ಫಾರೆಸ್ಟ್ ಆಫಿಸರ್​ಗಳ ಮೈ ಮುಟ್ಟುವ ಮೊದಲು ಇರಲಿ ಹುಷಾರ್! ಆಗುಂಬೆಯಲ್ಲಿ ತಳ್ಳಾಡಿ ನೂಕಾಡಿದ್ದಕ್ಕೆ ಆದ ಶಿಕ್ಷೆ ಎಷ್ಟುಗೊತ್ತಾ?

ಫಾರೆಸ್ಟ್ ಆಫಿಸರ್ ರನ್ನ ನಿಂದಿಸಿ, ತಳ್ಳಾಡಿ ಬೀಳಿಸಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಆಗುಂಬೆಯ ಇಬ್ಬರಿಗೆ ತೀರ್ಥಹಳ್ಳಿ ಕೋರ್ಟ್ 3 ವರ್ಷ ಶಿಕ್ಷೆ ವಿಧಿಸಿದೆ. The Thirthahalli court has sentenced two persons from Agumbe to three years in jail for abusing, pushing and obstructing government work by abusing a forest officer.

ಫಾರೆಸ್ಟ್ ಆಫಿಸರ್​ಗಳ ಮೈ ಮುಟ್ಟುವ ಮೊದಲು ಇರಲಿ ಹುಷಾರ್! ಆಗುಂಬೆಯಲ್ಲಿ ತಳ್ಳಾಡಿ ನೂಕಾಡಿದ್ದಕ್ಕೆ  ಆದ ಶಿಕ್ಷೆ ಎಷ್ಟುಗೊತ್ತಾ?

KARNATAKA NEWS/ ONLINE / Malenadu today/ Jul 19, 2023 SHIVAMOGGA NEWS 

ಅರಣ್ಯ ಅಧಿಕಾರಿಗಳ ಕೆಲಸಕ್ಕೆ ಅಡ್ಡಬಂದು, ಅವರನ್ನ ತಳ್ಳಾಡಿ ನೂಕಾಡಿದ ಪ್ರಕರಣ ಸಂಬಂಧ ಕೋರ್ಟ್​ವೊಂದು ಆರೋಪಿಗಳಿಗೆ 3 ವರ್ಷ ಶಿಕ್ಷೆ ವಿಧಿಸಿದೆ. 

ಏನಿದು ಪ್ರಕರಣ?

ದಿನಾಂಕಃ 28/01/2021 ರಂದು ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯಿದು. ಇಲ್ಲಿನ ಆಲಗೇರಿ ಗ್ರಾಮದಲ್ಲಿ ಭದ್ರಪ್ಪ ಮತ್ತು ರಕ್ಷಿತ್ ಅರಣ್ಯ ಜಾಗವನ್ನು ಒತ್ತುವರಿ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಆಗುಂಬೆ ವಲಯದ ಉಪವಲಯ ಅರಣ್ಯಾಧಿಕಾರಿಯಾದ  ಕಿರಣ ಕುಮಾರ್ ಮತ್ತು ಅರಣ್ಯ ರಕ್ಷಕರಾದ  ಅಭಿಷೇಕ್ ಕಾವಡಿ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಅವರನ್ನ ಭದ್ರಪ್ಪ ಮತ್ತು ರಕ್ಷಿತ್ ರನ್ನ ಅವಾಚ್ಯ ಶಬ್ದಗಳಿಂದ ಬೈದು ದೂಡಿ ಬೀಳಿಸಿದ್ದರು ಎಂದು ದೂರಲಾಗಿತ್ತು. ಈ ಸಂಬಂಧ ಐಪಿಸಿ 341, 504, 332, 353 ಸಹಿತ 34 ಅಡಿಯಲ್ಲಿ ಕೇಸ್​ ದಾಖಲಾಗಿತ್ತು. 

