ತೀರ್ಥಹಳ್ಳಿ ರಾಷ್ಟ್ರೀಯ ಹೆದ್ಧಾರಿ 169 ನಲ್ಲಿ ಭೀಕರ ಅಪಘಾತ! ನಿಂತಿದ್ದ ಕ್ಯಾಂಟರ್​ಗೆ ಒಮಿನಿ ಡಿಕ್ಕಿ

ತೀರ್ಥಹಳ್ಳಿ ರಾಷ್ಟ್ರೀಯ ಹೆದ್ಧಾರಿ 169 ರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ರಸ್ತೆ ಬದಿಯಲ್ಲಿ ನಿಂತಿದ್ದ ಕ್ಯಾಂಟರ್​ಗೆ ಒಮಿನಿ ಡಿಕ್ಕಿThe fatal accident took place at Theerthahalli National Highway 169 when omini collided with a canter parked on the side of the road.

ತೀರ್ಥಹಳ್ಳಿ ರಾಷ್ಟ್ರೀಯ ಹೆದ್ಧಾರಿ 169 ನಲ್ಲಿ ಭೀಕರ ಅಪಘಾತ! ನಿಂತಿದ್ದ ಕ್ಯಾಂಟರ್​ಗೆ ಒಮಿನಿ ಡಿಕ್ಕಿ

KARNATAKA NEWS/ ONLINE / Malenadu today/ Jul 19, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಮೇಲಿನ ಕುರುವಳ್ಳಿ ಸಮೀಪ, ನಿಂತಿದ್ದ ಕ್ಯಾಂಟರ್​ ಒಂದಕ್ಕೆ ಒಮಿನಿಯೊಂದು ಡಿಕ್ಕಿಯಾಗಿದೆ.   ರಾಷ್ಟ್ರೀಯ ಹೆದ್ದಾರಿ 169 ರ ತೀರ್ಥಹಳ್ಳಿ -ಕೊಪ್ಪ ಶೃಂಗೇರಿಯ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ.  ಕುಂಬಾರದಡಿಗೆ ಬಳಿ ರಸ್ತೆ ಬದಿಯಲ್ಲಿ  ಕ್ಯಾಂಟರ್ ವೊಂದು ನಿಂತಿತ್ತು . ಈ ವೇಳೆ  ಅತೀ ವೇಗದಲ್ಲಿ ಇದ್ದ ಓಮಿನಿ ಕಾರು ಕ್ಯಾಂಟರ್ ಗೆ ಗುದ್ದಿದೆ. ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಘಟನೆಯಲ್ಲಿ ಕಾರಿನ ಚಾಲಕನ ಸ್ಥಿತಿ ಗಂಭೀರವಾಗಿದ್ದು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.  


ಜಸ್ಟ್ ಅನುಮಾನದಿಂದ ಸಿಕ್ಕಿಬಿದ್ದ ದರೋಡೆ ಕೇಸ್​ನಲ್ಲಿ ಬೇಕಾಗಿದ್ದ ಆರೋಪಿ! ದೊಡ್ಡಪೇಟೆ ಪಿಸಿ ಕೆಲಸಕ್ಕೆ ವ್ಯಕ್ತವಾಗ್ತಿದೆ ಶ್ಲಾಘನೆ! ಏನಿದು ಕೇಸ್​?

ಪಬ್ಲಿಕ್ ಪ್ಲೇಸ್​ಗಳಲ್ಲಿ ಅನುಮಾನಸ್ಪದವಾಗಿ ಓಡಾಡುವ ಅಥವಾ ಸಾರ್ವಜನಿಕರಿಗೆ ತೊಂದರೆ ಕೊಡುವಂತಹ ವ್ಯಕ್ತಿಗಳ ಮೇಲೆ ಪೊಲೀಸರು ಒಂದು ಕಣ್ಣಿಟ್ಟಿರುತ್ತಾರೆ. ಏಕೆಂದರೆ ಅವರ ಹಿನ್ನೆಲೆಯಲ್ಲಿಯೋ ಮುನ್ನಲೆಯಲ್ಲಿಯೋ ಅಪರಾಧದ ಸುಳಿವು ಪೊಲೀಸರಿಗೆ ಕಾಣಸಿಗುತ್ತದೆಸದ್ಯ ಶಿವಮೊಗ್ಗ ಪೊಲೀಸರಿಗೂ ಅಂತಹದ್ದೊಂದು ಸುಳಿವು ಸಿಕ್ಕಿದ್ದಷ್ಟೆ ಅಲ್ಲದೆ, ದರೋಡೆ ಕೇಸ್​ನಲ್ಲಿ ಬೇಕಾಗಿದ್ದ ಆರೋಪಿಯೊಬ್ಬ ಸಿಕ್ಕಿಬಿದ್ದಿದ್ದಾನೆ.  

