ಲಪ್ಪ ಕಾಂಪ್ಲೆಕ್ಸ್​ ಬಳಿ ಬರುವ ಸೋಮಯ್ಯ ಲೇಔಟ್​ನಲ್ಲಿರುವ ಪ್ರಭಾಕರ್​ರವರ ಮನೆಯ ಬಳಿ, ಅವರ ಸ್ನೇಹಿತರು ಜಮಾಯಿಸಿದ್ದು, ಸದ್ಯ ಪೊಲೀಸರಿಗೆ ನಾಪತ್ತೆ ದೂರು ನೀಡಲು ಮುಂದಾಗಿದ್ದಾರೆ. ಇನ್ನೂ ಪ್ರಭಾಕರ್​ ರವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸ್ಯಾಪ್​ ಗ್ರೂಪ್​ನಲ್ಲಿ ಕಳಹಿಸಿದ ಮೇಸೇಜ್​ನಲ್ಲಿ  ಹೇಳಿದ್ದು, ತಮ್ಮ ಸಾವಿಗೆ  ಹಲವರರು ಕಾರಣ ಎಂದು ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದಾರೆ. 

ವಾಟ್ಸ್ಯಾಪ್​ ನಲ್ಲಿ ಕಳುಹಿಸಿದ ಡೆತ್​ನೋಟ್​ನಲ್ಲಿ ಏನಿದೆ?

ಇವತ್ತು KSGNPSEA  ಹೆಸರಿನ ವಾಟ್ಸ್ಯಾಪ್​ ಗ್ರೂಪ್​ನಲ್ಲಿ ಎನ್​​ಪಿಎಸ್​ ಪ್ರಭಾಕರ್​ ಹೆಸರಲ್ಲಿ, ಪ್ರಭಾಕರ್​ರವರ ಡೆತ್ ನೋಟ್​ ಪೋಸ್ಟ್ ಆಗಿದೆ. ಬೆಳಗಿನ ಜಾವ 4.28 ಕ್ಕೆ ಮೊದಲ ಮೆಸೇಜ್​ ಗ್ರೂಪ್​ಗೆ ರವಾನೆಯಾಗಿದ್ದು, ಎರಡನೇ ಸಂದೇಶ ಬೆಳಗ್ಗೆ 8.13 ಕ್ಕೆ ಗ್ರೂಪ್​ಗೆ ರವಾನೆಯಾಗಿದೆ.  ಮೊದಲನೇ ಸಲ ಕಳುಹಿಸಿರುವ ಸಂದೇಶದಲ್ಲಿ,  ಆತ್ಮೀಯ ರಾಜ್ಯದ ಸಮಸ್ತ NPS ನೌಕರ ಸಂಘದ ಪದಾಧಿಕಾರಿ ಮಿತ್ರರೇ ನಾನು ಕಳೆದ ಹತ್ತು ವರ್ಷಗಳಿಂದ NPS ನೌಕರ ಸಂಘವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಕಟ್ಟಿ ಬೆಳೆಸಿದ್ದೇನೆ ರಾಜ್ಯ ಸಂಘದ ನಿರ್ಧೇಶನದಂತೆ ಅನೇಕ ಕಾರ್ಯಕ್ರಮಗಳನ್ನು ಶಿವಮೊಗ್ಗ ತಾಲ್ಲೂಕಿನಲ್ಲಿ ಯಶಸ್ವಿಯಾಗಿ ಸಂಘಟನೆ ಮಾಡಿದ್ದೇನೆ ಇತ್ತೀಚೆಗೆ ಜನವರಿ 22-2023 ರಂದು ಶಿವಮೊಗ್ಗ ಜಿಲ್ಲಾ ಮಟ್ಟದ NPS ನೌಕರರ ಸಮಾವೇಶ ಮತ್ತು ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ್ದರ ಫಲವಾಗಿ ನನ್ನ ವೃತ್ತಿಬದುಕಿಗೆ ರಾಜ್ಯದ ನೌಕರ ಸಂಘದ ಅಧ್ಯಕ್ಷರಿಂದ ವ್ಯವಸ್ಥಿತ ತೊಂದರೆಯಾಗಿ ಕಳೆದ 6 ತಿಂಗಳಿಂದ ವೇತನವಿಲ್ಲದೆ ನರಕಯಾತನೆ ಅನುಭವಿಸಿದ್ದೇನೆ ಮತ್ತು ನನ್ನ ಇಡೀ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ ನನ್ನ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಕಾಲ ಕಳೆದಾಯಿತು ಆದರೂ ಯಾವುದೇ ಪರಿಹಾರ ಸಿಗದೆ ಪ್ರಯತ್ನಗಳೆಲ್ಲ ವಿಫಲವಾಗಿದ್ದು ಅತ್ಯಂತ ನೋವಿನ ಸಂಗತಿ .ಈ ಘಟನೆಗೆ ಕಾರಣರಾದವರು ಚೆನ್ನಾಗಿರಲಿ......ನಾನು ಈ ಸಮಸ್ಯೆಯನ್ನು ನಿಭಾಯಿಸುವಲ್ಲಿ ಮಾನಸಿಕವಾಗಿ ವಿಫಲನಾಗಿರುವ ಪ್ರಯುಕ್ತ ನಾನು ಬದುಕಿಗೆ ವಿಧಾಯ ಹೇಳಲು ಬಯಸಿದ್ದೇನೆ.....ನನ್ನ ಈ ನನ, ಕುಟುಂಬದ ಹೊಣೆಗಾರಿಕೆ  ಇಡೀ NPS ನೌಕರ ಸಂಘಟನೆಯದ್ದು ದಯವಿಟ್ಟು ನನ್ನ ಕುಟುಂಬಕ್ಕೆ ಸಹಾಯ ಸಹಕಾರ ಮಾಡಿ......ಇಂತಿ ನಿಮ್ಮ ನತದೃಷ್ಟ NPS ನೌಕರ ಪ್ರಭಾಕರ ಎಸ್.......