ಇದೇ ಪ್ರಕರಣದ ಸಂಬಂಧ ಅಂದಿನ ಆಗುಂಬೆ ಪಿಎಸ್​ಐ ಶಿವಕುಮಾರ್ ಕೋರ್ಟ್​ಗೆ ಚಾರ್ಜ್​ ಶೀಟ್​ ಸಲ್ಲಿಸಿದ್ದರು, ಕೋರ್ಟ್​ನಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಪ್ರೇಮಲೀಲಾ ರವರು ವಾದ ಮಂಡಿಸಿದ್ದರು. ಇದೀಗ ಹಿರಿಯ ವ್ಯವಹಾರ ಮತ್ತು ಜೆಎಂ ಎಫ್ ಸಿ ನ್ಯಾಯಾಲಯ ತೀರ್ಥಹಳ್ಳಿ  ಪ್ರಕರಣದ ತೀರ್ಪು ನೀಡಿದೆ. 

ಆರೋಪಿತರಾದ  1)ಭದ್ರಪ್ಪ, 57 ವರ್ಷ, ಅಲಗೇರಿ ಗ್ರಾಮ ಆಗುಂಬೆ ಮತ್ತು 2) ರಕ್ಷಿತ್, 30 ವರ್ಷ, ಅಲಗೇರಿ ಗ್ರಾಮ ಆಗುಂಬೆ ರವರ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ ಆರೋಪಿತರಿಗೆ 03 ವರ್ಷ ಕಠಿಣ ಕಾರಾಗೃಹವಾಸ ಶಿಕ್ಷೆ, ರೂ 19,000/- ದಂಡ, ದಂಡಕಟ್ಟಲು ವಿಫಲರಾದಲ್ಲಿ 01 ವರ್ಷ ಸಾದಾ ಕಾರಾಗೃಹವಾಸ ಶಿಕ್ಷೆ ವಿಧಿಸಿದೆ.


ತೀರ್ಥಹಳ್ಳಿ ರಾಷ್ಟ್ರೀಯ ಹೆದ್ಧಾರಿ 169 ನಲ್ಲಿ ಭೀಕರ ಅಪಘಾತ! ನಿಂತಿದ್ದ ಕ್ಯಾಂಟರ್​ಗೆ ಒಮಿನಿ ಡಿಕ್ಕಿ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಮೇಲಿನ ಕುರುವಳ್ಳಿ ಸಮೀಪ, ನಿಂತಿದ್ದ ಕ್ಯಾಂಟರ್​ ಒಂದಕ್ಕೆ ಒಮಿನಿಯೊಂದು ಡಿಕ್ಕಿಯಾಗಿದೆ.   ರಾಷ್ಟ್ರೀಯ ಹೆದ್ದಾರಿ 169 ರ ತೀರ್ಥಹಳ್ಳಿ -ಕೊಪ್ಪ ಶೃಂಗೇರಿಯ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ.  ಕುಂಬಾರದಡಿಗೆ ಬಳಿ ರಸ್ತೆ ಬದಿಯಲ್ಲಿ  ಕ್ಯಾಂಟರ್ ವೊಂದು ನಿಂತಿತ್ತು . ಈ ವೇಳೆ  ಅತೀ ವೇಗದಲ್ಲಿ ಇದ್ದ ಓಮಿನಿ ಕಾರು ಕ್ಯಾಂಟರ್ ಗೆ ಗುದ್ದಿದೆ. ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಘಟನೆಯಲ್ಲಿ ಕಾರಿನ ಚಾಲಕನ ಸ್ಥಿತಿ ಗಂಭೀರವಾಗಿದ್ದು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.  


ಜಸ್ಟ್ ಅನುಮಾನದಿಂದ ಸಿಕ್ಕಿಬಿದ್ದ ದರೋಡೆ ಕೇಸ್​ನಲ್ಲಿ ಬೇಕಾಗಿದ್ದ ಆರೋಪಿ! ದೊಡ್ಡಪೇಟೆ ಪಿಸಿ ಕೆಲಸಕ್ಕೆ ವ್ಯಕ್ತವಾಗ್ತಿದೆ ಶ್ಲಾಘನೆ! ಏನಿದು ಕೇಸ್​?