ಏನಿದು ಪ್ರಕರಣ

ಕಳೆದ 17-07-2023 ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನ ಕಾನ್​ಸ್ಟೇಬಲ್ ಗಂಗಪ್ಪ ತುಂಗಲ್, ರಾತ್ರಿ ಗಸ್ತು ತಿರುಗುತ್ತಿದ್ರು. ಈ ವೇಳೆ , ಅನುಮಾನಸ್ಪದ ವ್ಯಕ್ತಿಯೊಬ್ಬನ ಗುರುತು ಪತ್ತೆಗೆ ಮುಂದಾಗಿದ್ದಾರೆ. ಇದಕ್ಕಾಗಿ, MCCTNS (Mobile Crime Criminal Tracking Network System) ತಂತ್ರಾಂಶದ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನಲ್ಲಿ ವ್ಯಕ್ತಿಯೊಬ್ಬನ ಫಿಂಗರ್ ಪ್ರಿಂಟ್ ಪರಿಶೀಲಿಸಿದ್ಧಾರೆ. ಆಗ ಅನುಮಾನಸ್ಪದ ವ್ಯಕ್ತಿ ದರೋಡೆ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿ ಎಂಬುದು ಗೊತ್ತಾಗಿದೆ. ತಕ್ಷಣವೇ ಅಲರ್ಟ್ ಆ ಪೇದೆ, ಆತನನ್ನು ಸ್ಟೇಷನ್​ಗೆ ಕರೆತಂದಿದ್ದಾರೆ. 

ಆನಂತರ ವ್ಯಕ್ತಿಯ ಪೂರ್ವಾಪರವನ್ನು ಪರಿಶಿಲಿಸಿದಾಗ, ಸಿಕ್ಕಿಬಿದ್ದಿದ್ದ ಆರೋಪಿ ನವೀನ್​ ನಾಯ್ಕ್  ದರೋಡೆ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಎಂಬುದು ತಿಳಿದುಬಂದಿದೆ. ತಕ್ಷಣ ದೊಡ್ಡಪೇಟೆ ಪೊಲೀಸರು ಆತನನ್ನು ಬಂಧಿಸಿ 18-07-2023  ರಂದು ಕೋರ್ಟ್​ಗೆ ಹಾಜರು ಪಡಿಸಿದೆ. ಇನ್ನೂ ಪೇದೆಯೊಬ್ಬರು ತೋರಿಸಿದ ಸೂಕ್ಷ್ಮತನಕ್ಕೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ಧಾರೆ. 

ಕೆಎಎಸ್​ ಅಧಿಕಾರಿಗಳ ವರ್ಗಾವಣೆ! ಶಿವಮೊಗ್ಗಕ್ಕೆ ಮೂವರು ಆಫಿಸರ್​ ಟ್ರಾನ್ಸಫರ್​! ಯಾವ್ಯಾವ ಸ್ಥಾನಕ್ಕೆ ಯಾರು ಆಯ್ಕೆ! ಇಲ್ಲಿದೆ ಡಿಟೇಲ್ಸ್!

ಶಿವಮೊಗ್ಗದ ಪ್ರಮುಖ ಭಾಗಗಳಲ್ಲಿ ಜುಲೈ 19 ರಂದು ಇಡೀದಿನ ಇರೋದಿಲ್ಲ ಕರೆಂಟ್ ! ಎಲ್ಲೆಲ್ಲಿ? ವಿವರ ಇಲ್ಲಿದೆ

ಪೋಸ್ಟ್ ಆಫೀಸ್​ನಲ್ಲಿ SB ಅಕೌಂಟ್ ಇದೆಯಾ? ಆಧಾರ್ ಲಿಂಕ್ ಮಾಡಿಸಿದ್ದೀರಾ? ಇಲ್ಲದಿದ್ದರೇ ರದ್ದಾಗುತ್ತೆ ಈ ಸೌಲಭ್ಯ! ವಿವರ ಓದಿ!

ಬಿತ್ತಿದ ಜೋಳಕ್ಕಾಗಿ ಹೊಲದಲ್ಲೇ ಹೊಡೆದಾಟ! ಶಿವಮೊಗ್ಗದಲ್ಲಿ ತಾರಕಕ್ಕೇರಿದ ಅನ್ನದಾತರ ಕಾಳಗ! ವಿಡಿಯೋ ಸ್ಟೋರಿ