ಎರಡನೇ ಸಲ ರವಾನೆಯಾಗಿರುವ ಸಂದೇಶದಲ್ಲಿ  ಹೀಗೆ  ಬರೆಯಲಾಗಿದೆ, ಆತ್ಮೀಯ ರಾಜ್ಯದ ಸಮಸ್ತ NPS ನೌಕರ ಸಂಘದ ಪದಾಧಿಕಾರಿ ಮಿತ್ರರೇ ನಾನು ಕಳೆದ ಹತ್ತು ವರ್ಷಗಳಿಂದ NPS ನೌಕರ ಸಂಘವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಕಟ್ಟಿ ಬೆಳೆಸಿದ್ದೇನೆ ರಾಜ್ಯ ಸಂಘದ ನಿರ್ಧೇಶನದಂತೆ ಅನೇಕ ಕಾರ್ಯಕ್ರಮಗಳನ್ನು ಶಿವಮೊಗ್ಗ ತಾಲ್ಲೂಕಿನಲ್ಲಿ ಯಶಸ್ವಿಯಾಗಿ ಸಂಘಟನೆ ಮಾಡಿದ್ದೇನೆ ಇತ್ತೀಚೆಗೆ ಜನವರಿ 22-2023 ರಂದು ಶಿವಮೊಗ್ಗ ಜಿಲ್ಲಾ ಮಟ್ಟದ NPS ನೌಕರರ ಸಮಾವೇಶ ಮತ್ತು ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ್ದರ ಫಲವಾಗಿ ನನ್ನ ವೃತ್ತಿಬದುಕಿಗೆ ರಾಜ್ಯದ ನೌಕರ ಸಂಘದ ಅಧ್ಯಕ್ಷರಾದ ಷಡಾಕ್ಷರಿ, ಅವರ ಸಹಚರರಾದ ಮೋಹನ್ ಕುಮಾರ ಆರ್,ಬಸವನಗೌಡ, ಹಾಗೂ ಹಿಂದಿನ ಶಿಕ್ಷಣ ಸಚಿವರಾ ಬಿ.ಸಿ.ನಾಗೇಶ್ ಮತ್ತು ಅವರ ಆಪ್ತ ಕಾರ್ಯದರ್ಶಿಗಳಾಗಿದ್ದ ಎ ಆರ್ ರವಿ ಅವರ ವ್ಯವಸ್ಥಿತ ಪಿತೂರಿಯಿಂದಾಗ ಹಿಂಬಡ್ತಿ ಮಾಡಿ ನಿಯಮಗಳಲ್ಲಿ ವೇತನ ಸಂರಕ್ಷಣೆಗೆ ಅವಕಾಶವಿದ್ದರೂ ಹಿಂಬಡ್ತಿ ಆದೇಶದಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಶ್ರೀ ಮಹಂತಯ್ಯ ಹೊಸಮಠ ಅವರು ಹಿಂಬಡ್ತಿ ಮಾಡಿದ್ದಲ್ಲದೆ, ಹೆಚ್ಚುವರಿ ವೇತನ ಕಟಾಯಿಸುವಂತೆ ಆದೇಶ ಮಾಡಿದ್ದರ ಪ್ರತಿಫಲವಾಗಿ ಹೊನ್ನಾಳಿ BEO ರವರಾದ ನಂಜರಾಜ ಅವರು ಸರಿಯಾದ ಸಮಯಕ್ಕೆ ಅಂತಿಮ ವೇತನ ಪ್ರಮಾಣ ಪತ್ರ, ಸೇವಾವಹಿಯನ್ನು ಕಳುಹಿಸದೆ ಕಳೆದ 6 ತಿಂಗಳಿಂದ ವೇತನ ಆಗದೆ ನರಕಯಾತನೆ ಅನುಭವಿಸಿದ್ದೇನೆ ಮತ್ತು ನನ್ನ ಇಡೀ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ ನನ್ನ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿ 6 ತಿಂಗಳಕಾಲ ಕಳೆದಾಯಿತು ಆದರೂ ಯಾವುದೇ ಪರಿಹಾರ ಸಿಗದೆ ಪ್ರಯತ್ನಗಳೆಲ್ಲ ವಿಫಲವಾಗಿದ್ದು ಅತ್ಯಂತ ನೋವಿನ ಸಂಗತಿ .ಈ ಘಟನೆಗೆ ಕಾರಣರಾದವರು ಚೆನ್ನಾಗಿರಲಿ......ನಾನು ಈ ಸಮಸ್ಯೆಯನ್ನು ನಿಭಾಯಿಸುವಲ್ಲಿ ಮಾನಸಿಕವಾಗಿ ವಿಫಲನಾಗಿರುವ ಪ್ರಯುಕ್ತ ನಾನು ಬದುಕಿಗೆ ವಿಧಾಯ ಹೇಳಲು ಬಯಸಿದ್ದೇನೆ..... ನನ್ನ ನಿರ್ಧಾರಕ್ಕೆ ಮೇಲ್ಕಾಣಿಸಿದ ವ್ಯಕ್ತಿಗಳೇ ನೇರ ಕಾರಣರಾಗಿರುತ್ತಾರೆ ............ನನ್ನ ಈ ನನ್ನ ಕುಟುಂಬದ ಹೊಣೆಗಾರಿಕೆ ಇಡೀ NPS ನೌಕರ ಸಂಘಟನೆಯದ್ದು ದಯವಿಟ್ಟು ನನ್ನ ಕುಟುಂಬಕ್ಕೆ ಸಹಾಯ ಸಹಕಾರ ಮಾಡಿ......

ಇಂತಿ ನಿಮ್ಮ ನತದೃಷ್ಟ NPS ನೌಕರ

ಇವತ್ತು ಬೆಳಗ್ಗಿನ ಜಾವ ವಾಟ್ಸ್ಯಾಪ್​ ಗ್ರೂಪ್​ನಲ್ಲಿ ಮೆಸೇಜ್​ ಮಾಡಿದ್ದ ಪ್ರಭಾಕರ್​,  ಆನಂತರ, ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಅಷ್ಟೊತ್ತಿಗೆ ಮೆಸೇಜ್​ಗಳನ್ನ ನೋಡಿದವರು, ಪ್ರಭಾಕರ್​​ನ್ನ ಸಂಪರ್ಕಿಸುವ ಪ್ರಯತ್ನವನ್ನು ಸಹ ಮಾಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಬಳಿಕ ಎಂಟು ಗಂಟೆಯ ಸುಮಾರಿಗೆ ಮತ್ತೊಂದು ಮೆಸೇಜ್​ ರವಾನೆಯಾಗಿದ್ದು ಆನಂತರ ಪುನಃ ಮೊಬೈಲ್ ಸ್ವಿಚ್​ ಆಫ್​ ಆಗಿದೆ. ಇನ್ನೂ ವಿಷಯ ತಿಳಿದು ಸರ್ಕಾರಿ ನೌಕರರು ಹಾಗು ಸ್ನೇಹಿತರು, ಪ್ರಭಾಕರ್​ರವರ ಮನೆಗೆ ಬಂದು ವಿಚಾರಿಸಿದ್ದಾರೆ. ಅಲ್ಲದೆ ಅವರು ಕೆಲಸ ಮಾಡುವ ಜಾಗದಲ್ಲಿಯು ವಿಚಾರಿಸಿದ್ದಾರೆ. ಎಲ್ಲಿಯು ಪತ್ತೆಯಾಗದ ಹಿನ್ನೆಲೆ ಪೊಲೀಸರ ಮೊರೆಹೋಗಿದ್ದಾರೆ. 

