ರಾಜ್ಯದಲ್ಲಿ ಮೊದಲ ಬಾರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶ ಪಡಿಸಿಕೊಂಡ ಕರಿಮರದ ವಿಶೇಷತೆ ಏನು ಗೊತ್ತಾ?

Diospyros ebenum tree seazed in shimogga

ರಾಜ್ಯದಲ್ಲಿ ಮೊದಲ ಬಾರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶ ಪಡಿಸಿಕೊಂಡ ಕರಿಮರದ ವಿಶೇಷತೆ ಏನು ಗೊತ್ತಾ?

ಅದೆಂತಹ ವಿಕಿರಣಗಳಿದ್ರೂ,,, ಈ ಮರವನ್ನು ಭೇದಿಸಲು ಸಾಧ್ಯವಿಲ್ಲ. ಕಳ್ಳಸಾಗಾಣಿಕೆಗೆ ಪ್ಯಾಕಿಂಗ್ ವುಡ್ ಆಗಿ ಬಳಸುವ ಈ ಕರಿಮರವನ್ನು ಬೇಟೆಯಾಡಿದ್ದಾರೆ ಶಿವಮೊಗ್ಗದ ಅರಣ್ಯಾಧಿಕಾರಿಗಳು..ರಾಜ್ಯದಲ್ಲಿ ಮೊದಲ ಬಾರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶ ಪಡಿಸಿಕೊಂಡ ಮರದ ವಿಶೇಷತೆ ಏನು ಗೊತ್ತಾ?

ರಾಜ್ಯದ್ಲಲಿಯೇ ಮೊದಲ ಬಾರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಮಹತ್ವದ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ರಾಜ್ಯದ ಇತಿಹಾಸದಲ್ ಮೊದಲ ಬಾರಿಗೆ ಅಪರೂಪದಲ್ಲಿ ಅಪರೂಪ ಎಂದು ಪರಿಗಣಿಸಿರುವ ಅಳಿವಿನಂಚಿನಲ್ಲಿರುವ ಡಯಾಸ್ ಪೋರಸ್ ಎಬನಮ್ ಎನ್ನುವ ಕರಿಮರಗಳ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

 

ಬೆಂಗಳೂರನಿಂದ ಶಿವಮೊಗ್ಗಕ್ಕೆ ಈ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರಿಗೆ ಶಂಕರ್ ವಲಯದ ಅರಣ್ಯಾಧಿಕಾರಿಗಳ ತಂಡ, ದಾಳಿ ನಡೆಸಿ, ಬೊಲೊರೋ ಪಿಕಪ್ ವಾಹನವನ್ನು ವಶಪಡಿಸಿಕೊಂಡಿದೆ. ದಾಳಿಯಲ್ಲಿ ಒಟ್ಟು 32 ಕರಿ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೊಳೆಹೊನ್ನೂರು ಮಾರ್ಗವಾಗಿ ಶಿವಮೊಗ್ಗಕ್ಕೆ ಬರುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

 

ಶ್ರೀಲಂಕಾ ಇಂಡೋನೇಷಿಯದಲ್ಲಿ ಹೆಚ್ಚಾಗಿ ಕಂಡು ಬರುವ ಈ ಮರಗಳನ್ನು ಬೆಳೆಯುವುದಕ್ಕೆ ಅಲ್ಲಿ ನಿಷೇಧವಿದೆ. ಭಾರತ ದೇಶದಲ್ಲಿ ಕೇರಳದ ಗಡಿಭಾಗದಲ್ಲಿ ಈ ಮರಗಳು ಕಂಡು ಬರುತ್ತವೆ. ಡಯಾಸ್ ಪೋರಸ್ ಎಬನಮ್ ಎನ್ನುವ ಕರಿಮರವನ್ನು ಎಂತಹ ಲೇಸರ್ ಕಿರಣಗಳೂ ಕೂಡ ದಾಟಲು ಸಾಧ್ಯವಿಲ್ಲ. ಈ ಮರದ ಪೀಸ್ ಗಳಿಂದ ಬಾಕ್ಸ್ ಮಾಡಿ ಅದರೊಳಗೆ ಕಾನೂನು ಬಾಹಿರ ಹಾಗು ನಿಷೇಧಿತ ವಸ್ತುಗಳನ್ನು ಸಾಗಿಸಲಾಗುತ್ತದೆ. ಭಯೋತ್ಪಾಧನೆ ಕೃತ್ಯದಲ್ಲಿ ಕೂಡ ಇದನ್ನು ಬಳಸಲಾಗುತ್ತದೆ ಎಂದು ಹೇಳಲಾಗುತ್ತದೆ.

