ಬಾಳೆಬೈಲ್ ನಲ್ಲಿ ಬುಲೆಟ್ -ಕಾರು ಡಿಕ್ಕಿ! ಅರಣ್ಯ ಇಲಾಖೆ ಸಿಬ್ಬಂದಿ ಸಾವು! ಎಂತಹ ಘಟನೆ ಆಯ್ತು!?
Bullet-car collision in Balebile! Forest department personnel died! ಬಾಳೆಬೈಲ್ ನಲ್ಲಿ ಬುಲೆಟ್ -ಕಾರು ಡಿಕ್ಕಿ! ಅರಣ್ಯ ಇಲಾಖೆ ಸಿಬ್ಬಂದಿ ಸಾವು!

KARNATAKA NEWS/ ONLINE / Malenadu today/ Nov 13, 2023 SHIVAMOGGA NEWS
Shivamogga | ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಬಾಳೆಬೈಲ್ನಲ್ಲಿ ನಿನ್ನೆ ಭೀಕರ ಅಪಘಾತವೊಂದು ಸಂಭವಿಸಿದೆ. ವಿಷಯ ಅಂದರೆ, ಈ ಘಟನೆಯಲ್ಲಿ ಆಗುಂಬೆ ಅರಣ್ಯ ವಲಯದ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ.
ಹೇಗಾಯ್ತು ಘಟನೆ
ಬಾಳೆಬೈಲ್ ಬಳಿಯಲ್ಲಿ ಸಿಗುವ ರಾಕ್ ವೀವ್ಹ್ ಬಾರ್ ಸಮೀಪ ಬುಲೆಟ್ ಹಾಗೂ ಕಾರು ನಡುವೆ ಡಿಕ್ಕಿಯಾಗಿದೆ. ಯಡೂರು ಮೂಲದ ಕಾರೊಂದು ಹಾಗೂ ಆಗುಂಬೆ ಅರಣ್ಯ ಇಲಾಖೆಯ ಸಿಬ್ಬಂದಿ ರಮೇಶ್ ಇದ್ದ ಬುಲೆಟ್ ಬೈಕ್ ಡಿಕ್ಕಿಯಾಗಿದೆ
READ : ಮನೆಯಲ್ಲಿ ಮುಳ್ಳು ಹಂದಿ ಬೇಯುತ್ತಿದ್ದಾಗಲೇ ಬಂದ್ರು ಅರಣ್ಯ ಅಧಿಕಾರಿಗಳು! ಫುಲ್ ಶಾಕ್!
ಪರಿಣಾಮ ನೆಲಕ್ಕೆ ಬಿದ್ದ ರಮೇಶ್ರವರ ತಲೆಗೆ ಗಂಭೀರ ಪೆಟ್ಟಾಗಿತ್ತು. ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿ ಅವರನ್ನ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗುತ್ತಿತ್ತು. ಈ ವೇಳೆ ಮಾರ್ಗಮಧ್ಯೆದಲ್ಲಿಯೇ ಅವರು ಸಾವನ್ನಪ್ಪಿದ್ದಾರೆ.