ಪೆಟ್ರೋಲ್​ ಬಂಕ್​ ಪಕ್ಕದಲ್ಲಿಯೇ ಅಡ್ಡಬಿದ್ದ ಸಿಲಿಂಡರ್ ಲಾರಿ! ತೀರ್ಥಹಳ್ಳಿ ಹೆದ್ದಾರಿಯಲ್ಲಿ ಪಲ್ಟಿಯಾದ ಭತ್ತ ಸಾಗಿಸ್ತಿದ್ದ ಲಾರಿ! ಒಂದೇ ರಾತ್ರಿ ಆತಂಕ ಮೂಡಿಸಿದ ಘಟನೆಗಳು

Malenadu Today

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗದಲ್ಲಿ  ಲಾರಿಗಳು ಪಲ್ಟಿಯಾದ ಎರಡು ಘಟನೆಗಳು ನಿನ್ನೆ ರಾತ್ರಿ ನಡೆದಿವೆ. ಮೊದಲ ಘಟನೆ ಶಿವಮೊಗ್ಗದ ವಡ್ಡಿನಕೊಪ್ಪದಲ್ಲಿ ನಡೆದಿದ್ದು, ಅಲ್ಲಿ ಪೆಟ್ರೋಲ್ ಬಂಕ್ ಪಕ್ಕದಲ್ಲಿಯೇ ಸಿಲಿಂಡರ್ ಲಾರಿಯೊಂದು (Cylinder lorry overturns) ಪಲ್ಟಿಯಾಗಿತ್ತು. 

ಮಾಚೇನಹಳ್ಳಿಯಿಂದ ಎನ್​ಆರ್​ ಪುರ ರೋಡ್​ನಲ್ಲಿ (N R Pura road) ಮಂಗಳೂರು ಕಡೆಗೆ ಸಾಗುತ್ತಿದ್ದ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ ಪೆಟ್ರೋಲ್​ ಬಂಕ್​ ವೊಂದರಲ್ಲಿ ಪಕ್ಕದಲ್ಲಿಯೇ ಪಲ್ಟಿಯಾಗಿತ್ತು. ಘಟನೆಗೆ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲವಾದರೂ, ಚಾಲಕನ ನಿಯಂತ್ರಣ ತಪ್ಪಿ ಸಿಲಿಂಡರ್ ಲಾರಿ ಪಲ್ಟಿಯಾಗಿದೆ. ಅಲ್ಲದೆ ಅಲ್ಲಿಯೇ ಇದ್ದ ಕರೆಂಟ್ ಕಂಬಕ್ಕೆ ಲಾರಿ ಬಡಿದಿದೆ. ಇನ್ನೂ ಘಟನೆಯಲ್ಲಿ ಸಿಲಿಂಡೆರ್​ಗಳೆಲ್ಲಾ ಲಾರಿಯಿಂದ ಒಮ್ಮೆಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಪೆಟ್ರೋಲ್ ಬಂಕ್  ಒಂದು ಕಡೆ, ಇನ್ನೊಂದು ಕಡೆ ಕರೆಂಟ್ ಲೈನ್ ಇತ್ತ ಗ್ಯಾಸ್ ಸಿಲಿಂಡರ್ ಪಲ್ಟಿಯಾಗಿ ಚೆಲ್ಲಾಪಿಲ್ಲಿಯಾಗಿದ್ದನ್ನ ಕಂಡ ಜನರು ಆತಂಕಗೊಂಡಿದ್ದರು. ಆದರೆ ಅದೃಷ್ಟಕ್ಕೆ ಯಾವುದೇ ಅಪಾಯ ಸಂಭವಿಸಿಲ್ಲ. ಲಾರಿ ಪಲ್ಟಿಯಾಗಿದ್ದರಿಂದ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆಯಾಗಿತ್ತು. ಇನ್ನೂ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳೀಯರ ಸಹಾಯದಿಂದ ಲಾರಿಯನ್ನ ಬದಿಗೆ ಸರಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. 

Malenadu Today

ತೀರ್ಥಹಳ್ಳಿ ಹೆದ್ದಾರಿಯಲ್ಲಿ ಲಾರಿ ಪಲ್ಟಿ!

ಇನ್ನೊಂದೆಡೆ ಶಿವಮೊಗ್ಗ- ತೀರ್ಥಹಳ್ಳಿ ಹೆದ್ದಾರಿಯಲ್ಲಿ (Shimoga-Thirthahalli highway)ನಿನ್ನೆ ರಾತ್ರಿ ಲಾರಿಯೊಂದು ಪಲ್ಟಿಯಾಗಿತ್ತು. ಇಲ್ಲಿನ ಸಕ್ರೆಬೈಲ್ ಸಮೀಪ ತೀರ್ಥಹಳ್ಳಿ ಕಡೆಯಿಂದ ಶಿವಮೊಗ್ಗಕ್ಕೆ ಬರ್ತಿದ್ದ ಭತ್ತ ತುಂಬಿದ್ದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಭತ್ತದ ಚೀಲಗಳು ಕೆಳಕ್ಕೆ ಬಿದ್ದಿದ್ದವು. ಇನ್ನೂ ಸ್ಥಳಕ್ಕೆ ಬಂದ ಸ್ಥಳೀಯರು ಚಾಲಕನ ನೆರವಿಗೆ ದೌಡಾಯಿಸಿದ್ದರು. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga , Cylinder lorry overturns, petrol pump, N R Pura road, Vaddinakoppa, lorry going to Mangaluru, Shimoga-Thirthahalli highway, incident near Sakrebail, lorry overturns, firemen, police, electric pole, electricity line, lorry accident, Shimoga accident news, Shimoga First News, ಸಿಲಿಂಡರ್ ಲಾರಿ ಪಲ್ಟಿ, ಪೆಟ್ರೋಲ್ ಬಂಕ್, ಎನ್​ಆರ್​ಪುರ ರಸ್ತೆ, ವಡ್ಡಿನಕೊಪ್ಪ, ಮಂಗಳೂರಿಗೆ ಹೋಗುತ್ತಿದ್ದ ಲಾರಿ, ಶಿವಮೊಗ್ಗ -ತೀರ್ಥಹಳ್ಳಿ ಹೆದ್ದಾರಿ, ಸಕ್ರೆಬೈಲ್​ ಬಳಿ ಘಟನೆ,  ಲಾರಿ ಪಲ್ಟಿ , ಅಗ್ನಿಶಾಮಕ ಸಿಬ್ಬಂದಿ , ಪೊಲೀಸರು, ಕರೆಂಟ್ ಕಂಬ, ವಿದ್ಯುತ್ ಲೈನ್, ಲಾರಿ ಅಪಘಾತ, ಶಿವಮೊಗ್ಗ ಆಕ್ಸಿಡೆಂಟ್ ನ್ಯೂಸ್, ಶಿವಮೊಗ್ಗ ಫಸ್ಟ್​ ಸುದ್ದಿ , 

Share This Article