ಪ್ರಭಾಕರ್​ರವರ ಹಿನ್ನೆಲೆ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿಯ ಕೊಕ್ಕೋಡುವಿನಲ್ಲಿ ಟೀಚರ್ ಆಗಿದ್ದ ಪ್ರಭಾಕರ್, ಅಲ್ಲಿಂದ ಶೆಟ್ಟಿಹಳ್ಳಿಯಲ್ಲಿ ಸಿಆರ್​ಪಿಯಾಗಿ ಕಾರ್ಯನಿರ್ವಹಿಸಿದ್ದರು. ಆನಂತರ ಅವರು ಎಫ್​ಡಿಎ ಆಗಿ ಹೊನ್ನಾಳಿ ಬಿಒ ಆಫೀಸ್​ನಲ್ಲಿ ಕಾರ್ಯನಿರ್ವಹಿಸಿದ್ದರು. ಟೀಚರ್ ಆಗಿದ್ದವರು ಎಫ್​ಡಿಎ ಆಗಿ ಬದಲಾವಣೆ ಪಡೆದಿದ್ದರ ಸಂಬಂಧ ಕೆಲವು ಆಕ್ಷೇಪಣೆ ಸಲ್ಲಿಸಿದ್ದರು. ಅಲ್ಲದೆ ಇದರ ನಡುವೆ ಅವರನ್ನು ಹಿರಿಯೂರು ತಾಲ್ಲೂಕಿನ ಸರ್ಕಾರಿ ಪ್ರೌಡಶಾಲೆಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಪ್ರಭಾಕರ್ ಕೋರ್ಟ್​ ಮೊರೆಹೋಗಿ, ವರ್ಗಾವಣೆಗೆ ಸ್ಟೇ ತಂದಿದ್ದರು. ಇದರ ಬೆನ್ನಲ್ಲೆ ಅವರನ್ನು ಎಸ್​ಡಿಎ ಆಗಿ ಡಿಮೋಷನ್​ಗೊಳಿಸಿ, ಹೊಸನಗರದ ಮಾರುತಿಪುರಕ್ಕೆ ವರ್ಗಾವಣೆ ಮಾಡಲಾಗಿತ್ತು. ಅಲ್ಲಿಗೆ ವರ್ಗಾವಣೆಗೊಳ್ಳದ ಪ್ರಭಾಕರ್, ತಮ್ಮ ವಿರುದ್ಧದ ನಿರ್ಣಯದ ವಿರುದ್ಧ ಹೋರಾಟಕ್ಕೆ ಇಳಿದಿದ್ದರು. ನಿನ್ನೆ ಈ ಸಂಬಂಧ ಸರ್ಕಾರದಿಂದ ಪತ್ರವೊಂದು ಬಂದಿದೆ ಎನ್ನಲಾಗುತ್ತಿದ್ದು, ಆನಂತರ ಪ್ರಭಾಕರ್​ ರವರು ಅಪ್​ಸೆಟ್ ಆಗಿದ್ದರು ಎಂದು ಹೇಳಲಾಗುತ್ತಿದೆ. 

ಶಿವಮೊಗ್ಗ ನಗರದ ಐಬಿ ಸರ್ಕಲ್​ ಬಳಿ ರಾತ್ರಿ ಭೀಕರ ಅಪಘಾತ! ಡಿವೈಡರ್​ಗೆ ಕಾರು ಡಿಕ್ಕಿ

ಮಲ್ನಾಡ್​ನ ಕಾಡು ಮನೆಯ ಸಮಸ್ಯೆಗಳ ಬಗ್ಗೆ ಬೆಂಗಳೂರಿನಲ್ಲಿ ಬಿಗಿ ಚರ್ಚೆ! ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆಯಲ್ಲಿ ಏನೇಲ್ಲಾ ತೀರ್ಮಾನವಾಯ್ತು ಗೊತ್ತಾ?

ತೀರ್ಥಹಳ್ಳಿ ರಾಷ್ಟ್ರೀಯ ಹೆದ್ಧಾರಿ 169 ನಲ್ಲಿ ಭೀಕರ ಅಪಘಾತ! ನಿಂತಿದ್ದ ಕ್ಯಾಂಟರ್​ಗೆ ಒಮಿನಿ ಡಿಕ್ಕಿ

ಜಸ್ಟ್ ಅನುಮಾನದಿಂದ ಸಿಕ್ಕಿಬಿದ್ದ ದರೋಡೆ ಕೇಸ್​ನಲ್ಲಿ ಬೇಕಾಗಿದ್ದ ಆರೋಪಿ! ದೊಡ್ಡಪೇಟೆ ಪಿಸಿ ಕೆಲಸಕ್ಕೆ ವ್ಯಕ್ತವಾಗ್ತಿದೆ ಶ್ಲಾಘನೆ! ಏನಿದು ಕೇಸ್​?