ಡಿಸಿ ಆಫೀಸ್​ ಮುಂದೆ ಪ್ರತಿಭಟನೆ ವೇಳೆ ಅಜಾನ್​ ಕೂಗು! ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು?

Azaan shouts during protest in front of DC's office What did Shivamogga SP Mithun Kumar say?

ಡಿಸಿ ಆಫೀಸ್​ ಮುಂದೆ ಪ್ರತಿಭಟನೆ ವೇಳೆ ಅಜಾನ್​ ಕೂಗು! ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು?

MALENADUTODAY.COM  |SHIVAMOGGA| #KANNADANEWSWEB

ಕಳೆದ 17 ರಂದು ಶಿವಮೊಗ್ಗದ ಶಿವಮೊಗ್ಗ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸ್ತಿದ್ದ ಸಂದರ್ಭದಲ್ಲಿ ಯುವಕನೊಬ್ಬ ಆಜಾನ್ ಕೂಗಿದ ಪ್ರಕರಣ ಸಂಬಂಧ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ಮಾಧ್ಯಮ ಸಂದೇಶ ರವಾನಿಸಿರುವ ಅವರು, ಘಟನೆ ಸಂಬಂಧ ಅಜಾನ್​ ಕೂಗಿದ ಯುವಕನನ್ನ ಕರೆದು ಎಚ್ಚರಿಕೆ ನೀಡಲಾಗಿದೆ ಹಾಗೂ ಈ ಸಂಬಂಧ ಕೇಸ್​ವೊಂದನ್ನ ದಾಖಲಿಸಲಾಗಿದೆ ಎಂದಿದ್ದಾರೆ. ಅವರು ರವಾನಿಸಿರುವ ಸಂದೇಶ ಇಲ್ಲಿದೆ 

"ದಿನಾಂಕ 17-03-2023 ರಂದು ವ್ಯಕ್ತಿಯೊಬ್ಬನು  ಶಿವಮೊಗ್ಗ ನಗರದ ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ನಿಂತು  ಆಜಾನ್ ಕೂಗಿದ ಘಟನೆಗೆ ಸಂಬಂಧಿಸಿದಂತೆ,  ಆ ವ್ಯಕ್ತಿಯನ್ನು ಕರೆದು ಈ ರೀತಿ ಮಾಡದಂತೆ  ಎಚ್ಚರಿಕೆ ನೀಡಿ ಕಳುಹಿಸಿ ಮುಂಜಾಗ್ರತ  ಪ್ರಕರಣವನ್ನು ದಾಖಲಿಸಲಾಗಿರುತ್ತದೆ. ಹಾಗೂ  ಘಟನೆ ನಡೆದ ಸಮಯದಲ್ಲಿ ಹಾಜರಿದ್ದ ವ್ಯಕ್ತಿಗಳ, ಪೂರ್ವಪರದ ಮಾಹಿತಿಯನ್ನು ಕಲೆಹಾಕಲಾಗುತ್ತಿದ್ದು, ಸದರಿ ಮಾಹಿತಿಯ ಆಧಾರದ ಮೇಲೆ ಅವರುಗಳ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು.."

ಮಾಜಿ ಸಚಿವ ಕೆ.ಎಸ್​. ಈಶ್ವರಪ್ಪನವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಜಾನ್ ಕುರಿತು ನೀಡಿದ ಹೇಳಿಕೆ  ಸಂಬಂಧ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಮುಸ್ಲಿಮ್​ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಕಳೆದ 17 ರಂದು ನಡೆದಿದ್ದ ಪ್ರತಿಭಟನೆ ವೇಳೆ ಯುವಕನೊಬ್ಬ ಅಜಾನ್​ ಕೂಗಿದ್ದಾನೆ. ಸದ್ಯ ಈ ವಿಡಿಯೋ ಹರಿದಾಡುತ್ತಿದ್ದು ಈ ಬಗ್ಗೆ ವರದಿಗಳು ಪ್ರಕಟವಾಗಿದ್ದವು. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. 

ಪೆಟ್ರೋಲ್​ ಬಂಕ್​ ಪಕ್ಕದಲ್ಲಿಯೇ ಅಡ್ಡಬಿದ್ದ ಸಿಲಿಂಡರ್ ಲಾರಿ! ತೀರ್ಥಹಳ್ಳಿ ಹೆದ್ದಾರಿಯಲ್ಲಿ ಪಲ್ಟಿಯಾದ ಭತ್ತ ಸಾಗಿಸ್ತಿದ್ದ ಲಾರಿ! ಒಂದೇ ರಾತ್ರಿ ಆತಂಕ ಮೂಡಿಸಿದ ಘಟನೆಗಳು

 ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga