ಮನೆಯಲ್ಲಿ ಮುಳ್ಳು ಹಂದಿ ಬೇಯುತ್ತಿದ್ದಾಗಲೇ ಬಂದ್ರು ಅರಣ್ಯ ಅಧಿಕಾರಿಗಳು! ಫುಲ್​ ಶಾಕ್!

The forest department officials raided under the charge of collecting porcupine meat ಮುಳ್ಳು ಹಂದಿ ಮಾಂಸ ಸಂಗ್ರಹಿಸಿದ್ದ ಆರೋಪದಡಿ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ

ಮನೆಯಲ್ಲಿ  ಮುಳ್ಳು ಹಂದಿ ಬೇಯುತ್ತಿದ್ದಾಗಲೇ ಬಂದ್ರು ಅರಣ್ಯ ಅಧಿಕಾರಿಗಳು! ಫುಲ್​ ಶಾಕ್!

KARNATAKA NEWS/ ONLINE / Malenadu today/ Nov 12, 2023 SHIVAMOGGA NEWS

Shivamogga |  ಶಿವಮೊಗ್ಗ ಜಿಲ್ಲೆ  ಸಾಗರ ತಾಲೂಕಿನ ಕಲ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಳಿಕೊಪ್ಪ ಗದ್ದೆಮನೆ ಗ್ರಾಮದಲ್ಲಿ ಭಾನುವಾರ ಅರಣ್ಯ ಇಲಾಖೆ ಅಧಿಕಾರಿಗಳು  ಮುಳ್ಳುಹಂದಿ ಯನ್ನು ಬೇಟೆಯಾಡಿ ಮಾಂಸಕ್ಕಾಗಿ ಬಳಕೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರನ್ನು  ಮಾಲುಸಹಿತ ವಶಕ್ಕೆ ಪಡೆಯಲಾಗಿದೆ. 

READ : ರಾಜ್ಯದಲ್ಲಿ ಮೊದಲ ಬಾರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶ ಪಡಿಸಿಕೊಂಡ ಕರಿಮರದ ವಿಶೇಷತೆ ಏನು ಗೊತ್ತಾ?

ಏನಿದು ಕೇಸ್​? 

ಅರಣ್ಯ ಇಲಾಖೆ ಅಧಿಕಾರಿಗಳು ಗಸ್ತಿನಲ್ಲಿದ್ದಾಗ ಗದ್ದಮನೆಯ ಈಶ್ವರ ಅವರ ಮನೆಯನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ, ಮುಳ್ಳುಹಂದಿಯ ಮಾಂಸ ಮತ್ತು ಚರ್ಮ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಶ್ವರ್,

ರಾಘವೇಂದ್ರ, ಪ್ರಭಾಕರ್‌ಮತ್ತು ಶ್ರೀಧರ್‌ ಅವರನ್ನು ಬಂಧಿಸಲಾಗಿದೆ. ಬಂಧಿತರ ವಿರುದ್ದ ವನ್ಯ ಜೀವಿ  ಸಂರಕ್ಷಣಾ ಕಾಯ್ದೆ 9, 44, 49ಬಿ ಮತ್ತು 51ರಡಿ ಪ್ರಕರಣ ದಾಖಲಿಸಲಾಗಿದೆ.