 

ರೋಮನ್ನರು ಯುರೋಪಿಯನ್ನರು ಚೈನಿಯರು ಈ ಮರವನ್ನು ಆಲಂಕಾರಿಕ ವಸ್ತುಗಳಿಗಾಗಿ ಸಿಂಹಾಸನಕ್ಕಾಗಿ ಆಹಾರ ಸಾಮಾಗ್ರಿ ವಸ್ತುಗಳಿಗಾಗಿ ಬಳಸುತ್ತಿದ್ದರು ಎಂಬುದನ್ನು ಇತಿಹಾಸ ಹೇಳುತ್ತದೆ. ಯುರೋಪಿಯನ್ನರಿಗೆ ಕರಿಮರದ ರಪ್ತಿಗೆ ಭಾರತವೇ ಮೂಲಲಾಗಿತ್ತು ಎನ್ನಲಾಗಿದೆ.

 ಈ ಕರಿ ಮರವು ಡ್ರೈ ಎವರ್ ಗ್ರೀನ್ ಫಾರೆನ್ಸ್ ನಿಂದ ಹಿಡಿದು ಎವರ್ ಗ್ರೀನ್ ಫಾರೆಸ್ಟ್ ನಲ್ಲೂ ಬೆಳೆಯ ಬಲ್ಲದು. ಅಂದರೆ ಆಗುಂಬೆಯಂತ ಕಾಡಿನ ಪರಿದಲ್ಲೂ ಬಿಹಾರದಂತ ಒಣ ಪ್ರದೇಶದಲ್ಲೂ ಈ ಮರ ಬೆಳೆಯ ಬಲ್ಲದು. ಚೈನಿಯರು ಛಾಪ್ ಸ್ಟಿಕ್ ಹಾಗು ಔಷಧಿ ರೂಪದಲ್ಲಿ ಈ ಮರವನ್ನು ಭಳಸುತ್ತಿದ್ದರು. ಅಂದರೆ ಶತ ಶತ ಮಾನದಿಂದಲೂ ಕರಿ ಮರ ತನ್ನ ಬೇಡಿಕೆಯನ್ನು ಜೀವಂತವಾಗಿಯೇ ಉಳಿಸಿಕೊಂಡು ಬಂದಿದೆ.

 

ಕಪ್ಪು ಅನ್ನುವ ಬಣ್ಣವನ್ನು ನಾಚಿ ನೀರಾಗುವಂತೆ ಮಾಡುವ ಈ ಮರದ ವಿಶೇಷತೆಯಿಂದಲೇ ಕರಿಮರಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.. ಇಂತಹ ಮರ ಮೊದಲ ಬಾರಿಗೆ ರಾಜ್ಯ ಪ್ರವೇಶಿಸುತ್ತಿದ್ದಂತೆ ಅಲರ್ಟ್ ಆದ ಶಿವಮೊಗ್ಗ ಶಂಕರ್ ವಲಯದ ಅರಣ್ಯಾಧಿಕಾರಿಗಳ ತಂಡ ಹೊಳೆಹೊನ್ನೂರು ರಸ್ತೆಯಲ್ಲಿ ಹೊಂಚು ಹಾಕಿ ವಾಹನ ಸಮೇತ ಕರಿಮರಗಳನ್ನು ವಶಪಡಿಸಿಕೊಂಡಿದೆ. ಪ್ರಕರಣದಲ್ಲಿ ಶಿವಮೊಗ್ಗ ಮೂಲದ ಆರೋಪಿ ಸೈಯದ್ ರೆಹಮಾನ್ ಎಂಬುವನನ್ನು ಬಂಧಿಸಲಾಗಿದೆ.

 

ಕಾರ್ಯಾಚರಣೆಯಲ್ಲಿ ಶಂಕರ್ ವಲಯ ಅರಣ್ಯಾಧಿಕಾರಿ ಸುಧಾಕರ್ ಸೇರಿದಂತೆ ಸಿಬ್ಬಂದಿಗಳ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.